ಆ್ಯಪ್ನಗರ

ವರಿಷ್ಠರ ಸೂಚನೆ ವಿರೋಧಿಸಿದ್ದರಿಂದ ಮಹೇಶ್‌ ಉಚ್ಚಾಟನೆ

ಬಹುಜನ ಸಮಾಜ ಪಕ್ಷದ ರಾಷ್ಟ್ರೀಯ ಅಧ್ಯಕ್ಷೆ ಮಾಯಾವತಿ ಅವರ ಸ್ಪಷ್ಟ ಸೂಚನೆ ಇದ್ದರೂ ರಾಜ್ಯ ಸಮ್ಮಿಶ್ರ ಸರಕಾರದ ಅವಿಶ್ವಾಸ ಗೊತ್ತುವಳಿ ಸಂದರ್ಭದಲ್ಲಿಸದನಕ್ಕೆ ಹಾಜರಾಗದ ಹಿನ್ನೆಲೆಯಲ್ಲಿಶಾಸಕ ಎನ್‌. ಮಹೇಶ್‌ ಅವರನ್ನು ಪಕ್ಷದಿಂದ ಉಚ್ಚಾಟಿಸಲಾಯಿತೇ ಹೊರತು ಬೇರೆ ಯಾವ ಕಾರಣವೂ ಇಲ್ಲಎಂದು ಬಿಎಸ್ಪಿ ರಾಜ್ಯಾಧ್ಯಕ್ಷ ಕೃಷ್ಣಮೂರ್ತಿ ಸ್ಪಷ್ಟಪಡಿಸಿದರು.

Vijaya Karnataka 11 Sep 2019, 5:00 am
ಚಾಮರಾಜನಗರ: ಬಹುಜನ ಸಮಾಜ ಪಕ್ಷದ ರಾಷ್ಟ್ರೀಯ ಅಧ್ಯಕ್ಷೆ ಮಾಯಾವತಿ ಅವರ ಸ್ಪಷ್ಟ ಸೂಚನೆ ಇದ್ದರೂ ರಾಜ್ಯ ಸಮ್ಮಿಶ್ರ ಸರಕಾರದ ಅವಿಶ್ವಾಸ ಗೊತ್ತುವಳಿ ಸಂದರ್ಭದಲ್ಲಿಸದನಕ್ಕೆ ಹಾಜರಾಗದ ಹಿನ್ನೆಲೆಯಲ್ಲಿಶಾಸಕ ಎನ್‌. ಮಹೇಶ್‌ ಅವರನ್ನು ಪಕ್ಷದಿಂದ ಉಚ್ಚಾಟಿಸಲಾಯಿತೇ ಹೊರತು ಬೇರೆ ಯಾವ ಕಾರಣವೂ ಇಲ್ಲಎಂದು ಬಿಎಸ್ಪಿ ರಾಜ್ಯಾಧ್ಯಕ್ಷ ಕೃಷ್ಣಮೂರ್ತಿ ಸ್ಪಷ್ಟಪಡಿಸಿದರು.
Vijaya Karnataka Web CHN10UM8_18


ನಗರದ ಜಿಲ್ಲಾಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಮಂಗಳವಾರ ಆಯೋಜಿಸಿದ್ದ ಸಂವಾದದಲ್ಲಿಅವರು ಮಾತನಾಡಿದರು.

''ಸದನಕ್ಕೆ ಹಾಜರಾಗದೆ ತಟಸ್ಥ ನಿಲುವು ತಳೆಯಿರಿ ಎಂಬುದಾಗಿ ಮಾಯಾವತಿ ಅವರು ಹೇಳಿದ್ದರು ಎಂದು ಎನ್‌. ಮಹೇಶ್‌ ಹೇಳಿಕೆ ನೀಡಿರುವುದು ಹಸಿ ಸುಳ್ಳು. ವಿಶ್ವಾಸ ಮತದ ಹಿಂದಿನ ದಿನ ಮಾಯಾವತಿ ಅವರು ಟ್ವೀಟ್‌ ಮಾಡಿದ್ದರು. ಅಲ್ಲದೇ ರಾಜ್ಯಕ್ಕೆ ಅಶೋಕ್‌ ಸಿದ್ಧಾರ್ಥ ಅವರನ್ನು ಕಳುಹಿಸಿ, ನೀವು ಸಮ್ಮಿಶ್ರ ಸರಕಾರದ ಪರವಾಗಿ ನಿಲ್ಲಬೇಕು. ಹೀಗಾಗಿ ಸದನಕ್ಕೆ ಹಾಜರಾಗುವಂತೆ ತಿಳಿಸಲಾಗಿತ್ತು. ಆದರೆ, ಮಹೇಶ್‌ ಅವರು ಅಂದೇ ತಾವು ಸದನಕ್ಕೆ ಹಾಜರಾಗುವುದಿಲ್ಲಎಂದೇ ಹೇಳಿದ್ದರು. ನಾನು ಬಿಜೆಪಿಗೆ ವಿರುದ್ಧವಾಗಿದ್ದರೆ ಕ್ಷೇತ್ರದ ಲಿಂಗಾಯತ, ವೀರಶೈವರ ವಿರೋಧ ಕಟ್ಟಿಕೊಳ್ಳಬೇಕಾಗುತ್ತದೆ. ಅಲ್ಲದೇ ಮುಂದೆ ಬಿಜೆಪಿ ಸರಕಾರ ಬಂದರೆ ನನ್ನ ಕ್ಷೇತ್ರಕ್ಕೆ ಅನುದಾನ ಸಿಗುವುದಿಲ್ಲಎಂದೇ ಹೇಳಿದ್ದರು. ಹೀಗಿದ್ದೂ ಮಾಯಾವತಿ ಅವರು ನನಗೆ ಸೂಚನೆ ಕೊಟ್ಟಿರಲಿಲ್ಲ. ತಟಸ್ಥವಾಗಿರು ಎಂದಷ್ಟೇ ಹೇಳಿದ್ದರು ಎಂಬುದಾಗಿ ಹೇಳಿಕೆ ಕೊಟ್ಟದ್ದು, ಜನತೆಯ ದಿಕ್ಕು ತಪ್ಪಿಸುವ ಕೆಲಸ. ಇದಕ್ಕಾಗಿ ಅವರು ಜನತೆಯ ಕ್ಷಮೆಯಾಚಿಸಬೇಕು'' ಎಂದು ಆಗ್ರಹಿಸಿದರು.

''ಮಾಯಾವತಿಯವರು ಬಿಜೆಪಿ ಸಿದ್ಧಾಂತಕ್ಕೆ ಸದಾ ವಿರೋಧ ವ್ಯಕ್ತಪಡಿಸುತ್ತ ಬಂದವರು. ಎನ್‌.ಮಹೇಶ್‌ ಅವರು ಗೆದ್ದ ಸಂದರ್ಭದಲ್ಲೇ ಲಖ್ನೋದಲ್ಲಿನಡೆದ ಸಭೆಯಲ್ಲೇ ಸ್ಪಷ್ಟವಾಗಿ ನೀವು ಯಾವುದೇ ಕಾರಣಕ್ಕೂ ಬಿಜೆಪಿ ಬೆಂಬಲಿಸಬಾರದು ಎಂದೇ ಹೇಳಿದ್ದರು. ಹೀಗಿರುವಾಗ ಅವರಾರ‍ಯಕೆ ತಟಸ್ಥವಾಗಿರಿ ಎಂದು ಹೇಳುತ್ತಾರೆ. ಇದೆಲ್ಲಾಜನತೆಯ ದಿಕ್ಕು ತಪ್ಪಿಸುವುದಕ್ಕಾಗಿ ನೀಡಿರುವ ಹೇಳಿಕೆ'' ಎಂದರು.

ಸಚಿವ ಸ್ಥಾನ ಏಕೆ ಬೇಕಿತ್ತು?: ''ನಾನು ಸದನಕ್ಕೆ ಹಾಜರಾಗಿದ್ದರೂ ಸಮ್ಮಿಶ್ರ ಸರಕಾರ ಬೀಳುತ್ತಿತ್ತು. ಹೀಗಾಗಿ ತಾನು ಗೈರು ಹಾಜರಾದೆ ಎನ್ನುತ್ತಿದ್ದಾರೆ. ಸರಕಾರ ರಚನೆ ಸಂದರ್ಭದಲ್ಲಿಸಚಿವ ಸ್ಥಾನದ ಆಫರ್‌ ಬಂದಾಗಲೂ ಇದೇ ಧೋರಣೆ ಇರಬೇಕಿತ್ತಲ್ಲವೇ? ಇವರು ಸಚಿವರಾಗದಿದ್ದರೂ ಸರಕಾರ ರಚನೆ ಆಗುತ್ತಿರಲಿಲ್ಲವೇ?'' ಎಂದು ವ್ಯಂಗ್ಯವಾಡಿದರು.

ಸಂಘದ ಅಧ್ಯಕ್ಷ ಎಂ.ಇ. ಮಂಜುನಾಥ್‌, ಪ್ರಧಾನ ಕಾರ್ಯದರ್ಶಿ ದೇವರಾಜು ಕಪ್ಪಸೋಗೆ ಹಾಜರಿದ್ದರು.

ನೀವೂ ರಾಜ್ಯ ಬಿಟ್ಟು ಹೋಗಿದ್ದೇಕೆ ?

ರಾಜ್ಯದಲ್ಲಿರಾಜಕೀಯ ಅಸ್ಥಿರತೆ, ಜಂಜಾಟ, ಗೊಂದಲ ನಡೆಯುತ್ತಿದ್ದ ಸಂದರ್ಭದಲ್ಲಿ12 ಅತೃಪ್ತ ಶಾಸಕರು ಹೊರ ರಾಜ್ಯಕ್ಕೆ ಹೋಗಿದ್ದಾಗ, ನೀವು ರಾಜ್ಯ ಬಿಟ್ಟು ಹೋಗಿದ್ದೆಲ್ಲಿಗೆ ಎಂದು ಎನ್‌. ಮಹೇಶ್‌ ಅವರನ್ನು ಕೃಷ್ಣಮೂರ್ತಿ ಪ್ರಶ್ನಿಸಿದರು. ರಾಜಕೀಯ ಬೆಳವಣಿಗೆಗಳು ನಡೆಯುತ್ತಿದ್ದ ಸಂದರ್ಭದಲ್ಲಿಒಬ್ಬ ರಾಜಕಾರಣಿಯಾಗಿ ತಾನು ಧ್ಯಾನಕ್ಕೆ ಹೋಗಿದ್ದೆ ಎಂಬುದನ್ನು ನಂಬಲು ಸಾಧ್ಯವೆ? ಎಂದು ಪ್ರಶ್ನಿಸಿದರು.

ಕೇಂದ್ರ ಸರಕಾರದ ದುರಾಡಳಿತ

ದೇಶದಲ್ಲಿಬಿಜೆಪಿ ಸರಕಾರ, ಪ್ರಧಾನಿ ಮೋದಿಯವರ ದುರಾಡಳಿತ ನಡೆಯುತ್ತಿದ್ದು, ಆರ್ಥಿಕ ಸಂಕಷ್ಟ ಎದುರಾಗಿದೆ ಎಂದು ಬಿಎಸ್ಪಿ ರಾಜ್ಯಾಧ್ಯಕ್ಷ ಕೃಷ್ಣಮೂರ್ತಿ ಆರೋಪಿಸಿದರು.

ಮೋದಿ, ಅಮಿತ್‌ ಷಾ ಅವರ ಸರ್ವಾಧಿಕಾರಿ ಧೋರಣೆಯಿಂದ ದೇಶದ ಆರ್ಥಿಕ ಸ್ಥಿತಿ ದಿನದಿಂದ ದಿನಕ್ಕೆ ಕುಸಿಯುತ್ತಿದೆ. ಸಣ್ಣ, ಪುಟ್ಟ ಕೈಗಾರಿಕೆಗಳು ಮುಚ್ಚುತ್ತಿವೆ. ಕೇಂದ್ರ ಸರಕಾರವು ಅದಾನಿ, ಅಂಬಾನಿಯಂಥ ದೊಡ್ಡ ಉದ್ದಿಮೆಗಳಿಗೆ ಅನುಕೂಲ ಕಲ್ಪಿಸಲು ಸಣ್ಣ, ಪುಟ್ಟ ಕೈಗಾರಿಕೆಗಳನ್ನು ಕ್ಷೀಣಿಸುವಂತೆ ಮಾಡುತ್ತಿದೆ ಎಂದು ಆರೋಪಿಸಿದರು.

ದೇಶದ ರೂಪಾಯಿ ಮೌಲ್ಯ ಡಾಲರ್‌ ಎದುರು ಸಾಕಷ್ಟು ತಗ್ಗಿದೆ. ಲಕ್ಷ ಲಕ್ಷ ಉದ್ಯೋಗ ನಷ್ಟವಾಗುತ್ತಿದೆ. ಇದಕ್ಕೆ ಮೋದಿಯವರ ದುರಾಡಳಿತ ಕಾರಣ ಎಂದು ಆರೋಪಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ