ಆ್ಯಪ್ನಗರ

ಮಾಸ್ಟರ್ಸ್ ಅಥ್ಲೆಟಿಕ್‌ನಲ್ಲಿ ಕೊಳ್ಳೇಗಾಲದವರಿಗೆ ಪದಕ

ಚಿತ್ರದುರ್ಗ ಒನಕೆ ಓಬವ್ವ ಕ್ರೀಡಾಂಗಣದಲ್ಲಿನಡೆದ ಮಾಸ್ಟರ್ಸ್ ಅಥ್ಲೆಟಿಕ್‌ನಲ್ಲಿ ತಾಲೂಕಿನ ಹಿರಿಯ ಕ್ರೀಡಾಪಟುಗಳು ಭಾಗವಹಿಸಿ ಚಿನ್ನ, ಬೆಳ್ಳಿ ಹಾಗೂ ಕಂಚಿನ ಪದಕಗಳನ್ನು ಪಡೆದು ತಾಲೂಕಿಗೆ ಕೀರ್ತಿ ತಂದಿದ್ದಾರೆ.

Vijaya Karnataka 23 Dec 2019, 5:00 am
ಕೊಳ್ಳೇಗಾಲ: ಚಿತ್ರದುರ್ಗ ಒನಕೆ ಓಬವ್ವ ಕ್ರೀಡಾಂಗಣದಲ್ಲಿನಡೆದ ಮಾಸ್ಟರ್ಸ್ ಅಥ್ಲೆಟಿಕ್‌ನಲ್ಲಿ ತಾಲೂಕಿನ ಹಿರಿಯ ಕ್ರೀಡಾಪಟುಗಳು ಭಾಗವಹಿಸಿ ಚಿನ್ನ, ಬೆಳ್ಳಿ ಹಾಗೂ ಕಂಚಿನ ಪದಕಗಳನ್ನು ಪಡೆದು ತಾಲೂಕಿಗೆ ಕೀರ್ತಿ ತಂದಿದ್ದಾರೆ.
Vijaya Karnataka Web CHN22KGL2_18
ಚಿನ್ನ, ಬೆಳ್ಳಿ ಹಾಗೂ ಕಂಚಿನ ಪದಕಗಳನ್ನು ಪಡೆದ ತಾಲೂಕಿನ ಹಿರಿಯ ಕ್ರೀಡಾಪಟುಗಳು


ಎಂ.ಎಸ್‌. ಮಹಮ್ಮದ್‌ ಇಬ್ರಾಹಿಂ 85ರ ವಯೋಮಾನದ ಜಾವಲಿನ್‌ ಎಸೆತ, ಗುಂಡು ಎಸೆತ, ಭರ್ಜಿ ಎಸೆತ ಸ್ಪರ್ಧೆಗಳಲ್ಲಿಭಾಗವಹಿಸಿ 3 ಚಿನ್ನದ ಪದಕಗಳನ್ನು ಗೆದ್ದಿದ್ದಾರೆ. ನಿವೃತ್ತ ದೈಹಿಕ ಶಿಕ್ಷಕ ಕೆ,ಮಾದಯ್ಯ ಅವರು 80ರ ವಯೋಮಿತಿ ವಿಭಾಗದಲ್ಲಿ1500ಮೀ ಓಟ, 800 ಮೀ ಓಟ ಮತ್ತು 400ಮೀ ಓಟದಲ್ಲಿಚಿನ್ನದ ಪದಕಗಳನ್ನು ಪಡೆದಿದ್ದಾರೆ.
ನಿವೃತ್ತ ದೈಹಿಕ ಶಿಕ್ಷಕ ಆರ್‌,ನಟರಾಜಪ್ಪ 70 ವರ್ಷ ವಯೋಮಿತಿ ವಿಭಾಗದಲ್ಲಿಎತ್ತರ ಜಿಗಿತ, ಉದ್ದಜಿಗಿತ ಮತ್ತು ಟ್ರಿಪಲ್‌ ಜಂಪ್‌ ಸ್ಪರ್ಧೆ ಗಳಲ್ಲಿವಿಜೇತರಾಗಿ ಚಿನ್ನದ ಪದಕಗಳನ್ನು ಪಡೆದುಕೊಂಡಿದ್ದಾರೆ. ನಿವೃತ್ತ ಖಜಾನೆ ಅಧಿಕಾರಿ ವಿಜಯ್‌ಕುಮಾರ್‌ 65ವಯೋಮಿತಿ ವಿಭಾಗದಲ್ಲಿಟ್ರಿಪಲ್‌ ಜಂಪ್‌ ಮತ್ತು ಉದ್ದಜಿಗಿತ ಸ್ಪರ್ಧೆಗಳಲ್ಲಿಭಾಗವಹಿಸಿ 2 ಬೆಳ್ಳಿ ಪದಕಗಳನ್ನು ಪಡೆದಿದ್ದಾರೆ.

ನಿವೃತ್ತ ಬ್ಯಾಂಕ್‌ ಅಧಿಕಾರಿ ರಾಚಪ್ಪಾಜಿ 60 ರ ವಯೋಮಾನ ವಿಭಾಗದಲ್ಲಿಟ್ರಿಪಲ್‌ ಜಂಪ್‌ ಮತ್ತು 200ಮೀ ಓಟದಲ್ಲಿಬೆಳ್ಳಿ ಪದಕ ಪಡೆದು ಸಾದನೆ ಮಾಡಿದ್ದಾರೆ. 2020ರ ಜನವರಿ 10, 11 ಮತ್ತು 12ರಂದು ಕೇರಳದಲ್ಲಿನಡೆಯುವ ರಾಷ್ಟ್ರೀಯ ಮಾಸ್ಟರ್‌ ಅಥ್ಲೆಟಿಕ್‌ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ, ಕೊಳ್ಳೇಗಾಲ ಗೆಳೆಯರ ಬಳಗದ ಸಿದ್ದಮಲ್ಲು, ಉಮಾಶಂಕರ್‌, ದಯಾನಂದ, ಕೆ.ಜಿ.ನಾಗರಾಜು, ನಜಿಮ್‌,ಮರಿಸ್ವಾಮಿ ಮುಂತಾದವರು ಇವರ ಸಾಧÜನೆಯನ್ನು ಪ್ರಶಂಶಿಸಿ ಶುಭ ಕೋರಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ