ಆ್ಯಪ್ನಗರ

ಪ್ರಾಣಿ ಬೇಟೆಗೆ ಉರುಳು: ಒಬ್ಬ ಸೆರೆ, ಇಬ್ಬರು ಪರಾರಿ

ತಾಲೂಕಿನ ಪಾಲಾರ್‌ ವನ್ಯಜಿವಿ ವಲಯದ ಅರಣ್ಯ ಪ್ರದೇಶದಲ್ಲಿ ಪ್ರಾಣಿಗಳ ಬೇಟೆಗೆ ಅಳವಡಿಸಿದ್ದ ಉರುಳುಗಳನ್ನು ಬಿಚ್ಚುತ್ತಿದ್ದ ವ್ಯಕ್ತಿಯನ್ನು ಅರಣ್ಯಾಧಿಕಾರಿಗಳು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.

Vijaya Karnataka 19 Aug 2019, 5:00 am
ಕೊಳ್ಳೇಗಾಲ : ತಾಲೂಕಿನ ಪಾಲಾರ್‌ ವನ್ಯಜಿವಿ ವಲಯದ ಅರಣ್ಯ ಪ್ರದೇಶದಲ್ಲಿ ಪ್ರಾಣಿಗಳ ಬೇಟೆಗೆ ಅಳವಡಿಸಿದ್ದ ಉರುಳುಗಳನ್ನು ಬಿಚ್ಚುತ್ತಿದ್ದ ವ್ಯಕ್ತಿಯನ್ನು ಅರಣ್ಯಾಧಿಕಾರಿಗಳು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.
Vijaya Karnataka Web CHN-CHN18KGL4


ಬಂದಿತ ಆರೋಪಿಯನ್ನು ಮಾರ್ಟಳ್ಳಿಯ ರಾಜ್‌ಖನ್ನನ್‌ ಎಂದು ಗುರುತಿಸಲಾಗಿದೆ. ಭಾನುವಾರ ದೊಡ್ಡಾಣೆಯಲ್ಲಿ ಅರಣ್ಯ ರಕ್ಷ ಕ ಮತ್ತು ಸಿಬ್ಬಂದಿ ಗಸ್ತು ಮಾಡುತ್ತಿರುವ ವೇಳೆ ಸಿಪಿಟಿ 65 ಮೊಗವಾರೆ ಅರಣ್ಯ ಪ್ರದೇಶದಲ್ಲಿ ಉರುಳುಗಳನ್ನು ಪತ್ತೆ ಹಚ್ಚುವ ಕಾರ್ಯದಲ್ಲಿ ತೊಡಗಿದ್ದಾಗ ದೂರದಲ್ಲಿ ಯಾರೋ ಮಾತನಾಡುತ್ತಿರುವ ಶಬ್ಧ ಕೇಳಿ ಹತ್ತಿರ ಹೋಗಿ ನೋಡಿದಾಗ ಮೂವರು ಉರುಳುಗಳನ್ನು ಬಿಚ್ಚುತ್ತಿರುವುದು ಕಂಡುಬಂತು. ಉರುಳು ಬಿಡಿಸುತ್ತಿದ್ದ ಮಾರ್ಟಳ್ಳಿ ಗ್ರಾಮದ ರಾಜ್‌ಖನ್ನನ್‌ನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ, ಬೇಟೆಯಾಡುವುದಕ್ಕಾಗಿ ರಾತ್ರಿ ವೇಳೆ ಉರುಳು ಹಾಕಿದ್ದು ಬೆಳಗ್ಗೆ ಬಿಚ್ಚುವ ಕಾರ್ಯ ಮಾಡುತ್ತಿದ್ದೇವೆ. ಉಳಿದ ಆರೋಪಿಗಳು ದೊಡ್ಡಣೆಯ ನಾಗೇಶ್‌ ಮತ್ತು ಪುಟ್ಟ ಎಂದು ತಿಳಿಸಿದ್ದಾನೆ.

ಈ ಸಂಬಂಧ ಮೂವರ ವಿರುದ್ದ ಪ್ರಕರಣ ದಾಖಲಾಗಿದ್ದು ಪರಾರಿಯಾಗಿರುವ ಇಬ್ಬರನ್ನು ಬಂಧಿಸಲು ಬಲೆ ಬೀಸಿದ್ದಾರೆ. ಆರೋಪಿ ರಾಜ್‌ಖನ್ನನ್‌ನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಬಂಧಿತ ಆರೋಪಿಯಿಂದ ಉರುಳು ಹಾಕಲು ಬಳಸುತ್ತಿದ್ದ ಸಲಕರಣೆಗಳನ್ನು ವಶಕ್ಕೆ ಪಡೆದಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ