ಆ್ಯಪ್ನಗರ

ಎಚ್‌ಡಿಕೆ ಕೊಟ್ಟ ಮಾತಿನಂತೆ ಸಾಲ ಮನ್ನಾ ಮಾಡಲಿ

ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರು ಚುನಾವಣೆಗೂ ಮುನ್ನಾ ತಾವು ನೀಡಿದ್ದ ಭರವಸೆವಂತೆ ರೈತರ ಎಲ್ಲ ರೀತಿಯ ಸಾಲವನ್ನು ಮನ್ನಾ ಮಾಡಬೇಕು. ಇಲ್ಲವಾದರೆ ಅವರಿಗೆ ಮತ್ತೊಮ್ಮೆ ವಚನಭ್ರಷ್ಟ ಎಂಬ ಕಳಂಕ ಅಂಟಿಕೊಳ್ಳಲಿದೆ ಎಂದು ಬಿಜೆಪಿ ಪಕ್ಷದ ರೈತ ಮುಖಂಡ ಅಮ್ಮನಪುರ ಮಲ್ಲೇಶ್‌ ಹೇಳಿದರು.

Vijaya Karnataka 5 Jun 2018, 5:00 am
ಚಾಮರಾಜನಗರ: ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರು ಚುನಾವಣೆಗೂ ಮುನ್ನಾ ತಾವು ನೀಡಿದ್ದ ಭರವಸೆವಂತೆ ರೈತರ ಎಲ್ಲ ರೀತಿಯ ಸಾಲವನ್ನು ಮನ್ನಾ ಮಾಡಬೇಕು. ಇಲ್ಲವಾದರೆ ಅವರಿಗೆ ಮತ್ತೊಮ್ಮೆ ವಚನಭ್ರಷ್ಟ ಎಂಬ ಕಳಂಕ ಅಂಟಿಕೊಳ್ಳಲಿದೆ ಎಂದು ಬಿಜೆಪಿ ಪಕ್ಷದ ರೈತ ಮುಖಂಡ ಅಮ್ಮನಪುರ ಮಲ್ಲೇಶ್‌ ಹೇಳಿದರು.
Vijaya Karnataka Web lets waive the loan as a hint
ಎಚ್‌ಡಿಕೆ ಕೊಟ್ಟ ಮಾತಿನಂತೆ ಸಾಲ ಮನ್ನಾ ಮಾಡಲಿ


ಚುನಾವಣೆ ವೇಳೆ ಜಾ.ದಳವು ತನ್ನ ಪ್ರಣಾಳಿಕೆಯಲ್ಲಿ ತಾವು ಅಧಿಕಾರಕ್ಕೆ ಬಂದರೆ ರೈತರ ಸಾಲ ಮನ್ನಾವನ್ನು 24 ತಾಸಿನೊಳಗೆ ಮಾಡುವುದಾಗಿ ಆಶ್ವಾಸನೆ ನೀಡಿತ್ತು. ಈ ಬಗ್ಗೆ ಕುಮಾರಸ್ವಾಮಿ ಅವರು ಚುನಾವಣಾ ಪ್ರಚಾರಕ್ಕೆ ಹೋದ ಕಡೆಯೆಲ್ಲಾ ಹೇಳುತ್ತಿದ್ದರು. ಇದೀಗ ಅವರಿಗೆ ಅಧಿಕಾರ ಸಿಕ್ಕಿದೆ. ಅವರೇ ಸ್ವತಃ ಮುಖ್ಯಮಂತ್ರಿಯಾಗಿದ್ದಾರೆ. ಆದ್ದರಿಂದ ಯಾವುದೇ ಕಾರಣ, ಸಬೂಬು ನೀಡದೇ ಎಲ್ಲ ರೈತರ ಸಾಲ ಹಾಗೂ ಅದರ ಮೇಲಿನ ಬಡ್ಡಿಯನ್ನು ಸಂಪೂರ್ಣ ಮನ್ನಾ ಮಾಡಬೇಕು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.

ಒಂದು ವೇಳೆ ಕುಮಾರಸ್ವಾಮಿ ಅವರು ತಮ್ಮ ಮಾತಿಗೆ ತಪ್ಪಿದರೆ, ಮತ್ತೊಮ್ಮೆ ವಚನಭ್ರಷ್ಟ ಎಂಬ ಕಳಂಕ ಹೊತ್ತಿಕೊಳ್ಳಬೇಕಾಗುತ್ತದೆ. ಈ ಹಿಂದೆ ಅವರು ಯಡಿಯೂರಪ್ಪ ಅವರಿಗೆ ಅಧಿಕಾರ ಹಂಚಿಕೆ ಮಾಡದೇ ಇಂಥ ಆರೋಪ ಎದುರಿಸಿದ್ದರು ಎಂಬುದನ್ನು ಮರೆಯಬಾರದು ಎಂದು ಹೇಳಿದರು.

ಮುಖ್ಯಮಂತ್ರಿಯವರು ಸಾಲ ಮನ್ನಾ ಕುರಿತು ಚರ್ಚಿಸಲು ಕೆಲ ಬೆನ್ನುಮೂಳೆ ಇಲ್ಲದ ರೈತ ನಾಯಕರನ್ನು ಕರೆಸಿದ್ದರು. ಅಂಥ ರೈತ ನಾಯಕರು, ಮುಖಂಡರಿಂದ ರೈತರ ಸಮಸ್ಯೆ ಬಗೆಹರಿಯಲ್ಲ. ಬದಲಿಗೆ ಸರಕಾರದ ಪರವಾಗೇ ನಿಲ್ಲುವ ಮಂದಿಯೇ ಹೆಚ್ಚು ಎಂದು ಕೆಲ ರೈತ ಮುಖಂಡರನ್ನು ಟೀಕಿಸಿದರು.

ತಾರತಮ್ಯ, ನಿಗದಿ ಬೇಡ: ರೈತರ ಸಾಲ ಮನ್ನಾ ವಿಚಾರದಲ್ಲಿ ಇಂಥ ಇಸವಿಯಿಂದ, ಇಂಥ ಇಸವಿ ಅಥವಾ ಇಂಥದ್ದೇ ಸಾಲ ಎಂಬ ವಿಂಗಡಣೆ ಮಾಡುವುದು ಬೇಡ. ಕೃಷಿ ಜಮೀನಿನ ಆರ್‌ಟಿಸಿ ಮೇಲೆ ಪಡೆದಿರುವ ಎಲ್ಲ ರೀತಿಯ ಸಾಲವನ್ನು ಯಾವುದೇ ದಿನಾಂಕ, ಇಸವಿ ನೋಡದೇ ಸಂಪೂರ್ಣವಾಗಿ ಮನ್ನಾ ಮಾಡಬೇಕು. ಕೆಲ ರೈತರು ಚಿನ್ನಾಭರಣ ಅಡಮಾನವಿಟ್ಟು ಸಾಲ ಪಡೆದಿದ್ದು, ಇಂಥ ರೈತರ ಸಾಲ, ಬಡ್ಡಿ ಎಲ್ಲವೂ ಮನ್ನಾ ಆಗಬೇಕು ಎಂದು ಒತ್ತಾಯಿಸಿದರು.

ರೈತರು ತಾವು ಮಾಡಿರುವ ಸಾಲ ತೀರಿಸಲಾಗದೇ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಇದನ್ನು ತಪ್ಪಿಸಬೇಕಾದರೆ ಸಾಲ, ಬಡ್ಡಿ ಮನ್ನಾ ಅಗತ್ಯ. ಇನ್ನು ಬೆಳೆ ವಿಮೆಯನ್ನು ವಿಮಾ ಕಂಪನಿಗಳು ಆದಷ್ಟು ಬೇಗ ಪಾವತಿ ಮಾಡಬೇಕು ಎಂದು ಆಗ್ರಹಿಸಿದರು.

ಗೋಷ್ಠಿಯಲ್ಲಿ ಬಸವನಪುರ ರಾಜಶೇಖರ್‌, ನಾಗೇಂದ್ರ, ಬಿಸಲವಾಡಿ ಬಸವರಾಜು, ನಲ್ಲೂರು ಪರಶಿವಮೂರ್ತಿ, ರಾಜೇಶ್‌ ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ