ಆ್ಯಪ್ನಗರ

ನೈಸರ್ಗಿಕ ಕೃಷಿಗೆ ವಿಜ್ಞಾನಿಗಳ ಮೆಚ್ಚುಗೆ

ನೈಸರ್ಗಿಕ ಕೃಷಿಕ ದೊಡ್ಡಿಂದವಾಡಿ ಕೈಲಾಸಮೂರ್ತಿಯವರ ತೋಟ, ಭತ್ತದ ಗದ್ದೆ ಹಾಗೂ ಸಂಗ್ರಹ ಮತ್ತು ಸಂಸ್ಕರಣಾ ಘಟಕಕ್ಕೆ ಬೆಂಗಳೂರು ಕೃಷಿ ವಿವಿಯ ವಿಜ್ಞಾನಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.

Vijaya Karnataka 19 Dec 2019, 5:00 am
ಕೊಳ್ಳೇಗಾಲ: ನೈಸರ್ಗಿಕ ಕೃಷಿಕ ದೊಡ್ಡಿಂದವಾಡಿ ಕೈಲಾಸಮೂರ್ತಿಯವರ ತೋಟ, ಭತ್ತದ ಗದ್ದೆ ಹಾಗೂ ಸಂಗ್ರಹ ಮತ್ತು ಸಂಸ್ಕರಣಾ ಘಟಕಕ್ಕೆ ಬೆಂಗಳೂರು ಕೃಷಿ ವಿವಿಯ ವಿಜ್ಞಾನಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.
Vijaya Karnataka Web ಕೃಷಿ ವಿವಿಯ ಸಹ ಸಂಶೋಧನಾ ವಿಭಾಗದ ನಿರ್ದೇಶಕ ಡಾ. ವಾಸುದೇವನ್‌ ನೇತೃತ್ವದ ತಂಡ ಕೊಳ್ಳೇಗಾಲ ತಾಲೂಕು ದೊಡ್ಡಿಂದವಾಡಿ ನೈಸರ್ಗಿಕ ಕೃಷಿಕ ಕೈಲಾಸಮೂರ್ತಿ ಮಾಡ್ರಳ್ಳಿಯ ತಮ್ಮ ಜಮೀನಿನಲ್ಲಿನೈಸರ್ಗಿಕವಾಗಿ ಬೆಳೆದಿರುವ ಭತ್ತದ ಬೆಳೆಯನ್ನು ಪರಿಶೀಲಿಸಿದರು.


ಕೃಷಿ ವಿವಿಯ ಸಹ ಸಂಶೋಧನಾ ವಿಭಾಗದ ನಿರ್ದೇಶಕ ಡಾ. ವಾಸುದೇವನ್‌ ನೇತೃತ್ವದಲ್ಲಿಮಣ್ಣು ವಿಜ್ಞಾನಿ ಡಾ.ಉಮೇಶ್‌, ಬೇಸಾಯ ಶಾಸ್ತ್ರದ ವಿಜ್ಞಾನಿ ಡಾ.ದಿನೇಶ್‌, ಸಸ್ಯರೋಗ ತಜ್ಞ ಡಾ.ಚೇತನ್‌, ಕೀಟ ಶಾಸ್ತ್ರ ವಿಜ್ಞಾನಿ ಕಿತ್ತೂರಮಠ ತಂಡದಲ್ಲಿದ್ದರು.

ಕೈಲಾಸಮೂರ್ತಿಯವರ ತೋಟದಲ್ಲಿದ್ದ ಬಾಳೆ, ಹಲಸು, ಸಪೋಟ, ಪರಂಗಿ ಸೇರಿದಂತೆ ಇತರೆ ಬೆಳೆಗಳು, ಅಲ್ಲಿನ ಜೀವ ವೈವಿಧ್ಯತೆ, ಮಣ್ಣಿನ ರಚನೆ, ಪೋಷಕಾಂಶಗಳ ಬಗ್ಗೆ ಮಾಹಿತಿಯನ್ನು ತಂಡ ಪಡೆಯಿತು. ನೈಸರ್ಗಿಕ ಪದ್ಧತಿಯಿಂದ ಆಗುವ ಉಪಯೋಗಗಳು, ಸೂರ್ಯನ ಬೆಳಕು ಮತ್ತು ನೀರನ್ನು ಬಳಸಿ ಕೃಷಿ ಮಾಡುವ ಬಗೆ, ಮಣ್ಣಿನ ಜೀವ ವೈವಿಧ್ಯತೆ ರಕ್ಷಣಿ, ಬೆಳೆದ ಆಹಾರ ರಾಸಾಯನಿಕ ರಹಿತವಾಗಿರುವ ಜತೆಗೆ ರೈತರ ಆರ್ಥಿಕತೆ ದ್ವಿಗುಣವಾಗುವ ಬಗ್ಗೆ ಮಾಹಿತಿ ವಿನಿಮಯ ಮಾಡಿಕೊಂಡರು.

ಕೈಲಾಸ್‌ ಪದ್ಧತಿ ಭತ್ತದ ಬೆಳೆ: ಕೈಲಾಸಮೂರ್ತಿಯವರು ಸ್ವಗ್ರಾಮ ಮಾಡ್ರಳ್ಳಿಯ ತಮ್ಮ ಜಮೀನಿನಲ್ಲಿಕಡಿಮೆ ನೀರು ಮತ್ತು ಸೂರ್ಯನ ಬೆಳಕು ಬಳಸಿಕೊಂಡು ರಾಸಾಯನಿಕ ಮುಕ್ತ ಭತ್ತ ಬೆಳೆದು ಯಶಸ್ವಿಯಾಗಿದ್ದಾರೆ. ಯಾವುದೇ ಸಾವಯವ ಮತ್ತು ರಾಸಾಯನಿಕ ಗೊಬ್ಬರವಿಲ್ಲದೆ ಕೀಟನಾಶಕ, ಕಳೆನಾಶಕ, ನಾಟಿ ಮಾಡದೆ, ಉಳುಮೆ ಮಾಡದೆ, ಹೆಚ್ಚು ರಾಸಾಯನಿಕ ರಹಿತ ಆಹಾರ ಉತ್ಪಾದನೆ, ಪ್ರಕೃತಿ ಸಂಪತ್ತು ಉಳಿಸುವುದು, ಮುಂದಿನ ಪೀಳಿಗೆಗೆ ರಾಸಾಯನಿಕ ಮುಕ್ತ ಪ್ರಕೃತಿ ಸಂಪತ್ತನ್ನು ಉಳಿಸಿ ಕೊಡುವ ಚಿಂತನೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಡಾ.ವಾಸುದೇವನ್‌ ಮಾತನಾಡಿ, ''ಕೈಲಾಸಮೂರ್ತಿಯವರು ತಮ್ಮದೇ ಆದ ಪದ್ಧತಿಯಲ್ಲಿಭತ್ತ ಬೆಳೆದಿದ್ದು, ಇತರೆ ರೈತರು ಅನುಸರಿಸಬಹುದಾದ ಪದ್ಧತಿಯಾಗಿದೆ. ಬಿತ್ತನೆ ಮಾಡುವುದು, ಕಟಾವು ಮಾಡುವುದು, ಸಾಕಾಣಿಕೆ ಮಾಡುವುದನ್ನು ಬಿಟ್ಟರೆ ಬೇರಾರ‍ಯವ ಖರ್ಚು ಬರುವುದಿಲ್ಲ. ಬೇರೆ ರೈತರು ಎಕರೆಗೆ 26 ಸಾವಿರದವರಿಗೆ ಖರ್ಚು ಮಾಡುತ್ತಾರೆ. ಕೈಲಾಸಮೂರ್ತಿಯವರು ಕೇವಲ 6 ಸಾವಿರ ಖರ್ಚಿನಲ್ಲಿಭತ್ತ ಬೆಳೆದಿದ್ದಾರೆ. ಪ್ರತಿ ಎಕರೆಗೆ 50 ಸಾವಿರ ರೂ. ಲಾಭ ಗಳಿಸಿದ್ದಾರೆ,'' ಎಂದರು.

''ನಾಗೇನಹಳ್ಳಿ ಸಾವಯವ ಕೃಷಿ ವಿಜ್ಞಾನ ಕೇಂದ್ರದಲ್ಲಿಈ ಪದ್ಧತಿಯಲ್ಲಿಭತ್ತ ಬೆಳೆಯುವ ಕಾರ್ಯ ಮಾಡಬೇಕು ಎಂದು ಕೊಂಡಿದ್ದೇವೆ. ಪೂರ್ಣ ಪ್ರಮಾಣದಲ್ಲಿಹುಲ್ಲನ್ನು ಭೂಮಿಗೆ ಸೇರಿಸುವುದರಿಂದ ಹುಲ್ಲಿನ ಕೊರತೆಯಾಗಲಿದ್ದು, ಅರ್ಧ ಭೂಮಿಗೆ ಸೇರಿಸಿ ಉಳಿದಿದ್ದನ್ನು ಮೇವಿಗೆ ಬಳಸುವುದು ಸೂಕ್ತ ಎನಿಸುತ್ತದೆ,'' ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ