ಆ್ಯಪ್ನಗರ

Mysuru Dasara - ಈ ಬಾರಿಯ ಜಂಬೂಸವಾರಿಯಲ್ಲಿ ಪುನೀತ್ ಸ್ತಬ್ದಚಿತ್ರ; ಯಾವ ಜಿಲ್ಲೆಯ ವಿಶೇಷವಿದು?

ಪುನೀತ್ ರಾಜ್ ಕುಮಾರ್ ಅವರು, ಜಿಲ್ಲಾಡಳಿತ ಆರಂಭಿಸಿದ್ದ ಚೆಲುವ ಚಾಮರಾಜ ನಗರ ಅಭಿಯಾನದ ರಾಯಭಾರಿಯಾಗಿದ್ದರು. ಅವರನ್ನು ಸ್ಮರಿಸುವ ಉದ್ದೇಶದಿಂದ ಈ ಸ್ತಬ್ಧ ಚಿತ್ರ ತಯಾರಿಸಲಾಗಿದೆ ಎಂದು ಹೇಳಲಾಗಿದೆ. ಸ್ತಬ್ದ ಚಿತ್ರ ಎರಡು ಕೊನೆಗಳನ್ನು ಹೊಂದಿದ್ದು, ಮುಂಭಾಗದ ಕೊನೆಯಲ್ಲಿ ಪುನೀತ್ ಅವರ ಮುಖವನ್ನು ಫೈಬರ್ ನಿಂದ ರಚಿಸಲಾಗಿದೆ. ಹಿಂಭಾಗದಲ್ಲಿ ಹುಲಿಯ ಮುಖವನ್ನು ಸೃಷ್ಟಿಸಲಾಗಿದೆ. ಪುನೀತ್ ಮತ್ತು ಹುಲಿಯ ನಡುವಿನ ಸ್ತಬ್ಧಚಿತ್ರದ ಸ್ಥಳದಲ್ಲಿ ಜಿಲ್ಲೆಯ ವಿಶೇಷತೆಗಳನ್ನು ಬಿಂಬಿಸಲಾಗಿದೆ. ಹುಲಿಯ ಸವಾರಿ ಮಾಡುತ್ತಿರುವ ಮಲೆಮಹದೇಶ್ವರ ಸ್ವಾಮಿ, ಆನೆಗಳು ಹಾಗೂ ಇತರ ಪ್ರಾಣಿಗಳ ಪ್ರತಿಕೃತಿಗಳನ್ನು ನಿರ್ಮಿಸಲಾಗಿದೆ.

Authored byಚೇತನ್ ಓ.ಆರ್. | Vijaya Karnataka Web 4 Oct 2022, 9:19 pm
ಚಾಮರಾಜ ನಗರ: ಈ ಬಾರಿಯ ದಸರಾ ಹಬ್ಬದ 10ನೇ ದಿನವಾದ ವಿಜಯ ದಶಮಿಯಂದು ಬುಧವಾರ (ಅ. 5) ಮೈಸೂರಿನ ಅರಮನೆ ಮುಂಭಾಗದಲ್ಲಿ ನಡೆಯಲಿರುವ ಜಂಬೂ ಸವಾರಿಯಲ್ಲಿ ವಿವಿಧ ಜಿಲ್ಲೆಗಳ ಸ್ತಬ್ದ ಚಿತ್ರಗಳು ಸಾಗಿಹೋಗುತ್ತವೆ. ಪ್ರತಿಯೊಂದು ಸ್ತಬ್ದ ಚಿತ್ರವೂ ಆ ಜಿಲ್ಲೆಯ ಸಂಸ್ಕೃತಿ, ವಿಶೇಷತೆಗಳನ್ನು ಬಿಂಬಿಸುವಂಥವು. ಈ ಬಾರಿಯ ಜಂಬೂಸವಾರಿಯಲ್ಲಿ ಚಾಮರಾಜ ನಗರ ಜಿಲ್ಲಾಡಳಿತವು ಪುನೀತ್ ರಾಜ್ ಕುಮಾರ್ ಸ್ಮರಣಾರ್ಥ ಸ್ತಬ್ಧ ಚಿತ್ರವನ್ನು ತರಲು ಉದ್ದೇಶಿಸಿದ್ದು, ಅದರ ನಿರ್ಮಾಣದ ಕೆಲಸ ಭರದಿಂದ ಸಾಗಿದೆ.
Vijaya Karnataka Web punith.


ಪುನೀತ್ ಸ್ತಬ್ಧ ಚಿತ್ರವೇಕೆ?

ಪುನೀತ್ ರಾಜ್ ಕುಮಾರ್ ಅವರು, ಜಿಲ್ಲಾಡಳಿತ ಆರಂಭಿಸಿದ್ದ ಚೆಲುವ ಚಾಮರಾಜ ನಗರ ಅಭಿಯಾನದ ರಾಯಭಾರಿಯಾಗಿದ್ದರು. ಅವರನ್ನು ಸ್ಮರಿಸುವ ಉದ್ದೇಶದಿಂದ ಈ ಸ್ತಬ್ಧ ಚಿತ್ರ ತಯಾರಿಸಲಾಗಿದೆ ಎಂದು ಹೇಳಲಾಗಿದೆ.

Mysuru Dasara | 22 ಸಾವಿರ ಜನರಿಗೆ ಜಂಬೂಸವಾರಿ ವೀಕ್ಷಣೆಗೆ ಅವಕಾಶ: ಅರಮನೆ ನಗರಿಯಲ್ಲಿ ಅಂತಿಮ ಹಂತದ ಸಿದ್ಧತೆ
ಸ್ತಬ್ದ ಚಿತ್ರ ಎರಡು ಕೊನೆಗಳನ್ನು ಹೊಂದಿದ್ದು, ಮುಂಭಾಗದ ಕೊನೆಯಲ್ಲಿ ಪುನೀತ್ ಅವರ ಮುಖವನ್ನು ಫೈಬರ್ ನಿಂದ ರಚಿಸಲಾಗಿದೆ. ಹಿಂಭಾಗದಲ್ಲಿ ಹುಲಿಯ ಮುಖವನ್ನು ಸೃಷ್ಟಿಸಲಾಗಿದೆ. ಪುನೀತ್ ಮತ್ತು ಹುಲಿಯ ನಡುವಿನ ಸ್ತಬ್ಧಚಿತ್ರದ ಸ್ಥಳದಲ್ಲಿ ಜಿಲ್ಲೆಯ ವಿಶೇಷತೆಗಳನ್ನು ಬಿಂಬಿಸಲಾಗಿದೆ. ಹುಲಿಯ ಸವಾರಿ ಮಾಡುತ್ತಿರುವ ಮಲೆಮಹದೇಶ್ವರ ಸ್ವಾಮಿ, ಆನೆಗಳು ಹಾಗೂ ಇತರ ಪ್ರಾಣಿಗಳ ಪ್ರತಿಕೃತಿಗಳನ್ನು ನಿರ್ಮಿಸಲಾಗಿದೆ. ಸ್ತಬ್ಧಚಿತ್ರ ತಯಾರಕರಾದ ಮಹದೇವ್ ಅವರ ನೇತೃತ್ವದಲ್ಲಿ ಈ ಸ್ತಬ್ದಚಿತ್ರವನ್ನು ನಿರ್ಮಿಸಲಾಗಿದೆ.
ಲೇಖಕರ ಬಗ್ಗೆ
ಚೇತನ್ ಓ.ಆರ್.
ಪ್ರಸ್ತುತ, ವಿಜಯ ಕರ್ನಾಟಕ ವೆಬ್ ನಲ್ಲಿ ಪತ್ರಕರ್ತನಾಗಿ 2022ರಿಂದ ಪತ್ರಕರ್ತನಾಗಿ ಸೇವೆ ಸಲ್ಲಿಸುತ್ತಿದ್ದಾರೆ. 2007ರಲ್ಲಿ ತುಮಕೂರು ವಿವಿಯಿಂದ ಪತ್ರಿಕೋದ್ಯಮದಲ್ಲಿ 5ನೇ ರ‍್ಯಾಂಕ್ ನೊಂದಿಗೆ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಮೈಸೂರು ವಿವಿಯಿಂದ ಪತ್ರಿಕೋದ್ಯಮದಲ್ಲಿ ಪಿಎಚ್ ಡಿ ಪದವಿ ಪಡೆದಿದ್ದಾರೆ. ಜಿಲ್ಲಾ ಸುದ್ದಿಗಳಿಂದ ಹಿಡಿದು ಕ್ರೀಡೆ, ದೇಶ- ವಿದೇಶ, ಸಿನಿಮಾ, ವಿಜ್ಞಾನ- ತಂತ್ರಜ್ಞಾನ ಇತ್ಯಾದಿ ವೈವಿಧ್ಯಯಮ ವಿಷಯಗಳ ಬಗ್ಗೆ ಬರೆಯುವ ಇವರಿಗೆ, ನಾನಾ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಈವರೆಗೆ 16 ವರ್ಷ ಕೆಲಸ ಮಾಡಿದ ಅನುಭವವಿದೆ. ಫೋಟೋಗ್ರಫಿ ಇವರ ಅಚ್ಚುಮೆಚ್ಚಿನ ಹವ್ಯಾಸ. ಸಿನಿಮಾ, ಸಾಕ್ಷ್ಯಚಿತ್ರ, ಸಾಹಿತ್ಯ, ವಿಡಿಯೋ ಸಂಕಲನ, ಪತ್ರಿಕೆ ಪುಟ ವಿನ್ಯಾಸ, ಹಾಡುಗಾರಿಕೆ, ಚಿತ್ರಕಲೆ, ಅನಿಮೇಶನ್, ಸಂಗೀತದಲ್ಲಿಯೂ ಆಸಕ್ತಿಯಿದೆ.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ