ಆ್ಯಪ್ನಗರ

ಚಾಮರಾಜನಗರ: ಸುಗ್ಗಿ ಹುಗ್ಗಿ ಸಂಭ್ರಮದಲ್ಲಿ ಶಾಸಕ ಎನ್‌ ಮಹೇಶ್​​ ಮಸ್ತ್​ ಮಸ್ತ್​ ಸ್ಟೆಪ್ಸ್​!

ಮೆರವಣಿಗೆಯಲ್ಲಿ ಸಾಗುತ್ತಿದ್ದ ಶಾಸಕ ಎನ್‌. ಮಹೇಶ್‌ ಅವರು ತಮಟೆ ಹಾಗೂ ಡೊಳ್ಳಿನ ಮೇಳಕ್ಕೆ ಗ್ರಾಮೀಣ ಶೈಲಿಯ ಡ್ಯಾನ್‌ ಮಾಡಿದರು. ಶಾಸಕರ ಜೋಶ್‌ ನೋಡಿ ಗ್ರಾಮೀಣ ಯುವಕರು ಸಹ ಸಾಥ್‌ ನೀಡಿ ಕುಣಿದು ಸಂಭ್ರಮಿಸಿದರು. ಇನ್ನು ಡ್ಯಾನ್ಸ್‌ ಮಾತ್ರ ಮಾಡದೇ ತಮಟೆ ಹಾಗೂ ಡೊಳ್ಳು ಬಡಿಯುತ್ತಿದ್ದವರ ಕೈಯಿಂದ ಅವುಗಳನ್ನು ಪಡೆದು ತಾನೂ ಕೂಡ ಬಾರಿಸಿ ಖಷಿಗೊಂಡರು.

Vijaya Karnataka Web 15 Jan 2021, 7:35 am
ಚಾಮರಾಜನಗರ: ತಾಲೂಕಿನ ಉಮ್ಮತ್ತೂರು ಗ್ರಾಮದಲ್ಲಿ ಸಂಕ್ರಾಂತಿ ಹಬ್ಬದ ಅಂಗವಾಗಿ ಗುರುವಾರ ನಡೆದ ಸುಗ್ಗಿ ಹುಗ್ಗಿ ಉತ್ಸವದ ವೇಳೆ ತಮಟೆ, ಡೊಳ್ಳು ಸದ್ದಿಗೆ ಶಾಸಕ ಎನ್‌. ಮಹೇಶ್‌ ಅವರು ಗ್ರಾಮೀಣ ಶೈಲಿ ನೃತ್ಯ ಮಾಡುವ ಮೂಲಕ ಗಮನ ಸೆಳೆದರು. ಕನ್ನಡ ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಗುರುವಾರ ಉಮ್ಮತ್ತೂರು ಗ್ರಾಮದಲ್ಲಿ ಸುಗ್ಗಿ ಹುಗ್ಗಿ ಕಾರ‍್ಯಕ್ರಮದ ಅಂಗವಾಗಿ ಕಲಾಮೇಳಗಳ ಮೆರವಣಿಗೆ ನಡೆಯುತ್ತಿತ್ತು.
Vijaya Karnataka Web MLA N Mahesh


ಈ ವೇಳೆಯಲ್ಲಿ ಮೆರವಣಿಗೆಯಲ್ಲಿ ಸಾಗುತ್ತಿದ್ದ ಶಾಸಕ ಎನ್‌. ಮಹೇಶ್‌ ಅವರು ತಮಟೆ ಹಾಗೂ ಡೊಳ್ಳಿನ ಮೇಳಕ್ಕೆ ಗ್ರಾಮೀಣ ಶೈಲಿಯ ಡ್ಯಾನ್‌ ಮಾಡಿದರು. ಶಾಸಕರ ಜೋಶ್‌ ನೋಡಿ ಗ್ರಾಮೀಣ ಯುವಕರು ಸಹ ಸಾಥ್‌ ನೀಡಿ ಕುಣಿದು ಸಂಭ್ರಮಿಸಿದರು. ಇನ್ನು ಡ್ಯಾನ್ಸ್‌ ಮಾತ್ರ ಮಾಡದೇ ತಮಟೆ ಹಾಗೂ ಡೊಳ್ಳು ಬಡಿಯುತ್ತಿದ್ದವರ ಕೈಯಿಂದ ಅವುಗಳನ್ನು ಪಡೆದು ತಾನೂ ಕೂಡ ಬಾರಿಸಿ ಖಷಿಗೊಂಡರು.

ಶಾಸಕನಾಗಿ ಕುಣಿತದ ಜೊತೆಗೆ ತಮಟೆ ಬಾರಿಸಿದ ಶಾಸಕರ ಸ್ಪೂರ್ತಿಗೆ ನಿಂತಿದ್ದ ಜನರೆಲ್ಲ ಚಪ್ಪಾಳೆ ಮೂಲಕ ಪ್ರೋತ್ಸಾಹಿಸಿದರು. ಒಟ್ಟಾರೆ ಶಾಸಕ ಮಹೇಶ್‌ ಡ್ಯಾನ್ಸ್‌ ಮೂಲಕ ಸುಗ್ಗಿ ಹುಗ್ಗಿ ಉತ್ಸವ ಅದ್ದೂರಿಯಾಗಿ ಸಾಗಿದೆ ಅಂದರೂ ತಪ್ಪಾಗಲ್ಲ.

ಚಾಮರಾಜನಗರ: ಈ ಬಾರಿಯೂ ಬಿಳಿಗಿರಿ ರಂಗನಾಥಸ್ವಾಮಿ ರಥೋತ್ಸವ ಇಲ್ಲ..!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ