ಆ್ಯಪ್ನಗರ

ಪುಣಜನೂರು, ಬೇಡಗುಳಿ ರಸ್ತೆ ಸೇತುವೆ ಕಾಮಗಾರಿಗೆ ಸಚಿವ ಚಾಲನೆ

ತಾಲೂಕಿನ ಪುಣಜನೂರು ಮತ್ತು ಬೇಡಗುಳಿ ರಸ್ತೆಯ ಸರಪಳಿ 0.45 ಕಿ.ಮೀ (ಸುವರ್ಣಾವತಿ ನದಿ) ಉದ್ದದ 1.50 ಕೋಟಿ ರೂ. ವೆಚ್ಚದ ಸೇತುವೆ ಕಾಮಗಾರಿಗೆ ಜಿಲ್ಲಾ ಉಸ್ತುವಾರಿ ಸಚಿವ ಸಿ.ಪುಟ್ಟರಂಗಶೆಟ್ಟಿ ಇತ್ತೀಚೆಗೆ ಗುದ್ದಲಿಪೂಜೆ ನೆರವೇರಿಸಿದರು.

Vijaya Karnataka 14 Dec 2018, 5:00 am
ಚಾಮರಾಜನಗರ: ತಾಲೂಕಿನ ಪುಣಜನೂರು ಮತ್ತು ಬೇಡಗುಳಿ ರಸ್ತೆಯ ಸರಪಳಿ 0.45 ಕಿ.ಮೀ (ಸುವರ್ಣಾವತಿ ನದಿ) ಉದ್ದದ 1.50 ಕೋಟಿ ರೂ. ವೆಚ್ಚದ ಸೇತುವೆ ಕಾಮಗಾರಿಗೆ ಜಿಲ್ಲಾ ಉಸ್ತುವಾರಿ ಸಚಿವ ಸಿ.ಪುಟ್ಟರಂಗಶೆಟ್ಟಿ ಇತ್ತೀಚೆಗೆ ಗುದ್ದಲಿಪೂಜೆ ನೆರವೇರಿಸಿದರು.
Vijaya Karnataka Web minister for transport putanagiri road bridge
ಪುಣಜನೂರು, ಬೇಡಗುಳಿ ರಸ್ತೆ ಸೇತುವೆ ಕಾಮಗಾರಿಗೆ ಸಚಿವ ಚಾಲನೆ


ನಂತರ ಮಾತನಾಡಿದ ಅವರು, ಮಳೆ ಬಂದರೆ ಈ ಭಾಗದಲ್ಲಿ ಜನರಿಗೆ ಹಾಗೂ ವಾಹನಗಳ ಸಂಚಾರಕ್ಕೆ ತೊಂದರೆಯಾಗುತ್ತಿತ್ತು.ಇದಕ್ಕೆ ಸಂಬಂಧಪಟ್ಟ ಹಾಗೇ ಈ ಭಾಗದ ಸಾರ್ವಜನಿಕರಿಂದ ದೂರುಕೇಳಿ ಬಂದಿದ್ದವು. ಆ ಹಿನ್ನೆಲೆಯಲ್ಲಿ ಗುಣಮಟ್ಟದ ಸೇತುವೆ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ,

ಗುಣಮಟ್ಟದ ಕಾಮಗಾರಿ ಕೈಗೊಂಡು ಆದಷ್ಟು ಬೇಗ ಪೂರ್ಣಗೊಳಿಸಿ ಸಾರ್ವಜನಿಕರ ಸಂಚಾರಕ್ಕೆ ಅವಕಾಶ ಕಲ್ಪಿಸಬೇಕು ಎಂದು ಗುತ್ತಿಗೆದಾರರಿಗೆ ಗುತ್ತಿಗೆದಾರರಿಗೆ ಸಚಿವರು ಸೂಚಿಸಿದರು.

ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಜನತೆಯ ಆಶಯಕ್ಕೆ ಬದ್ದರಾಗಿ ರಸ್ತೆ, ಚರಂಡಿ, ಸಮುದಾಯ ಭವನ, ಆಶ್ರಯ ಮನೆ, ಗಂಗಾ ಕಲ್ಯಾಣ ಯೋಜನೆ ಸೇರಿದಂತೆ ಸರಕಾರದಿಂದ ದೊರೆಯುತ್ತಿರುವ ಅನುದಾನ ಹಾಗೂ ಸೌಲಭ್ಯ ಗಳನ್ನು ಜನರಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡುತ್ತಿದ್ದೇನೆ ಎಂದು ತಿಳಿಸಿದರು.

ಜಿ.ಪಂ.ಅಧ್ಯಕ್ಷೆ ಶಿವಮ್ಮ, ತಾ.ಪಂ.ಸದಸ್ಯರಾದ ಪಿ.ಕುಮಾರ್‌ ನಾಯ್ಕ್‌ ಮಹದೇವಶೆಟ್ಟಿ, ಗ್ರಾ.ಪಂ.ಅಧ್ಯಕ್ಷೆ ಶಾಂತಮ್ಮ ಸದಸ್ಯರಾದ ಮಹದೇವಮ್ಮ, ರಂಗಸ್ವಾಮಿ ಮುಖಂಡರಾದ ಸಮೀರ್‌ಪಾಷಾ, ಜಡೆಯಪ್ಪ, ಗಣೇಶ್‌ನಾಯಕ್‌, ಉಲ್ಲೇಶ್‌ ರಾಚ್ಚಪ್ಪ, ಬಾಲುನಾಯಕ, ನಾಗರಾಜು ಬಂಗಾರು ಎಇಇ ವಿಜಯ್‌ಕುಮಾರ್‌, ಸಹಾಯಕ ಎಂಜಿನಿಯರ್‌ ಮಧುಸೂಧನ್‌, ಗ್ರಾ.ಪಂ.ಕಾರ್ಯದರ್ಶಿ ಎಲ್‌. ನಾಗನಾಯಕ ಇತರರು ಹಾಜರಿದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ