ಆ್ಯಪ್ನಗರ

ಚಂದಕವಾಡಿಯಲ್ಲಿ ವಿಜೃಂಭಣೆಯ ರಥೋತ್ಸವ

ಚಾಮರಾಜನಗರ ತಾಲೂಕಿನ ಚಂದಕವಾಡಿ ಗ್ರಾಮದಲ್ಲಿ ಲಕ್ಷ್ಮೀದೇವಿ ರಥೋತ್ಸವ ಶುಕ್ರವಾರ ಸಂಜೆ ಸಹಸ್ರಾರು ಭಕ್ತರ ಸಡಗರ, ಸಂಭ್ರಮದೊಂದಿಗೆ ವಿಜೃಂಭಣೆಯಿಂದ ನೆರವೇರಿತು.

Vijaya Karnataka 9 Mar 2019, 5:00 am
ಸಂತೇಮರಹಳ್ಳಿ : ಚಾಮರಾಜನಗರ ತಾಲೂಕಿನ ಚಂದಕವಾಡಿ ಗ್ರಾಮದಲ್ಲಿ ಲಕ್ಷ್ಮೀದೇವಿ ರಥೋತ್ಸವ ಶುಕ್ರವಾರ ಸಂಜೆ ಸಹಸ್ರಾರು ಭಕ್ತರ ಸಡಗರ, ಸಂಭ್ರಮದೊಂದಿಗೆ ವಿಜೃಂಭಣೆಯಿಂದ ನೆರವೇರಿತು.
Vijaya Karnataka Web CHN-CHN8SMR7


ಗ್ರಾಮದ ದೇವಸ್ಥಾನದ ಮುಂಭಾಗದಲ್ಲಿ ತಳಿರು ತೋರಣ ಹಾಗೂ ಬಣ್ಣದ ಬಣ್ಣದ ಬಟ್ಟೆಗಳಿಂದ ಅಲಂಕೃತಗೊಂಡು ನಿಂತಿದ್ದ ರಥಕ್ಕೆ ಬಾಳೆ ಗೊನೆ, ಎಳೆನೀರು, ಹೂವುಗಳನ್ನು ಕಟ್ಟಿದ ಅಲಂಕೃತ ಲಕ್ಷ್ಮೇದೇವಿ ಉತ್ಸವ ಮೂರ್ತಿಯನ್ನು ಕೂರಿಸಿ ಸಂಜೆ 5ಕ್ಕೆ ಕೇಂದ್ರ ಸ್ಥಾನದಿಂದ ಭಕ್ತಾಧಿಗಳ ಜಯಘೋಷಣೆಗಳೊಂದಿಗೆ ರಥೋತ್ಸವಕ್ಕೆ ಚಾಲನೆ ಕೊಡಲಾಯಿತು.

ರಥವನ್ನು ದೇವಾಲಯದ ಮುಂಭಾಗದಿಂದ ಕೊಳದವರೆಗೂ ಎಳೆಯುವ ಮೂಲಕ ನೆರೆದಿದ್ದ ಸಾವಿರಾರು ಭಕ್ತರು ಜಯಘೋಷ ಮೊಳಗಿಸಿದರು. ರಥೋತ್ಸವದ ಹಿನ್ನೆಲೆಯಲ್ಲಿ ಚಂದಕವಾಡಿ ತುಂಬ ಭಕ್ತರ ಕಲರವ ಮನೆ ಮಾಡಿತ್ತು.

ಚಂದಕವಾಡಿ ಕೋಡಿಮೋಳೆ, ನಾಗವಳ್ಳಿ, ದಡದಹಳ್ಳಿ, ಅರಳಿಪುರ, ಬಸವನಪುರ ಕರಿಯನಕಟ್ಟೆ, ಹಂಚಿತಾಳಪುರ, ಅಯ್ಯನಪುರ, ಸರಗೂರು, ಬಸಪ್ಪನಪಾಳ್ಯ, ಹುರಳೀನಂಜನಪುರ, ಸಿದ್ದಯ್ಯನಪುರ, ಕುಂಭೇಶ್ವರ ಕಾಲನಿ ಸೇರಿದಂತೆ 16 ಹಳ್ಳಿಗಳ ಜನರು ಶ್ರದ್ಧಾ ಭಕ್ತಿಯಿಂದ ಲಕ್ಷ್ಮಿದೇವಿ ಜಾತ್ರೆ ಆಚರಿಸಿದರು.

ಮೊದಲ ದಿನ ಕೊಂಡ್ಯೋತ್ಸವ, 2 ನೇ ದಿನ ತಂಪು ಮತ್ತು ಮಡೆ ಆಚರಣೆ ಹಾಗೂ ದನಗಳ ಪರಿಶೆ ಸಡಗರ, ಸಂಭ್ರಮದಿಂದ ನೆರವೇರಿತ್ತು. ಕೊನೆಯ ದಿನದ ಆಕರ್ಷಣೆಯಾದ ರಥೋತ್ಸವವೂ ಸಹ ಸಂಭ್ರದಲ್ಲಿ ಕೊನೆಗೊಂಡಿತು. ರಥಕ್ಕೆ ನವದಂಪತಿಗಳು ಹಣ್ಣು, ಧವನ ಎಸೆದು ಇಷ್ಟಾರ್ಥ ಸಿದ್ದಗಾಗಿ ಪ್ರಾರ್ಥಿಸಿದರು.

ಕೃಷಿ ಇಲಾಖೆಯಿಂದ ಅರಿವು

ಇದೇ ಜಾತ್ರೆಯಂಗಳದಲ್ಲಿ ಕೃಷಿ ಇಲಾಖೆ ವತಿಯಿಂದ ಮಳಿಗೆಗಳನ್ನು ಸ್ಥಾಪಿಸಿ, ಕೃಷಿ ಕ್ಷೇತ್ರದ ಬಗ್ಗೆ, ಆಧುನಿಕ ಪರಿಕರ, ಕೃಷಿ ಇಲಾಖೆ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು. ಜಾತ್ರೆಯಲ್ಲಿ ಪಾಲ್ಗೊಂಡಿದ್ದ ಸಾಕಷ್ಟು ಕೃಷಿ ಆಸಕ್ತರು ಇದರ ಪ್ರಯೋಜನ ಪಡೆದದ್ದು ವಿಶೇಷ ವಾಗಿತ್ತು. ಅರೋಗ್ಯ ಇಲಾಖೆಯೂ ಸಹ ತನ್ನ ಇಲಾಖೆ ಕಾರ್ಯಕ್ರಮ, ಯೋಜನೆ ಹಾಗೂ ಆರೋ ಗ್ಯ ಸಂಬಂಧಿ ಅರಿವು ಮೂಡಿಸುವ ಯತ್ನ ನಡೆಸಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ