ಆ್ಯಪ್ನಗರ

ಬಾಯ್ತೆರೆದ ಗುಂಡಿ: ಸಂಚಾರಕ್ಕೆ ಅಡ್ಡಿ

ಪಟ್ಟಣದ ಬಸವೇಶ್ವರ ನಗರದ ಜನನಿ ಆಸ್ಪತ್ರೆಯ ವೃತ್ತದಲ್ಲಿರುವ ಕುಡಿಯುವ ನೀರಿನ ಗೇಟ್‌ವಾಲ್‌ ಬಾಯಿ ತೆರೆದುಕೊಂಡಿರುವ ಜತೆಗೆ ರಸ್ತೆ ಗುಂಡಿಗಳಿಂದ ತುಂಬಿ ಹೋಗಿ ಸಂಚಾರ ಅಸ್ತವ್ಯಸ್ತಗೊಂಡು ವಾಹನ ಸವಾರರು ಪರದಾಡುವಂತಾಗಿದೆ.

Vijaya Karnataka 21 Sep 2019, 5:00 am
ಕೊಳ್ಳೇಗಾಲ: ಪಟ್ಟಣದ ಬಸವೇಶ್ವರ ನಗರದ ಜನನಿ ಆಸ್ಪತ್ರೆಯ ವೃತ್ತದಲ್ಲಿರುವ ಕುಡಿಯುವ ನೀರಿನ ಗೇಟ್‌ವಾಲ್‌ ಬಾಯಿ ತೆರೆದುಕೊಂಡಿರುವ ಜತೆಗೆ ರಸ್ತೆ ಗುಂಡಿಗಳಿಂದ ತುಂಬಿ ಹೋಗಿ ಸಂಚಾರ ಅಸ್ತವ್ಯಸ್ತಗೊಂಡು ವಾಹನ ಸವಾರರು ಪರದಾಡುವಂತಾಗಿದೆ.
Vijaya Karnataka Web CHN20KGL2_18


ಪಟ್ಟಣದ ಬಸವೇಶ್ವರ ನಗರದ ಎರಡನೇ ಕ್ರಾಸ್‌ ರಸ್ತೆ ಹಾಗೂ ಜನನಿ ಆಸ್ಪತ್ರೆಯ ವೃತ್ತ ಸಮಸ್ಯೆಯ ಆಗರವಾಗಿ ಮಾರ್ಪಟ್ಟು ಸಾರ್ವಜನಿಕರು ವಾಹನ ಸವಾರರು ಪರದಾಡುವಂತಾಗಿದೆ. ಎರಡನೇ ಕ್ರಾಸ್‌ ರಸ್ತೆ ಓ ಶಾಂತಿ ರಸ್ತೆಗೆ ಸೇರುತ್ತದೆ. ಈ ರಸ್ತೆ ಆಸ್ಪತ್ರೆ, ಶಾಲಾ ಕಾಲೇಜುಗಳು, ಸಿಡಿಎಸ್‌ ಸಮುದಾಯ ಭವನ, ಕೈಗಾರಿಕಾ ಬಡಾವಣೆಗೆ ಸಂಪರ್ಕ ಕಲ್ಪಿಸುವುದರಿಂದ ಸದಾ ಜನದಟ್ಟಣಿ ಹಾಗೂ ವಾಹನ ದಟ್ಟಣೆ ಹೆಚ್ಚಾಗಿದೆ. ಹದಗೆಟ್ಟ ರಸ್ತೆ, ಬಾಯಿತೆರೆದ ಗೇಟ್‌ವಾಲ್‌ ಗುಂಡಿ ಸಂಚಾರಕ್ಕೆ ಅಡ್ಡಿಯಾಗುವ ಜತೆಗೆ ವಾಹನಗಳು ರಸ್ತೆಯ ಎರಡು ಬದಿಗಳಲ್ಲಿಯು ಅಡ್ಡಾದಿಡ್ಡಿ ನಿಂತಿರುವುದರಿಂದ ಸಂಚಾರಕ್ಕೆ ಅಡ್ಡಿಯಾಗಿ ಅಪಘಾತದ ಭೀತಿಯಲ್ಲಿವಾಹನ ಸವಾರರು ಸಂಚರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ತೆರೆದ ಗೇಟ್‌ವಾಲ್‌: ಬಸವೇಶ್ವರ ನಗರದ 2ನೇ ಕ್ರಾಸ್‌ ರಸ್ತೆ ಹಾಗೂ ಜಿ.ವಿ.ಗೌಡ ಕಾಲೇಜು ರಸ್ತೆ ಕೂಡುವ ಸ್ಥಳದಲ್ಲಿಕುಡಿಯುವ ನೀರಿನ ಗೇಟ್‌ವಾಲ್‌ ಇದೆ. ಇದು ಬಾಯಿ ತೆರೆದುಕೊಂಡಿದೆ. ಗುಂಡಿ ತುಂಬ ಗಿಡ ಗಂಟಿಗಳು ಬೆಳೆದು ಹತ್ತಿರಕ್ಕೆ ಬರುವ ತನಕ ಗುಂಡಿ ಗೋಚರವಾಗುವುದಿಲ್ಲ, ಕಿರಿದಾದ ರಸ್ತೆಯ ತುದಿಯಲ್ಲಿರುವ ಗೇಟ್‌ವಾಲ್‌ ಇರುವುದರಿಂದ ವಾಹನ ಸವಾರರಿಗೆ ಯಾವ ಕಡೆ ಹೋಗಬೇಕು ಎಂಬುದೇ ಸಮಸ್ಯೆಯಾಗಿದೆ. ರಾತ್ರಿ ವೇಳೆ ಗುಂಡಿ ಕಾಣಿಸುವುದೇ ಇಲ್ಲ, ಗುಂಡಿಗೆ ಮುಚ್ಚಳ ಹಾಕುವ ಕಾರ್ಯವನ್ನು ನಗರಸಭೆ ಮಾಡದೆ ಇರುವುದರಿಂದ ಇದು ಮೃತ್ಯುಕೂಪವಾಗಿ ಮಾರ್ಪಟ್ಟಿದೆ. ಇನ್ನಾದರು ಗುಂಡಿಗೆ ಮುಚ್ಚಳ ಹಾಕಿ ಸಮಸ್ಯೆಯನ್ನು ಪರಿಹರಿಸಬೇಕು ಎಂಬುದು ಇಲ್ಲಿನ ಜನರ ಆಗ್ರಹ.

ಗುಂಡಿಗಳಿಂದ ತುಂಬಿದ ರಸ್ತೆ: ಬಸವೇಶ್ವರ ನಗರದ ಎರಡನೇ ಕ್ರಾಸ್‌ ರಸ್ತೆ ಗುಂಡಿಗಳಿಂದ ತುಂಬಿ ಹೋಗಿದೆ. ರಸ್ತೆಯಲ್ಲಿವಾಹನ ಸಂಚಾರ ಹೆಚ್ಚಾಗಿರುವುದರಿಂದ ವಾಹನ ಸಂಚಾರ ದುಸ್ತರವಾಗಿದೆ. ರಸ್ತೆಯ ಎರಡು ಬದಿಯಲ್ಲಿಸೂಕ್ತ ಚರಂಡಿ ವ್ಯವಸ್ಥೆ ಇಲ್ಲದೆ ಇರುವುದರಿಂದ ರಸ್ತೆಯೇ ಚರಂಡಿಯಾಗಿ ಮಾರ್ಪಟ್ಟಿದೆ. ರಸ್ತೆ ಬದಿಯಲ್ಲಿಗಿಡ ಗಂಟಿ ಬೆಳೆದು ಅಸಹ್ಯ ಮೂಡಿಸುತ್ತಿದೆ. ಆಸ್ಪತ್ರೆಯ ಮುಂಭಾಗ ವಾಹನಗಳನ್ನು ರಸ್ತೆಯ ಎರಡು ಬದಿಗಳಲ್ಲಿಅಡ್ಡಾದಿಡ್ಡಿಯಾಗಿ ನಿಲ್ಲುವುದರಿಂದ ಕೆಲವು ವೇಳೆ ಸಂಚಾರವೇ ಬಂದ್‌ ಆಗುತ್ತದೆ. ರಸ್ತೆಯ ಗುಂಡಿಗಳನ್ನು ಮುಚ್ಚಿ ಅಭಿವೃದ್ಧಿಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕಾಗಿದೆ. ಅಡ್ಡಾದಿಡ್ಡಿಯಾಗಿ ನಿಲ್ಲುವ ವಾಹನಗಳನ್ನು ನಿಯಂತ್ರಿಸುವ ಕಾರ್ಯ ಮಾಡಬೇಕು ಎಂಬುದು ಇಲ್ಲಿನ ನಿವಾಸಿಗಳ ಆಗ್ರಹವಾಗಿದೆ.


ಬಸವೇಶ್ವರ ನಗರದ ಜನನಿ ಆಸ್ಪತ್ರೆಯ ವೃತ್ತದಲ್ಲಿಗೇಟ್‌ವಾಲ್‌ ಗುಂಡಿ ಬಾಯಿ ತೆರೆದುಕೊಂಡಿದೆ, ಗುಂಡಿಯಲ್ಲಿಗಿಡಗಂಟಿಗಳು ಬೆಳೆದು ವಿಷ ಜಂತುಗಳ ವಾಸಸ್ಥಳವಾಗಿ ಮಾರ್ಪಟ್ಟಿದೆ. ಗುಂಡಿ ವೃತ್ತದ ಮಧ್ಯದಲ್ಲಿರುವುದರಿಂದ ರಸ್ತೆ ಎರಡು ಭಾಗವಾಗಿ ಮಾರ್ಪಟ್ಟಿದೆ. ಗುಂಡಿ ರಸ್ತೆಯನ್ನು ಆವರಿಸಿಕೊಂಡಿರುವುದರಿಂದ ಕಾರು, ಆಟೋ ಸೇರಿದಂತೆ ಇತರೆ ಭಾರಿ ವಾಹನಗಳು ಸಂಚಾರ ದುಸ್ತರವಾಗಿದೆ, ರಸ್ತೆ ಗುಂಡಿಗಳಿಂದ ತುಂಬಿ ಸಂಚಾರಕ್ಕೆ ಅಡ್ಡಿಯಾಗಿದ್ದು, ನಗರಸಭೆ ಈ ಬಗ್ಗೆ ಗಮನ ಹರಿಸಬೇಕು.

ಮಹದೇವಸ್ವಾಮಿ, ಬಸವೇಶ್ವರ ನಗರ ನಿವಾಸಿ. ಕೊಳ್ಳೇಗಾಲ.

ಬಸವೇಶ್ವರ ನಗರದ ರಸ್ತೆಗಳ ಅಭಿವೃದ್ಧಿಗೆ ಕ್ರಮ ವಹಿಲಾಗಿದೆ. 2ನೇ ಕ್ರಾಸ್‌ ರಸ್ತೆ ಅಭಿವೃದ್ಧಿಗೆ ಮುಂದೆ ಬರುವ ಅನುದಾನದಲ್ಲಿಕಾಮಗಾರಿ ಸೇರಿಸಲಾಗುವುದು. ಗೇಟ್‌ವಾಲ್‌್ವ ತೆರೆದುಕೊಂಡಿರುವ ಬಗ್ಗೆ ಕುಡಿಯುವ ನೀರು ಸರಬರಾಜು ವಿಭಾಗದ ಸಿಬ್ಬಂದಿಯನ್ನು ಕಳುಹಿಸಿ ಪರಿಶೀಲಿಸಿ ಕ್ರಮ ಕೈಗೊಳ್ಳುತ್ತೇನೆ.

ನಾಗಶೆಟ್ಟಿ. ಪೌರಾಯುಕ್ತರು. ನಗರಸಭೆ ಕೊಳ್ಳೇಗಾಲ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ