ಆ್ಯಪ್ನಗರ

ಗೋಪಿನಾಥಂ ಸರಕಾರಿ ಶಾಲೆಯಲ್ಲಿ ಸಚಿವರ ವಾಸ್ತವ್ಯ

ಜಿಲ್ಲೆಯ ಗಡಿ ಗ್ರಾಮ ಗೋಪಿನಾಥಂ ಸೇರಿದಂತೆ ಆ ಭಾಗದ ಹಳ್ಳಿಗಳ ಸಮಸ್ಯೆಗಳನ್ನು ಅರಿಯುವ ಸಲುವಾಗಿ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಸುರೇಶ್‌ಕುಮಾರ್‌ ಅವರು ಸೋಮವಾರ ರಾತ್ರಿ ಗೋಪಿನಾಥಂ ಗ್ರಾಮದ ಸರಕಾರಿ ಶಾಲೆಯಲ್ಲಿ ವಾಸ್ತವ್ಯ ಮಾಡಿದರಲ್ಲದೆ, ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಗ್ರಾಮಸ್ಥರ ಸಮಸ್ಯೆಗಳನ್ನೂ ಆಲಿಸಿದರು.

Vijaya Karnataka 19 Nov 2019, 5:00 am
ಗೋಪಿನಾಥಂ (ಚಾ.ನಗರ): ಜಿಲ್ಲೆಯ ಗಡಿ ಗ್ರಾಮ ಗೋಪಿನಾಥಂ ಸೇರಿದಂತೆ ಆ ಭಾಗದ ಹಳ್ಳಿಗಳ ಸಮಸ್ಯೆಗಳನ್ನು ಅರಿಯುವ ಸಲುವಾಗಿ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಸುರೇಶ್‌ಕುಮಾರ್‌ ಅವರು ಸೋಮವಾರ ರಾತ್ರಿ ಗೋಪಿನಾಥಂ ಗ್ರಾಮದ ಸರಕಾರಿ ಶಾಲೆಯಲ್ಲಿವಾಸ್ತವ್ಯ ಮಾಡಿದರಲ್ಲದೆ, ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಗ್ರಾಮಸ್ಥರ ಸಮಸ್ಯೆಗಳನ್ನೂ ಆಲಿಸಿದರು.
Vijaya Karnataka Web CHN18P4_18
ಹನೂರು ತಾಲೂಕಿನ ಗೋಪಿನಾಥಂ ಸರಕಾರಿ ಶಾಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್‌ಕುಮಾರ್ ವಾಸ್ತವ್ಯ ಹಿನ್ನೆಲೆ ಆಗಮಿಸಿದ ಸಚಿವರಿಗೆ ಪೂರ್ಣಕುಂಭ ಸ್ವಾಗತಿ ನೀಡಿದರು.


ರಾತ್ರಿ 7ರ ಸುಮಾರಿಗೆ ಗ್ರಾಮಕ್ಕೆ ಆಗಮಿಸಿದ ಸಚಿವರಿಗೆ ಗ್ರಾಮದಲ್ಲಿಪೂರ್ಣಕುಂಭದ ಸ್ವಾಗತ ದೊರೆಯಿತು. ಅಲ್ಲಿಂದ ಸಚಿವರು, ವೀರಪ್ಪನ್‌ನಿಂದ ಹತ್ಯೆಗೀಡಾದ ಐಎಫ್‌ಎಸ್‌ ಅಧಿಕಾರಿ ಪಿ. ಶ್ರೀನಿವಾಸ್‌ ಗ್ರಾಮದಲ್ಲಿಗ್ರಾಮಸ್ಥರ ಸಹಕಾರದೊಂದಿಗೆ ನಿರ್ಮಿಸಿರುವ ಮಾರಮ್ಮ ದೇವಾಲಯಕ್ಕೆ ಭೇಟಿ ದರುಶನ ಪಡೆದರು. ನಂತರ ತಾವು ವಾಸ್ತವ್ಯ ಹೂಡಲಿರುವ ಸರಕಾರಿ ಶಾಲಾವರಣಕ್ಕೆ ಆಗಮಿಸಿದ ಸಚಿವರು, ನೇರವಾಗಿ ವಿದ್ಯಾರ್ಥಿಗಳೊಂದಿಗೆ ಸಂವಾದಕ್ಕೆ ಇಳಿದರು. ಆ ಬಳಿಕ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕೊಠಡಿಯಲ್ಲಿ ವಾಸ್ತವ್ಯ ಹೂಡಿದರು.

ಹಾಸ್ಟೆಲ್‌, ಲ್ಯಾಬ್‌ ಬೇಕು: ಇದಕ್ಕಿಂತ ಮುಂಚೆ ಸಚಿವರು, ವಿದ್ಯಾರ್ಥಿಗಳೊಂದಿಗೆ ಮುಖಾಮುಖಿಯಾದರು. ನಿಮಗೆಲ್ಲಏನು ಬೇಕು ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಮಕ್ಕಳು, ಸರ್‌ ನಮ್ಮ ಶಾಲೆಯಲ್ಲಿಲ್ಯಾಬ್‌ ಇಲ್ಲ. ಆದಷ್ಟು ಬೇಗ ಲ್ಯಾಬ್‌ ಮಾಡಿಸಿ ಎಂದು ವಿದ್ಯಾರ್ಥಿ ವಿಜಯ್‌ ಇಟ್ಟರೆ, ಮತ್ತೊಬ್ಬ ವಿದ್ಯಾರ್ಥಿನಿ ಬೀನಾ ನಮ್ಮ ಭಾಗದಲ್ಲಿಹಾಸ್ಟೆಲ್‌ ವ್ಯವಸ್ಥೆ ಇಲ್ಲಸರ್‌. ಕಾಡಂಚಿನ ಗ್ರಾಮಗಳಾದ್ದರಿಂದ ಶಾಲೆಯೊಂದಿಗೆ ಹಾಸ್ಟೆಲ್‌ ವ್ಯವಸ್ಥೆಯೂ ಇದ್ದರೆ ವಿದ್ಯಾ ಭ್ಯಾಸಕ್ಕೆ ಅನುಕೂಲ ಎಂದು ಮನವಿ ಮಾಡಿದಳು.

ಪಬ್ಲಿಕ್‌ ಪರೀಕ್ಷೆ ಬೇಕಾ: ಇನ್ನು ಸಚಿವರು 7ನೇ ತರಗತಿಗೆ ಪಬ್ಲಿಕ್‌ ಪರೀಕ್ಷೆ ಮಾಡುತ್ತಿದ್ದೇವೆ. ಈ ಬಗ್ಗೆ ನೀವೇನು ಹೇಳುತ್ತೀರಿ. ಪಬ್ಲಿಕ್‌ ಪರೀಕ್ಷೆ ಬೇಕಾ ಎಂದು ಪ್ರಶ್ನಿಸಿದರು. ಇದಕ್ಕೆ ವಿದ್ಯಾರ್ಥಿನಿಯೊಬ್ಬಳು, ಎಸ್‌ಎಸ್‌ಎಲ್‌ಸಿ ಏಕಾಏಕಿ ಪಬ್ಲಿಕ್‌ ಪರೀಕ್ಷೆ ಎದುರಿಸುವ ಬದಲು, 7ನೇ ತರಗತಿಯಲ್ಲೂಪಬ್ಲಿಕ್‌ ಪರೀಕ್ಷೆ ಇದ್ದರೆ ಎಸ್‌ಎಸ್‌ಎಲ್‌ಸಿ ವ್ಯಾಸಂಗ ವೇಳೆ ಅನುಕೂಲವಾಗಲಿದೆ. ಹೀಗಾಗಿ ಪಬ್ಲಿಕ್‌ ಪರೀಕ್ಷೆ ಇರಲಿ ಎಂದು ತನ್ನ ಅಭಿಪ್ರಾಯ ಮುಂದಿಟ್ಟಳು. ಇದಕ್ಕೆ ಸಾಕಷ್ಟು ವಿದ್ಯಾರ್ಥಿಗಳು ದನಿಗೂಡಿಸಿದರು. ಜಿ.ಪಂ. ಸದಸ್ಯೆ ಮರಗದಮಣಿ, ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ, ಜಿ.ಪಂ. ಸಿಇಒ ಹರ್ಷಲ್‌ ಬೋಯಾರ್‌, ಉಪ ವಿಭಾಗಾಧಿಕಾರಿ ನಿಖಿತಾ, ಡಿಡಿಪಿಐ ಮಂಜುನಾಥ್‌ ಇತರರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ