ಆ್ಯಪ್ನಗರ

ಕೆರೆಗೆ ನೀರು: ಪೈಪ್‌ಲೈನ್ ಕಾಮಗಾರಿಗೆ ಆಗ್ರಹಿಸಿ ಧರಣಿ

ತಾಲೂಕಿನ ಅರಕಲವಾಡಿ, ಸುವರ್ಣನಗರ ಹಾಗೂ ಬೊಮ್ಮನಹಳ್ಳಿ ಕೆರೆಗಳಿಗೆ ನೀರು ತುಂಬಿಸುವ ನಿಟ್ಟಿನಲ್ಲಿ ಶೀಘ್ರ ಪೈಪ್‌ಲೈನ್ ಕಾಮಗಾರಿ ಆರಂಭಿಸುವಂತೆ ಆಗ್ರಹಿಸಿ ಈ ಭಾಗದ ರೈತರು ಬುಧವಾರದಿಂದ ಧರಣಿ ಆರಂಭಿಸಿದ್ದಾರೆ.

Vijaya Karnataka 26 Jun 2019, 9:06 pm
ಚಾಮರಾಜನಗರ : ತಾಲೂಕಿನ ಅರಕಲವಾಡಿ, ಸುವರ್ಣನಗರ ಹಾಗೂ ಬೊಮ್ಮನಹಳ್ಳಿ ಕೆರೆಗಳಿಗೆ ನೀರು ತುಂಬಿಸುವ ನಿಟ್ಟಿನಲ್ಲಿ ಶೀಘ್ರ ಪೈಪ್‌ಲೈನ್ ಕಾಮಗಾರಿ ಆರಂಭಿಸುವಂತೆ ಆಗ್ರಹಿಸಿ ಈ ಭಾಗದ ರೈತರು ಬುಧವಾರದಿಂದ ಧರಣಿ ಆರಂಭಿಸಿದ್ದಾರೆ.
Vijaya Karnataka Web CHN-CHN26P2


ಅರಕಲವಾಡಿ ಗ್ರಾಮದ ಪ್ರಮುಖ ಬೀದಿಯಲ್ಲಿ ಮೆರವಣಿಗೆ ನಡೆಸಿದ ಅರಕಲವಾಡಿ, ಹೊನ್ನಹಳ್ಳಿಘಿ, ಯರಗನಹಳ್ಳಿ ಗ್ರಾಮಸ್ಥರು, ನೂರಾರು ಸಂಖ್ಯೆಯಲ್ಲಿ ನೆರೆದು ತಮ್ಮ ಹಕ್ಕೋತ್ತಾಯ ಮುಂದಿಟ್ಟಿದ್ದಾರೆ. ಈ ಕೆರೆಗಳಿಗೆ ಪೈಪ್‌ಲೈನ್ ಅಳವಡಿಸುವ ಕಾಮಗಾರಿ ಆರಂಭವಾಗುವತನಕ ತಾವು ಧರಣಿ ಹಿಂಪಡೆಯುವುದಿಲ್ಲ ಎಂದು ಎಚ್ಚರಿಸಿದ್ದಾರೆ.

ಹುತ್ತೂರು ಕೆರೆ ಯೋಜನೆಯಡಿ ಒಟ್ಟು 11 ಕೆರೆಗಳಿಗೆ ನೀರು ತುಂಬಿಸಬೇಕಾಗಿದೆ. ಇದರಲ್ಲಿ ಗುಂಡ್ಲುಪೇಟೆ ತಾಲೂಕಿನ 9 ಕೆರೆಗಳು ಹಾಗೂ ಚಾ.ನಗರ ತಾಲೂಕಿನ 2 ಕೆರೆಗಳು ಸೇರಿವೆ. ಯೋಜನೆ ಪ್ರಕಾರ, ಈ ಕೆರೆಗಳಿಗೆ ನೀರು ಹರಿಸಲು ಅವಕಾಶ ಇರುವುದು ವರ್ಷದಲ್ಲಿ 30 ದಿನ ಮಾತ್ರಘಿ. ಹೀಗಾಗಿ ಸಹಜ ಕಾಲುವೆ ಮಾರ್ಗದಲ್ಲಿ ನೀರು ಹರಿಸಿದರೆ, ಎಲ್ಲ ಕೆರೆಗಳಿಗೂ ನೀರು ತಲುಪುವುದು ವಿಳಂಬವಾಗಲಿದೆ. ಸಾಕಷ್ಟು ನೀರು ಪೋಲಾಗಲಿದೆ.

ಹೀಗಾಗಿ ಪೈಪ್‌ಲೈನ್ ಅಳವಡಿಸಿ ನೀರು ಬಿಡಬೇಕು. ಪೈಪ್ ಮೂಲಕ ನೀರು ಬೇಗ ಹರಿಯುವುದಲ್ಲದೇ, ನೀರು ಪೋಲಾಗುವುದೂ ತಪ್ಪಲಿದೆ. ಆದ್ದರಿಂದ ಕೂಡಲೇ ಪೈಪ್‌ಲೈನ್ ಕಾಮಗಾರಿ ಆರಂಭಿಸಬೇಕು. 2017ರಲ್ಲಿ ಆರಂಭವಾದ ಯೋಜನೆ ಇನ್ನು ಪೂರ್ಣಗೊಂಡಿಲ್ಲಘಿ. ಆದ್ದರಿಂದ ಇನ್ನಾದರೂ ಸಂಬಂಧಿಸಿದ ಅಧಿಕಾರಿಗಳು ಇತ್ತ ಲಕ್ಷ್ಯ ವಹಿಸಿ ಕಾಮಗಾರಿ ಆರಂಭಿಸಬೇಕು. ಇಲ್ಲವಾದರೆ ಹಂತ ಹಂತವಾಗಿ ಹೋರಾಟ ಕೈಗೊಳ್ಳುವುದಾಗಿ ಎಚ್ಚರಿಸಿದರು.

ಧರಣಿಯಲ್ಲಿ ಮುಖಂಡರಾದ ಅರಕಲವಾಡಿ ಮಹೇಶ್, ರವಿಕುಮಾರ್, ಶಶಿಕುಮಾರ, ಶಿವಕುಮಾರ್, ಗುರುಸ್ವಾಮಿ, ಲಿಂಗಪ್ಪಘಿ, ಕುಮಾರ್, ಕರಿನಾಯಕ, ಹೊನ್ನಹಳ್ಳಿ ಪಟೇಲರು, ನಾಗಮಲ್ಲಪ್ಪಘಿ, ಶಾಂತಮಲ್ಲಪ್ಪಘಿ, ಆನಂದಪ್ಪಘಿ, ಜಿ.ಪಂ. ಮಾಜಿ ಸದಸ್ಯರಾದ ಎಂ. ರಾಮಚಂದ್ರುಘಿ, ನಾಗಶ್ರೀಘಿ, ಮುಖಂಡರಾದ ನಿಜಗುಣರಾಜು, ಅಮ್ಮನಪುರ ಮಲ್ಲೇಶ್ ಸೇರಿದಂತೆ ನೂರಾರು ಮಂದಿ ಪಾಲ್ಗೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ