ಆ್ಯಪ್ನಗರ

ಎಸ್ಸಿ,ಎಸ್ಟಿ ಸಭೆ : ಗೈರುಹಾಜರಾಗುವ ಅಧಿಕಾರಿಗಳಿಗೆ ನೋಟಿಸ್‌

ತಾಲೂಕು ಮಟ್ಟದಲ್ಲಿ ನಡೆಯುವ ಎಸ್ಸಿ ಎಸ್ಟಿ ಹಿತರಕ್ಷ ಣಾ ಸಭೆಗೆ ಗೈರುರಾಜರಾಗುವ ಅಧಿಕಾರಿಗಳಿಗೆ ನೋಟಿಸ್‌ ನೀಡಲಾಗುವುದು ಎಂದು ತಹಸೀಲ್ದಾರ್‌ ಕುನಾಲ್‌ ಭರವಸೆ ನೀಡಿದರು.

Vijaya Karnataka 15 Feb 2019, 5:00 am
ಕೊಳ್ಳೇಗಾಲ: ತಾಲೂಕು ಮಟ್ಟದಲ್ಲಿ ನಡೆಯುವ ಎಸ್ಸಿ ಎಸ್ಟಿ ಹಿತರಕ್ಷ ಣಾ ಸಭೆಗೆ ಗೈರುರಾಜರಾಗುವ ಅಧಿಕಾರಿಗಳಿಗೆ ನೋಟಿಸ್‌ ನೀಡಲಾಗುವುದು ಎಂದು ತಹಸೀಲ್ದಾರ್‌ ಕುನಾಲ್‌ ಭರವಸೆ ನೀಡಿದರು.
Vijaya Karnataka Web sc st meeting notice to absentee
ಎಸ್ಸಿ,ಎಸ್ಟಿ ಸಭೆ : ಗೈರುಹಾಜರಾಗುವ ಅಧಿಕಾರಿಗಳಿಗೆ ನೋಟಿಸ್‌


ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ತಾಲೂಕು ಮಟ್ಟದ ಎಸ್ಸಿ ಎಸ್ಟಿ ಹಿತರಕ್ಷ ಣಾ ಸಭೆಯ ಅಧ್ಯಕ್ಷ ತೆ ವಹಿಸಿ ಮಾತನಾಡಿದರು. ಸಭೆಗೆ ಹಾಜರಾಗಿ ಇಲಾಖೆಗೆ ಸಂಬಂಧಿಸಿದ ಮಾಹಿತಿ ನೀಡದ ಅಧಿಕಾರಿಗಳು ಹಾಗೂ ಪದೆ ಪದೇ ಸಭೆಗಳಿಗೆ ಗೈರುಹಾಜರಾಗುವ ಅಧಿಕಾರಿಗಳಿಗೆ ನೋಟಿಸ್‌ ನೀಡುವ ಕಾರ್ಯ ಮಾಡಲಾಗುವುದು. ಇನ್ನು 15 ದಿನಗಳ ಒಳಗೆ ಮತ್ತೆ ಸಭೆ ಕರೆದು ಸಮಸ್ಯೆಗÜಳನ್ನು ಆಲಿಸುವ ಜತೆಗೆ ಅವುಗಳನ್ನು ಪರಿಹರಿಸುವ ಕಾರ್ಯ ಮಾಡುವುದಾಗಿ ಭರವಸೆ ನೀಡಿದರು.

ಚಲವಾದಿ ಮಹಾಸಭಾ ಅಧ್ಯಕ್ಷ ಅಣಗಳ್ಳಿ ಬಸವರಾಜು ಮಾತನಾಡಿ, ಎಸ್ಸಿ ಎಸ್ಟಿ ಹಿತರಕ್ಷ ಣಾ ಸಭೆಯನ್ನು ಕನಿಷ್ಠ ಮೂರು ತಿಂಗಳಿಗೊಮ್ಮೆ ಕರೆಯಬೇಕು. ವರ್ಷವಾದರು ಸಭೆ ಕರೆದಿಲ್ಲ. ಸಭೆಗೆ ಸಂಬಂಧಪಟ್ಟ ಅಧಿಕಾರಿಗಳು ಬರುತ್ತಿಲ್ಲ. ಅಧಿಕಾರಿಗಳು ಬಂದರೆ ಮಾತ್ರ ಸಭೆ ಕರೆಯಿರಿ, ಇಲ್ಲವಾದರೆ ಬೇಡ ಎಂದು ಹೇಳಿ ತಮ್ಮ ಅಸಮಾಧಾನವನ್ನು ತೋಡಿಕೊಂಡರು. ಮುಂದೆ ಈಗಾಗದಂತೆ ನೋಡಿಕೊಳ್ಳುವುದಾಗಿ ತಹಸೀಲ್ದಾರ್‌ ಭರವಸೆ ನೀಡಿದರು.

ದೊಡ್ಡಿಂದವಾಡಿ ಸಿದ್ದರಾಜು ಮಾತನಾಡಿ, ತಾಲೂಕಿನ ಎಸ್ಸಿ,ಎಸ್ಟಿ ಜಮೀನುಗಳನ್ನು ಮತ್ತು ಸರಕಾರಿ ಜಮೀನುಗಳನ್ನು, ಕೆರೆಗಳನ್ನು ಒತ್ತುವರಿ ಮಾಡಿಕೊಳ್ಳುತ್ತಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಬೇಕು. ತಾಲೂಕಿನ ಚಿಕ್ಕಿಂದುವಾಡಿ ಬಳಿ ರಾಮರಾವ್‌ ಎಂಬುವವರು ಸರಕಾರಿ ಜಮೀನು ಒತ್ತುವರಿ ಮಾಡಿಕೊಂಡಿದ್ದು, ಈ ಕುರಿತು ಕಳೆದ ಸಭೆಯಲ್ಲಿ ಗಮನಕ್ಕೆ ತಂದು ಒತ್ತುವರಿ ತೆರವುಗೊಳಿಸಿ ಬಡವರಿಗೆ ನೀಡಿ ಎಂದು ತಿಳಿಸಿದ್ದರೂ ಯಾವುದೇ ಪ್ರಯೋಜನ ಆಗಿಲ್ಲ ಎಂದರು.

ತಹಸೀಲ್ದಾರ್‌ ಕುನಾಲ್‌ ಮಾತನಾಡಿ, ಕೆರೆ ಒತ್ತುವರಿ ಮಾಡಿದವರ ವಿರುದ್ಧ ನಾವು ಈಗಾಗಲೇ 119 ಪ್ರಕರಣಗಳನ್ನು ದಾಖಲು ಮಾಡಿದ್ದೇವೆ. ಕೆರೆ ಒತ್ತುವರಿಯನ್ನು ಎಷ್ಟೇ ಪ್ರಭಾವ ಉಳ್ಳವರು ಮಾಡಿದ್ದರೂ ಸಹ ನಾವು ಬಿಡುವುದಿಲ್ಲ, ಕಾನೂನು ಎಲ್ಲರಿಗೂ ಒಂದೇ ಎಂದು ತಿಳಿಸಿದರು.

ಮುಖಂಡ ರಾಜಶೇಖರಮೂರ್ತಿ ಮಾತನಾಡಿ, ಸರಕಾರಿ ಇಲಾಖೆಗಳ ಮೇಲಧಿಕಾರಿಗಳು ಕೆಳಮಟ್ಟದ ಎಸ್ಸಿ,ಎಸ್ಟಿ ಅಧಿಕಾರಿಗಳ ವಿರುದ್ಧ ನಿರಂತರವಾಗಿ ದಬ್ಬಾಳಿಕೆ ನಡೆಸುತ್ತಿರುವ ಬಗ್ಗೆ ಕಿರಿಯ ಅಧಿಕಾರಿಗಳು ಅಳಲು ತೋಡಿಕೊಂಡಿದ್ದು, ದಬ್ಬಾಳಿಕೆ ಮಾಡುವ ಅಧಿಕಾರಿಯ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ತಹಸೀಲ್ದಾರ್‌ ಪ್ರತಿಕ್ರಿಯೆ ನೀಡಿ ಅಂತಹ ಪ್ರಕರಣದಲ್ಲಿ ಯಾರೇ ಆದರೂ ಸರಿ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದರು.

ತಾಲೂಕಿನ ಕೆಲ ದಲಿತ ಬಡಾವಣೆಗಳಲ್ಲಿ ಕುಡಿಯಲು ನೀರು ಇಲ್ಲದೆ ಪರದಾಡುತ್ತಿದ್ದಾರೆ. ಮತ್ತು ನೀರಿನ ತೊಂಬೆಗಳನ್ನು ಸಹ ಶುಚಿಗೊಳಿಸಿಲ್ಲ. ನಗರದ ಜಿ.ಪಿ. ಮಲ್ಲಪ್ಪ ಪುರಂ ಹೊಸ ಬಡಾವಣೆಗೆ ಕಾಲುವೆ ನೀರು ನುಗ್ಗುತ್ತದೆ. ಈ ಕುರಿತು ದೂರು ನೀಡಿದರು ವರ್ಷದಿಂದ ಕ್ರಮ ಕೈಗೊಂಡಿಲ್ಲ. ನಗರಸಭೆ ಆಯುಕ್ತರು ಬಂದಾಗಿನಿಂದ ಇದುವರೆಗೂ ಪರಿಶಿಷ್ಟ ಜಾತಿ ಬೀದಿಗೆ ಒಮ್ಮೆಯು ಭೇಟಿ ನೀಡಿಲ್ಲ ಎಂದು ಮುಖಂಡ ಕೃಷ್ಣ ಅಸಮಾಧಾನ ವ್ಯಕ್ತಪಡಿಸಿದರು.

ಸಭೆಯಲ್ಲಿ ದೊಡ್ಡಿಂದುವಾಡಿ ರಂಗಯ್ಯ, ಹಾವಿನ ಮೂಲೆ ಜಡೆಸ್ವಾಮಿ, ಬಾಬು, ಬಾಲರಾಜು, ತಾಲೂಕು ಪಂಚಾಯಿತಿ ಅಧ್ಯP್ಷÜ ರಾಜೇಂದ್ರ, ಸಮಾಜ ಕಲ್ಯಾಣ ಅಧಿಕಾರಿ ಜಯಕಾಂತ, ಸಿ.ಪಿ.ಐ ಶ್ರೀಕಾಂತ್‌ ಮುಂತಾದವರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ