ಆ್ಯಪ್ನಗರ

ಹಳೇ ಶಾಲಾ ಕಟ್ಟಡ ನವೀಕರಣಕ್ಕೆ ಸೂಚನೆ

ತಾಲೂಕಿನ ಕೆಸ್ತೂರು ಗ್ರಾಮದ ನೂತನವಾಗಿ ನಿರ್ಮಿಸಿರುವ ಸರಕಾರಿ ಪ್ರೌಢಶಾಲೆ ಕಟ್ಟಡವನ್ನು ಸಚಿವ ಸಿ. ಪುಟ್ಟರಂಗಶೆಟ್ಟಿ ಹಾಗೂ ಸಂಸದ ಆರ್‌.ಧ್ರುವನಾರಾಯಣ ಉದ್ಘಾಟಿಸಿದರು.

Vijaya Karnataka 11 Feb 2019, 5:00 am
ಯಳಂದೂರು : ತಾಲೂಕಿನ ಕೆಸ್ತೂರು ಗ್ರಾಮದ ನೂತನವಾಗಿ ನಿರ್ಮಿಸಿರುವ ಸರಕಾರಿ ಪ್ರೌಢಶಾಲೆ ಕಟ್ಟಡವನ್ನು ಸಚಿವ ಸಿ. ಪುಟ್ಟರಂಗಶೆಟ್ಟಿ ಹಾಗೂ ಸಂಸದ ಆರ್‌.ಧ್ರುವನಾರಾಯಣ ಉದ್ಘಾಟಿಸಿದರು.
Vijaya Karnataka Web old school building renovation
ಹಳೇ ಶಾಲಾ ಕಟ್ಟಡ ನವೀಕರಣಕ್ಕೆ ಸೂಚನೆ


ನಂತರ ಮಾತನಾಡಿದ ಅವರು ಇಡೀ ಜಿಲ್ಲೆಯಲ್ಲೇ ಶಾಲಾ ಕೊಠಡಿಗಳ ಕೊರತೆ ಉಂಟಾಗಿದೆ. ಈ ಬಾರಿ ಬಜೆಟ್‌ನಲ್ಲಿ ಇಡೀ ರಾಜ್ಯದಲ್ಲೇ 1.500 ಶಾಲಾ ಕಟ್ಟಡಗಳನ್ನು ಹೊಸದಾಗಿ ನಿರ್ಮಾಣ ಮಾಡಲು ಆದೇಶ ಹೊರಡಿಸಲಾಗಿದೆ. ಆದ್ದರಿಂದ ಚಾ.ನಗರ ಜಿಲ್ಲೆಗೆ ಹೆಚ್ಚಾಗಿ ಕಟ್ಟಡಗಳನ್ನು ನಿರ್ಮಿಸಲು ಆಗುವುದಿಲ್ಲ, ಆದ್ದರಿಂದ ಮುಂಬರುವ ಬಜೆಟ್‌ವರೆಗೂ ಹಳೇ ಕಟ್ಟಡಗಳನ್ನು ನವೀಕರಣ ಮಾಡಿಸಿ ಅಲ್ಲೇ ಪಾಠ ಪ್ರವಚನ ಮಾಡಬೇಕು ಎಂದು ತಿಳಿಸಿದರು.

ಶಾಸಕ ಎನ್‌.ಮಹೇಶ್‌ ಮಾತನಾಡಿ, ಕಳೆದ ಬಾರಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ. 84ರಷ್ಟು ಫಲತಾಂಶ ಬಂದಿದೆ. ಆದ್ದರಿಂದ ಈ ಬಾರಿ ಶೇ. 100ರಷ್ಟು ಬರಬೇಕು.

ನಮ್ಮ ಗ್ರಾಮದಲ್ಲಿ ಹೆಣ್ಣು ಮಕ್ಕಳೇ ಹೆಚ್ಚಾಗಿ ವಿದ್ಯಾಭ್ಯಾಸ ಮಾಡಲಾಗುತ್ತಿದೆ. ಆದ್ದರಿಂದ ದ್ವಿತೀಯ ಪಿಯುಸಿವರೆಗೂ ಮೇಲ್ದರ್ಜೆಗೇರಿಸಬೇಕು ಎಂದು ಗ್ರಾಮಸ್ಥರು ಮನವಿ ಸಲ್ಲಿಸಲಾಯಿತು.

ಇದೇ ಸಂದರ್ಭದಲ್ಲಿ ಶಾಲಾ ವಿದ್ಯಾರ್ಥಿಗಳ ಕುಂಚದಲ್ಲಿ ಅರಳಿದ ಮಾನವ ದೇಹದ ವಿವಿಧ ಅಂಗಾಂಗಗಳ ಚಿತ್ರ ಬಿಡಿಸುವ ಮೂಲಕ ವಿಜ್ಞಾನ ವಿಷಯಗಳನ್ನು ತಿಳಿದುಕೊಂಡರು. ಮುಂಬರುವ ಪರೀಕ್ಷೆಗಳಿಗೆ ಈಗಿನಿಂದಲೇ ಪೂರ್ವ ತಯಾರಿ ಮಾಡಿಕೊಂಡರು.

ಜಿ.ಪಂ ಅಧ್ಯಕ್ಷೆ ಶಿವಮ್ಮ, ಉಪಾಧ್ಯಕ್ಷ ಜೆ.ಯೋಗೇಶ್‌, ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷೆ ಉಮಾವತಿ ಸಿದ್ದರಾಜು, ಶಿಕ್ಷ ಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಮುರುಗದಮಣಿ, ತಾ.ಪಂ ಅಧ್ಯಕ್ಷ ನಿರಂಜನ್‌, ಉಪಾದ್ಯಕ್ಷೆ ಮಲಾಜಮ್ಮ, ಮಂಜುಳ, ಕೆಸ್ತೂರು ಗ್ರಾ.ಪಂ ಅಧ್ಯಕ್ಷೆ ಸರೀತಾ ರಾಜು, ಉಪಾದ್ಯಕ್ಷ ರಂಗಸ್ವಾಮಿ, ಸಾರ್ವಜನಿಕ ಶಿಕ್ಷ ಣ ಇಲಾಖೆ ಉಪನಿರ್ದೇಶಕರು ಚಾ.ನಗರ, ಬಿಇಒ ತಿರುಮಲಾಚಾರಿ, ಸಿಆರ್‌ಪಿ ಶಿವಾಲಂಕಾರ್‌ ಇತರರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ