ಆ್ಯಪ್ನಗರ

ಓದುವ ಸಂಸ್ಕೃತಿ ಕ್ಷೀಣ ಆತಂಕಕಾರಿ

ಅಧ್ಯಾಪಕರು ಮತ್ತು ವಿದ್ಯಾರ್ಥಿಗಳಲ್ಲಿ ಓದುವ ಸಂಸ್ಕೃತಿ ಕ್ಷೀಣಿಸುತ್ತಿರುವುದು ಆತಂಕಕಾರಿ ವಿಷಯ ಎಂದು ಸಾಹಿತಿ ಸೋಮಶೇಖರ ಬಿಸಲ್ವಾಡಿ ಬೇಸರ ವ್ಯಕ್ತಪಡಿಸಿದರು.

Vijaya Karnataka 30 Mar 2019, 5:00 am
ಗುಂಡ್ಲುಪೇಟೆ : ಅಧ್ಯಾಪಕರು ಮತ್ತು ವಿದ್ಯಾರ್ಥಿಗಳಲ್ಲಿ ಓದುವ ಸಂಸ್ಕೃತಿ ಕ್ಷೀಣಿಸುತ್ತಿರುವುದು ಆತಂಕಕಾರಿ ವಿಷಯ ಎಂದು ಸಾಹಿತಿ ಸೋಮಶೇಖರ ಬಿಸಲ್ವಾಡಿ ಬೇಸರ ವ್ಯಕ್ತಪಡಿಸಿದರು.
Vijaya Karnataka Web reading culture is deteriorating
ಓದುವ ಸಂಸ್ಕೃತಿ ಕ್ಷೀಣ ಆತಂಕಕಾರಿ


ಪಟ್ಟಣದ ಜೆಎಸ್‌ಎಸ್‌ ಕಲಾ ಮತ್ತು ವಾಣಿಜ್ಯ ಕಾಲೇಜಿನಿಂದ ಶ್ರೀ ಶಿವರಾತ್ರೀಶ್ವ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ಕಾಲೇಜಿನ ಕ್ರೀಡೆ ಮತ್ತು ಸಾಂಸ್ಕೃತಿಕ ವೇದಿಕೆಗಳ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

''ವಿದ್ಯಾರ್ಥಿ ಪ್ರಶ್ನೆಗೆ ಉತ್ತರಿಸಲಾಗದಿದ್ದರೆ ಅಧ್ಯಾಪಕ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡುತ್ತಿದ್ದ ಉದಾಹರಣೆಗಳಿದ್ದವು. ಈ ಕಾರಣಕ್ಕೆ ಅಧ್ಯಾಪಕರು ನಿರಂತರ ಅಧ್ಯಯನಶೀಲರಾಗುತ್ತಿದ್ದರು. ಹಾಗೆಯೇ ಪರೀಕ್ಷೆ ಹೊರತಾಗಿ ಜ್ಞಾನದಾಹದಿಂದ ವಿದ್ಯಾರ್ಥಿಗಳು ಓದುತ್ತಿದ್ದರು. ಆದರೆ ಈಗ ಟಿವಿ , ಮೊಬೈಲ್‌ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳ ಓದಿಗೆ ಅಡ್ಡಿಯಾಗಿದೆ. ಮೊಬೈಲ್‌ ಸಂಪರ್ಕ ಸಾಧನೆ ಎಂಬುದರ ಹೊರತಾಗಿ ಉಳಿದೆಲ್ಲದಕ್ಕೂ ಬಳಕೆಯಾಗುತ್ತಿರುವುದು ವಿಪರ್ಯಾಸ. ನಮ್ಮ ಉದ್ಧಾರ ನಮ್ಮಿಂದಲೇ ಆಗಬೇಕಿರುವ ಕಾರಣ ಕರುಣೆ, ಮಾನವೀಯತೆ, ಸಂಸ್ಕೃತಿ ಕಲಿಸುವ ಶಿಕ್ಷ ಣ ಸದ್ಯದ ಅಗತ್ಯವಾಗಿದೆ ಎಂದು ಪ್ರತಿಪಾದಿಸಿದರು.

ನಿತ್ಯ ಸ್ವಾತಿ ಮಳೆ: ಸಾಗರದಲ್ಲಿ ಬಾಯ್ತೆರೆದುಕೊಳ್ಳುವ ಕಪ್ಪೆ ಚಿಪ್ಪಿನೊಳಗೆ ಬೀಳುವ ಸ್ವಾತಿ ಮಳೆಯ ಹನಿಗಳು ಮುತ್ತಾಗುತ್ತವೆ. ಅದೇ ರೀತಿ ಬೇಲಿ ಮರೆಯಲ್ಲಿ ಬಾಯ್ತೆರೆದುಕೊಳ್ಳುವ ಹಾವಿನ ಬಾಯಲ್ಲಿ ಬೀಳುವ ಮಳೆಯ ಹನಿ ವಿಷವಾಗುತ್ತದೆ. ಕಾಲೇಜಿನಲ್ಲಿ ನಿತ್ಯ ಅಧ್ಯಾಪಕರು ಸ್ವಾತಿ ಮಳೆ ಸುರಿಸುತ್ತಿದ್ದು, ಮುತ್ತು ಅಥವಾ ವಿಷವಾಗುವ ಆಯ್ಕೆ ವಿದ್ಯಾರ್ಥಿಗಳದು ಎಂಬ ಸಂದೇಶ ತಿಳಿಸಿದರು.

ಕಾಲೇಜು ಶಿಕ್ಷ ಣ ಇಲಾಖೆ ಪ್ರಾದೇಶಿಕ ಜಂಟಿ ನಿರ್ದೇಶಕ ಮೂಗೇಶಪ್ಪ, ಜಿಮ್ನಾಸ್ಟಿಕ್‌ ಕೋಚ್‌ ಬಿ.ಬಾಲು, ಪ್ರಾಂಶುಪಾಲರಾದ ಡಾ.ಎನ್‌.ಮಹದೇವಸ್ವಾಮಿ, ವಾಣಿಜ್ಯ ಶಾಸ್ತ್ರ ವಿಭಾಗದ ಮುಖ್ಯಸ್ಥ ಟಿ.ಎಂ.ಮರಿಸ್ವಾಮಿ, ದೈಹಿಕ ಶಿಕ್ಷ ಣ ನಿರ್ದೇಶಕ ಮಲ್ಲುಸ್ವಾಮಿ, ಕಲೆ ಮತ್ತು ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳ ಸಂಘಗಳ ಕಾರ್ಯದರ್ಶಿಗಳಾದ ಪಿ. ಮಹದೇವಪ್ರಸಾದ್‌, ಆರ್‌.ನಿತ್ಯಾನಂದ ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ