ಆ್ಯಪ್ನಗರ

ಕಾಡಾನೆ ದಾಳಿಯಿಂದ ಮೃತರಾದ ಕುಟುಂಬಕ್ಕೆ ಪರಿಹಾರ ಚೆಕ್

ತಾಲೂಕಿನ ಕಾಳಿಕಾಂಬ ಕಾಲನಿ ಬಳಿ ಈಚೆಗೆ ಆನೆ ದಾಳಿ ಪರಿಣಾಮ ಕುಮಾರ ಎಂಬುವರು ಮೃತಪಟ್ಟಿದ್ದ ಹಿನ್ನೆಲೆಯಲ್ಲಿಮೃತರ ಪತ್ನಿ ಭಾಗ್ಯಮ್ಮ ಅವರಿಗೆ ಅರಣ್ಯ ಇಲಾಖೆಯಿಂದ ಬಿಡುಗಡೆಯಾಗಿರುವ 5 ಲಕ್ಷ ರೂ. ಪರಿಹಾರದ ಚೆಕ್‌ ಅನ್ನು ಶಾಸಕ ಸಿ.ಪುಟ್ಟರಂಗಶೆಟ್ಟಿ ವಿತರಿಸಿದರು.

Vijaya Karnataka 14 Nov 2019, 5:00 am
ಚಾಮರಾಜನಗರ : ತಾಲೂಕಿನ ಕಾಳಿಕಾಂಬ ಕಾಲನಿ ಬಳಿ ಈಚೆಗೆ ಆನೆ ದಾಳಿ ಪರಿಣಾಮ ಕುಮಾರ ಎಂಬುವರು ಮೃತಪಟ್ಟಿದ್ದ ಹಿನ್ನೆಲೆಯಲ್ಲಿಮೃತರ ಪತ್ನಿ ಭಾಗ್ಯಮ್ಮ ಅವರಿಗೆ ಅರಣ್ಯ ಇಲಾಖೆಯಿಂದ ಬಿಡುಗಡೆಯಾಗಿರುವ 5 ಲಕ್ಷ ರೂ. ಪರಿಹಾರದ ಚೆಕ್‌ ಅನ್ನು ಶಾಸಕ ಸಿ.ಪುಟ್ಟರಂಗಶೆಟ್ಟಿ ವಿತರಿಸಿದರು.
Vijaya Karnataka Web kadane daiyinda mrrtarada kutumbakke parihara check
ಕಾಡಾನೆ ದಾಳಿಯಿಂದ ಮೃತರಾದ ಕುಟುಂಬಕ್ಕೆ ಪರಿಹಾರ ಚೆಕ್


ನಗರದ ಪ್ರವಾಸಿ ಮಂದಿರದ ಆವರಣದಲ್ಲಿಬುಧವಾರ ಚೆಕ್‌ ವಿತರಿಸಿ ಮಾತನಾಡಿದ ಅವರು,''ಈ ಹಣವನ್ನು ಸದುಪಯೋಗ ಮಾಡಿಕೊಳ್ಳಬೇಕು. ಮಕ್ಕಳ ಓದು ಮತ್ತು ಜೀವನ ನಿರ್ವಹಣೆಗೆ ಬಳಸಬೇಕು ಯಾವುದೇ ಕಾರಣಕ್ಕೂ ದುರುಪಯೋಗ ಆಗಬಾರದು,'' ಎಂದು ಕಿವಿ ಮಾತು ಹೇಳಿದರು.

ಮೃತ ಕುಮಾರ ಅವರ ಕುಟುಂಬ ಕಡು ಬಡತನದಲ್ಲಿದೆ. ಸಾಧ್ಯವಾದರೆ ಮೃತರ ಪತ್ನಿಗೆ ಅರಣ್ಯ ಇಲಾಖೆಯಿಂದ ಉದ್ಯೋಗ ನೀಡಲು ಪ್ರಮಾಣಿಕವಾಗಿ ಪ್ರಯತ್ನಿಸಿ ಎಂದು ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು. ಈ ಸಂದರ್ಭದಲ್ಲಿಬಿಳಿಗಿರಿರಂಗನ ಬೆಟ್ಟ ಹುಲಿ ಯೋಜನೆ ನಿರ್ದೇಶಕ ಡಾ.ಶಂಕರ್‌, ವಲಯಾರಣ್ಯಾಧಿಕಾರಿ ಶಾಂತಪ್ಪ ಪೂಜಾರ್‌, ಡಿಆರ್‌ಎಫ್‌ಒ ಚಂದ್ರಕುಮಾರ್‌, ಅರಣ್ಯ ಸಂರಕ್ಷಕ ಚಿನ್ನಸ್ವಾಮಿ, ತಾಪಂ ಮಾಜಿ ಅಧ್ಯಕ್ಷ ಆರ್‌.ಮಹದೇವ, ಗ್ರಾಪಂ ಸದಸ್ಯ ಕುಮಾರ್‌, ಕೆ.ಎಂ.ಕೃಷ್ಣಮೂರ್ತಿ, ನಾಗೇಗೌಡ, ಮಹದೇವೇಗೌಡ, ಕೃಷ್ಣವೆಂಕಟಗೌಡ, ನಸ್ರುಲ್ಲಾಖಾನ್‌, ಸ್ವಾಮಿ ಮತ್ತಿತರರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ