ಆ್ಯಪ್ನಗರ

24ಕ್ಕೆ ಹನೂರಲ್ಲಿ ಬೃಹತ್ ಉದ್ಯೋಗ ಮೇಳ

ಮಾನಸ ೌಂಡೇಷನ್ ಹಾಗೂ ಉದ್ಯೋಗದಾತ ಸಂಸ್ಥೆ ಸಹಯೋಗದೊಂದಿಗೆ ಆ.24 ರಂದು ಜಿಲ್ಲೆಯ ಹನೂರು ಪಟ್ಟಣದಲ್ಲಿ ಬಹತ್ ಉದ್ಯೋಗಮೇಳ ಆಯೋಜಿಸಲಾಗಿದೆ ಎಂದು ಕೊಳ್ಳೇಗಾಲ ಮಾನಸ ಶಿಕ್ಷಣ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಎಸ್.ದತ್ತೇಶ್‌ಕುಮಾರ್ ತಿಳಿಸಿದರು.

Vijaya Karnataka 14 Aug 2019, 9:27 pm
ಚಾಮರಾಜನಗರ: ಮಾನಸ ೌಂಡೇಷನ್ ಹಾಗೂ ಉದ್ಯೋಗದಾತ ಸಂಸ್ಥೆ ಸಹಯೋಗದೊಂದಿಗೆ ಆ.24 ರಂದು ಜಿಲ್ಲೆಯ ಹನೂರು ಪಟ್ಟಣದಲ್ಲಿ ಬಹತ್ ಉದ್ಯೋಗಮೇಳ ಆಯೋಜಿಸಲಾಗಿದೆ ಎಂದು ಕೊಳ್ಳೇಗಾಲ ಮಾನಸ ಶಿಕ್ಷಣ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಎಸ್.ದತ್ತೇಶ್‌ಕುಮಾರ್ ತಿಳಿಸಿದರು.
Vijaya Karnataka Web huge job fair for 24th
24ಕ್ಕೆ ಹನೂರಲ್ಲಿ ಬೃಹತ್ ಉದ್ಯೋಗ ಮೇಳ


‘‘ಹನೂರು ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ನಡೆಯುವ ಉದ್ಯೋಗಮೇಳ ವೇದಿಕೆ ಸಮಾರಂಭವನ್ನು ಸಂಸದ ವಿ.ಶ್ರೀನಿವಾಸ್ ಪ್ರಸಾದ್ ಉದ್ಘಾಟಿಸುವರು. ತಿ.ನರಸೀಪುರ ತಾಲೂಕು ವಾಟಾಳ್ ಸೂರ್ಯಸಿಂಹಾಸನ ಮಠದ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಸೇರಿದಂತೆ ಜನಪ್ರತಿನಿಧಿಗಳು ಭಾಗವಹಿಸುವರು,’’ಎಂದು ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

80ಕ್ಕೂ ಹೆಚ್ಚು ಕಂಪನಿ: ಉದ್ಯೋಗಮೇಳದಲ್ಲಿ ಐಸಿಐಸಿಐ ಬ್ಯಾಂಕ್, ಇನ್ಫೋಸಿಸ್, ಡಿಜಿಸೆಲ್, ಮುತ್ತೂಟ್ ೈನಾನ್ಸ್, ಟೆಕ್ ಮಹೇಂದ್ರ, ಎಚ್‌ಡಿಎ್ಸಿ ಬ್ಯಾಂಕ್, ಮೆಡ್‌ಪ್ಲಸ್ ಸೇರಿದಂತೆ 80ಕ್ಕೂ ಹೆಚ್ಚು ಕಂಪನಿಗಳು ಭಾಗವಹಿಸಲಿದ್ದು, ಜಿಲ್ಲೆಯವರಲ್ಲದೇ ನೆರೆಯ ಮೈಸೂರು, ಮಂಡ್ಯ ಜಿಲ್ಲೆ ಸೇರಿ 2500 ಕ್ಕೂ ಹೆಚ್ಚು ಉದ್ಯೋಗಾಕಾಂಕ್ಷಿಗಳು ಭಾಗವಹಿಸುವ ನಿರೀಕ್ಷೆ ಇದೆ. ಎಸ್‌ಎಸ್‌ಎಲ್‌ಸಿ, ಪಿಯುಸಿ, ಐಟಿಐ, ಡಿಪ್ಲೊಮಾ, ಬಿಎ,ಬಿಎಸ್ಸಿ, ಬಿಕಾಂ, ಎಂಎಸ್ಸಿ, ಎಂ.ಕಾಂ, ಬಿಇ ಪದವಿ ಪಡೆದಿರುವ ನಿರುದ್ಯೋಗಿ ಯುವಕ, ಯುವತಿಯರು ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ, ಶೈಕ್ಷಣಿಕ ಅರ್ಹತೆಯ ಮೂಲ ಅಂಕಪಟ್ಟಿ, ವ್ಯಕ್ತಿಪರಿಚಯದ 10 ಜೆರಾಕ್ಸ್ ಪ್ರತಿ, 2 ಪಾಸ್‌ಪೋರ್ಟ್ ಅಳತೆ ಭಾವಚಿತ್ರದೊಂದಿಗೆ ಹಾಜರಾಗಿ ಉದ್ಯೋಗಮೇಳದ ಸದ್ಬಳಕೆ ಮಾಡಿಕೊಳ್ಳಬೇಕು,’’ ಎಂದು ಮನವಿ ಮಾಡಿದರು.

‘‘ದೇಶದಲ್ಲಿ ಪ್ರತಿವರ್ಷ ವಿದ್ಯಾವಂತ ನಿರುದ್ಯೋಗಿಗಳ ಸಂಖ್ಯೆ ಹೆಚ್ಚುತ್ತಿದ್ದು, ಇದು ಆಘಾತಕಾರಿ ಬೆಳವಣಿಗೆಯಾಗಿದೆ. 2017ರ ಏಪ್ರಿಲ್ ವರಗೆ ನಿರುದ್ಯೋಗಿಗಳ ಸಂಖ್ಯೆ 7.6 ರಿಂದ 10.39 ರಷ್ಟಿತ್ತು, 2019ರಲ್ಲಿ ಇದು ಶೇ 13.17ರಷ್ಟು ಹೆಚ್ಚಳವಾಗಿದೆ. ವಿದ್ಯಾವಂತರೇನೂ ಸಾಕಷ್ಟು ಮಂದಿ ಇದ್ದು, ಉದ್ಯೋಗಗಳಿಗೂ ಕೊರತೆಯಿಲ್ಲ. ಕೌಶಲ್ಯಾಧಾರಿತ ತರಬೇತಿ ಪಡೆಯದಿರುವುದು ನಿರುದ್ಯೋಗ ಸಮಸ್ಯೆ ಹೆಚ್ಚಳಕ್ಕೆ ಕಾರಣವಾಗಿದೆ. ಹಾಗಾಗಿ ಮಾನಸೌಂಡೇಷನ್ ವತಿಯಿಂದ ಮುಂದಿನ ದಿನಗಳಲ್ಲಿ ಉದ್ಯೋಗ ಮತ್ತು ಮಾಹಿತಿ ತರಬೇತಿ ಕೇಂದ್ರವನ್ನು ಪ್ರಾರಂಭಿಸಲು ಉದ್ದೇಶಿಸಲಾಗಿದೆ,’’ ಎಂದು ಹೇಳಿದರು.

ಗೋಷ್ಠಿಯಲ್ಲಿ ಉದ್ಯೋಗಮೇಳ ಆಯೋಜಕ ರುಕ್ಮಾಂಗದ, ನಿಸರ್ಗ ಕಾಲೇಜ್ ಆ್ ಮ್ಯಾನೇಜ್‌ಮೆಂಟ್ ಪ್ರಾಂಶುಪಾಲ ಅಶ್ವಥ್ ನಾರಾಯಣ ಹಾಜರಿದ್ದರು

1.50 ಲಕ್ಷ ದೇಣಿಗೆ ಸಂಗ್ರಹ
ಚಾಮರಾಜನಗರ : ರಾಜ್ಯದಲ್ಲಿ ಮಳೆಯ ಪರಿಣಾಮ ಪ್ರವಾಹದಲ್ಲಿ ಆಸ್ತಿ,ಮನೆ ಕಳೆದುಕೊಂಡವರಿಗೆ ಪರಿಹಾರ ನೀಡಲು ಕೊಳ್ಳೇಗಾಲದ ನಿಸರ್ಗ ವಿದ್ಯಾನಿಕೇತನ, ಸ್ವತಂತ್ರ ಪದವಿ ಪೂರ್ವ ಕಾಲೇಜು, ನಿಸರ್ಗ ಬಿಇಡಿ ಕಾಲೇಜು ವತಿಯಿಂದ 1.50ಲಕ್ಷ ರೂ.ದೇಣಿಗೆ ಸಂಗ್ರಹ ಮಾಡಲಾಗಿದೆ.
ಉತ್ತರ ಕರ್ನಾಟಕದ ನೆರೆ ಸಂತ್ರಸ್ತರಿಗೆ 1 ಲಕ್ಷ ರೂ.ಗಳನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಲಾಗುವುದು. ಉಳಿದ 50 ಸಾವಿರ ರೂ.ಗಳನ್ನು ಕೊಳ್ಳೇಗಾಲ ತಾಲೂಕಿನ ನಾನಾ ಗ್ರಾಮಗಳ ನೆರೆ ಸಂತ್ರಸ್ತರಿಗೆ ಅಗತ್ಯ ಮೂಲ ಸೌಕರ್ಯ ಕಲ್ಪಿಸಲು ನೀಡಲಾಗುತ್ತದೆ ಎಂದು ಮಾನಸ ಶಿಕ್ಷಣ ಶಿಕ್ಷಣಸಂಸ್ಥೆ ಕಾರ್ಯದರ್ಶಿ ಎಸ್.ದತ್ತೇಶ್‌ಕುಮಾರ್ ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ