ಆ್ಯಪ್ನಗರ

ಸಿಎಂ ಆಗಿ ನನ್ನ ನೆಚ್ಚಿನ ಆಯ್ಕೆ ಎಚ್ಡಿಕೆ: ಸಚಿವ ಮಹೇಶ್‌

ರಾಜ್ಯದ ಸಮ್ಮಿಶ್ರ ಸರಕಾರದಲ್ಲಿ ಎಚ್‌.ಡಿ.ಕುಮಾರಸ್ವಾಮಿ ಅವರೇ ಐದು ವರ್ಷ ಮುಖ್ಯಮಂತ್ರಿಯಾಗಿರಲಿದ್ದಾರೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎನ್‌. ಮಹೇಶ್‌ ಹೇಳಿದ್ದಾರೆ.

Vijaya Karnataka 1 Sep 2018, 8:02 am
ಚಾಮರಾಜನಗರ: ರಾಜ್ಯದ ಸಮ್ಮಿಶ್ರ ಸರಕಾರದಲ್ಲಿ ಎಚ್‌.ಡಿ.ಕುಮಾರಸ್ವಾಮಿ ಅವರೇ ಐದು ವರ್ಷ ಮುಖ್ಯಮಂತ್ರಿಯಾಗಿರಲಿದ್ದಾರೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎನ್‌. ಮಹೇಶ್‌ ಹೇಳಿದ್ದಾರೆ.
Vijaya Karnataka Web hdk 5 years of cm minister mahesh
ಸಿಎಂ ಆಗಿ ನನ್ನ ನೆಚ್ಚಿನ ಆಯ್ಕೆ ಎಚ್ಡಿಕೆ: ಸಚಿವ ಮಹೇಶ್‌


ಕೊಳೇಗಾಲದಲ್ಲಿ ಶುಕ್ರವಾರ ಸುದ್ದಿಗಾರ ಪ್ರಶ್ನೆಗೆ ಉತ್ತರಿಸಿದ ಅವರು, ''ನನ್ನ ಮುಂದೆ ಕುಮಾರಸ್ವಾಮಿ, ಸಿದ್ದರಾಮಯ್ಯ ಅವರ ಆಯ್ಕೆ ಬಂದರೆ ನಾನು ಕುಮಾರಸ್ವಾಮಿ ಅವರನ್ನು ಬೆಂಬಲಿಸುತ್ತೇನೆ. ನಾನು ಕುಮಾರಸ್ವಾಮಿ ಸರಕಾರದ ಸಚಿವನಾಗಿ ನನ್ನ ಸಂಪೂರ್ಣ ಬೆಂಬಲ ಅವರಿಗೆ ಇದೆ,'' ಎಂದರು.

''ಅಭಿವೃದ್ಧಿ ಯೋಜನೆಗಳ ಬಗ್ಗೆ ಕುಮಾರಸ್ವಾಮಿ ಅವರು ಅಪಾರ ಕನಸು ಇಟ್ಟುಕೊಂಡಿದ್ದಾರೆ. ಅವರಿಗೆ ಈ ರೀತಿಯ ಅಡಚಣೆಗಳನ್ನು ಮಾಡಬಾರದು. ಕಾಂಗ್ರೆಸ್‌ ಶಾಸಕರು ಸಿಎಂ ಎಚ್‌ಡಿಕೆಯವರಿಗೆ ಬೆಂಬಲ ನೀಡಬೇಕು,'' ಎಂದರು.

''ರಾಜ್ಯ ಸರಕಾರದ 100 ದಿನದ ಆಡಳಿತ ಚೆನ್ನಾಗಿ ಇದೆ. ರೈತರ ಸಾಲ ಮನ್ನಾ ಸೇರಿದಂತೆ ಇನ್ನಿತರ ಒಳ್ಳೆಯ ಯೋಜನೆ ಜಾರಿಗೆ ತಂದಿದೆ. ನನಗೆ ನನ್ನ 100 ದಿನದ ಆಡಳಿತ ತೃಪ್ತಿ ತಂದಿದೆ. ನನ್ನ ಕ್ಷೇತ್ರದಲ್ಲಿ ಇನ್ನೂ ಸಾಧನೆ ಮಾಡಬೇಕು, ಮಾಡುತ್ತೇನೆ,'' ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ