ಆ್ಯಪ್ನಗರ

ಕಸ್ಟಮ್ ಸುಂಕ ಹೆಚ್ಚಳಕ್ಕೆ ವಿರೋಧ

ಚಿನ್ನದ ಮೇಲಿನ ಅಬಕಾರಿ ಸುಂಕ ವಾಪಸ್ ಪಡೆಯುವಂತೆ ಆಗ್ರಹಿಸಿ ಚಿನ್ನಬೆಳ್ಳಿ ವ್ಯಾಪಾರಿಗಳು ಹಾಗೂ ಗಿರವಿದಾರರ ಸಂಘದ ವತಿಯಿಂದ ಶುಕ್ರವಾರ ಪ್ರತಿಭಟನೆ ನಡೆಯಿತು.

ವಿಕ ಸುದ್ದಿಲೋಕ 5 Mar 2016, 5:15 am
ಚಾಮರಾಜನಗರ : ಚಿನ್ನದ ಮೇಲಿನ ಅಬಕಾರಿ ಸುಂಕ ವಾಪಸ್ ಪಡೆಯುವಂತೆ ಆಗ್ರಹಿಸಿ ಚಿನ್ನಬೆಳ್ಳಿ ವ್ಯಾಪಾರಿಗಳು ಹಾಗೂ ಗಿರವಿದಾರರ ಸಂಘದ ವತಿಯಿಂದ ಶುಕ್ರವಾರ ಪ್ರತಿಭಟನೆ ನಡೆಯಿತು.
Vijaya Karnataka Web opposition to an increase in custom duties
ಕಸ್ಟಮ್ ಸುಂಕ ಹೆಚ್ಚಳಕ್ಕೆ ವಿರೋಧ


ನಗರದ ವಿವಿಧೆಡೆ ಇರುವ ಚಿನ್ನ, ಬೆಳ್ಳಿ ಅಂಗಡಿ ಮಾಲೀಕರು ಅಂಗಡಿಗಳನ್ನು ಬಂದ್ ಮಾಡುವ ನಾಮಫಲಕಗಳನ್ನು ಹಿಡಿದು, ಜಿಲ್ಲಾಡಳಿತ ಭವನದ ಆವರಣದಲ್ಲಿ ಸಮಾವೇಶಗೊಂಡು, ಹಕ್ಕೋತ್ತಾಯದ ಮನವಿ ಪತ್ರವನ್ನು ಜಿಲ್ಲಾಡಳಿತ ಸಲ್ಲಿಸಿದರು.

6 ಕೋಟಿಗೂ ಹೆಚ್ಚು ಚಿನ್ನದ ವಹಿವಾಟು ನಡೆಸುವ ವ್ಯಾಪಾರ ಮಾಡುವವರಿಗೆ ಕೇಂದ್ರ ಸರಕಾರ ಮಂಡಿಸಿದ ಬಜೆಟ್‌ನಲ್ಲಿ ಚಿನ್ನದ ಮೇಲೆ ಅಬಕಾರಿ ಸುಂಕವನ್ನು ಹೆಚ್ಚಳ ಮಾಡಿದೆ. ಅಲ್ಲದೇ 2 ಲಕ್ಷಕ್ಕೂ ಹೆಚ್ಚು ಚಿನ್ನ ಖರೀದಿಸುವವರು ಪಾನ್ ಕಾರ್ಡ್ ನೀಡಿ, ಖರೀದಿಸುವಂತೆ ಸೂಚಿಸಿದೆ. ಈಗಾಗಲೇ ನಾವು ಮೌಲ್ಯಾಧಾರಿತ ತೆರಿಗೆ ಕಟ್ಟುತ್ತಿದ್ದೇವೆ. ಅಬಕಾರಿ ಸುಂಕವು ನಮಗೆ ಹೊರೆಯಾಗಿ ಪರಿಣಮಿಸಿದೆ. ಕೂಡಲೇ ಕೇಂದ್ರ ಸರಕಾರ ಚಿನ್ನದ ಮೇಲಿನ ಅಬಕಾರಿ ಸುಂಕದ ಆದೇಶವನ್ನು ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದರು.

ಅಧ್ಯಕ್ಷ ಪ್ರಭುರಾಂ, ಗೌರವಾಧ್ಯಕ್ಷ ಜಿ.ಆರ್.ಅಶ್ವಥ್ ನಾರಾಯಣ, ಕಾರ್ಯದರ್ಶಿ ರಮೇಶ್ ಕುಮಾರ್ ಮತ್ತಿತರರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ