ಆ್ಯಪ್ನಗರ

ಚಾಮರಾಜನಗರಕ್ಕೆ ವಕ್ಕರಿಸಿದ ಕೊರೊನಾ, ಪೊಲೀಸರಲ್ಲಿ ಆತಂಕ?

ಚಾಮರಾನಗರಕ್ಕೆ ಮತ್ತೆ ಕೊರೊನಾ ವಕ್ಕರಿಸಿದೆ. ಚಾಲಕನೊಬ್ಬನಲ್ಲಿ ಕೊರೊನಾ ಲಕ್ಷಣಗಳು ಕಂಡು ಬಂದ ಹಿನ್ನೆಲೆ ಆತನನ್ನ ಪರೀಕ್ಷೆಗೆ ಒಳಪಡಿಸಲಾಗಿತ್ತು. ಇದೀಗ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ.

Vijaya Karnataka Web 20 Jun 2020, 11:23 am
ಚಾಮರಾಜನಗರ: ಹಸಿರು ವಲಯವಾಗಿ ಗುರುತಿಸಿಕೊಂಡಿದ್ದ ಚಾಮರಾಜನಗರ ಜಿಲ್ಲೆಯಲ್ಲಿ ಇದೀಗ ಮತ್ತೊಂದು ಪಾಸಿಟಿವ್ ಕೇಸ್‌‌ ದೃಢಪಟ್ಟಿದೆ. ಈ ಹಿನ್ನೆಲೆ ಜಿಲ್ಲೆಯ ಗುಂಡ್ಲುಪೇಟೆ ಪಟ್ಟಣದ ಮಹದೇವಪ್ರಸಾದ್ ನಗರ ಕಂಟ್ಮೆಂಟ್ ಝೋನ್ ಎಂದು ಘೋಷಣೆ ಮಾಡಲಾಗಿದೆ.
Vijaya Karnataka Web AnyConv.com__jpUQ5afv


ಈ ಬಡಾವಣೆಯ 39 ವರ್ಷದ ವ್ಯಕ್ತಿಗೆ ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆ ಜಿಲ್ಲಾಧಿಕಾರಿ ಆದೇಶ ನೀಡಿದ್ದಾರೆ. ಸೋಂಕು ತಗುಲಿರುವ ವ್ಯಕ್ತಿ ಟ್ರಕ್ ಚಾಲಕನಾಗಿದ್ದು, ತಮಿಳುನಾಡಿಗೆ ತರಕಾರಿ ಸಾಗಣೆ ಮಾಡುತ್ತಿದ್ದರು. ಇವರಿಗೆ ಜೂ. 17 ರಂದು ಜ್ವರ , ನೆಗಡಿ ಕಾಣಿಸಿಕೊಂಡಿದ್ದು, ತಪಾಸಣೆಗೆ ಒಳಪಟ್ಟು, ಗಂಟಲ ದ್ರವ ಪರೀಕ್ಷೆಯಲ್ಲಿ ಜೂ.19 ರಂದು ವರದಿ ಪಾಸಿಟಿವ್ ಎಂಬುದು ದೃಢವಾಗಿದೆ.

ಈ ಹಿನ್ನೆಲೆಯಲ್ಲಿ ಆತನನ್ನು ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ಆ ಬಡಾವಣೆಯನ್ನು ಕಂಟ್ಮೆಂಟ್ ವಲಯವೆಂದು ಘೋಷಿಸಿ, ನಿವಾಸಿಗಳು ಹೊರ ಬಾರದಂತೆ ಆದೇಶಿಸಲಾಗಿದೆ. ಅವರೆಲ್ಲರಿಗೂ ಅಗತ್ಯ ಸೌಲಭ್ಯ ಕಲ್ಪಿಸಲು ಕ್ರಮ ವಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಇದು ಲಡಾಖ್‌, ದಕ್ಷಿಣ ಚೀನಾ ಸಮುದ್ರವಲ್ಲ; ಭಾರತೀಯ ಸೇನಾಧಿಕಾರಿಗಳ ಖಡಕ್‌ ಎಚ್ಚರಿಕೆ!

ಪೊಲೀಸರಿಗೆ ಆತಂಕ..?ಇನ್ನು ಸೋಂಕಿತ ಚಾಲಕ ಗಡಿಭಾಗದ ಪುಣಜನೂರು ಚೆಕ್ ಪೋಸ್ಟ್ ಮೂಲಕ ಹೋಗಿ ಬಂದಿರುವ ಟ್ರಾವಲ್ ಹಿಸ್ಟರಿ ಲಭ್ಯವಾಗಿದೆ. ಈ ಹಿನ್ನೆಲೆ ಇಲ್ಲಿ ನಿಯೋಜನೆಗೊಂಡಿದ್ದ ಪೊಲೀಸರಿಗೆ ಸಹಜವಾಗಿ ಆತಂಕ ಮೂಡಿದೆ. ಚೆಕ್‌ಪೋಸ್ಟ್‌ ಮೂಲಕ ಹಾದು ಹೋಗುವ ಸಂಧರ್ಭ ಪೊಲೀಸರನ್ನ ಸಂಪರ್ಕಿಸಿರುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ಬಗ್ಗೆ ಜಿಲ್ಲಾಡಳಿತ ಮುಂಜಾಗ್ರತಾ ಕ್ರಮ ಕೈಗೊಳ್ಳುತ್ತಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ