ಆ್ಯಪ್ನಗರ

ಶಿವಾಜಿ ಜಯಂತಿ ಹಣ ಯೋಧರ ಬ್ಯಾಂಕ್‌ ಖಾತೆಗೆ ಜಮಾ

ಜಿಲ್ಲಾಡಳಿತ ವತಿಯಿಂದ ಮಂಗಳವಾರ ನಡೆಯಬೇಕಿದ್ದ ಶಿವಾಜಿ ಮಹಾರಾಜ್‌ ಜಯಂತಿ ಕಾರ್ಯಕ್ರಮವನ್ನು ರದ್ದು ಗೊಳಿಸಿ ಅದೇ ಕಾರ್ಯಕ್ರಮಕ್ಕೆ ಖರ್ಚಾಗುವ ಹಣವನ್ನು ಹುತಾತ್ಮರಾದ 44 ಮಂದಿ ಯೋಧರ ಬ್ಯಾಂಕ್‌ ಖಾತೆಗೆ ಜಮಾ ಮಾಡಬೇಕೆಂದು ಕರ್ನಾಟಕ ಕ್ಷ ತ್ರಿಯ ಮರಾಠ ಪರಿಷತ್‌ ಜಿಲ್ಲಾಧ್ಯಕ್ಷ ವೆಂಕಟರಾವ್‌ ಸಾಠೆ ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ಅವರಿಗೆ ಮನವಿ ಸಲ್ಲಿಸಿದರು.

Vijaya Karnataka 19 Feb 2019, 5:00 am
ಚಾಮರಾಜನಗರ : ಜಿಲ್ಲಾಡಳಿತ ವತಿಯಿಂದ ಮಂಗಳವಾರ ನಡೆಯಬೇಕಿದ್ದ ಶಿವಾಜಿ ಮಹಾರಾಜ್‌ ಜಯಂತಿ ಕಾರ್ಯಕ್ರಮವನ್ನು ರದ್ದು ಗೊಳಿಸಿ ಅದೇ ಕಾರ್ಯಕ್ರಮಕ್ಕೆ ಖರ್ಚಾಗುವ ಹಣವನ್ನು ಹುತಾತ್ಮರಾದ 44 ಮಂದಿ ಯೋಧರ ಬ್ಯಾಂಕ್‌ ಖಾತೆಗೆ ಜಮಾ ಮಾಡಬೇಕೆಂದು ಕರ್ನಾಟಕ ಕ್ಷ ತ್ರಿಯ ಮರಾಠ ಪರಿಷತ್‌ ಜಿಲ್ಲಾಧ್ಯಕ್ಷ ವೆಂಕಟರಾವ್‌ ಸಾಠೆ ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ಅವರಿಗೆ ಮನವಿ ಸಲ್ಲಿಸಿದರು.
Vijaya Karnataka Web shivaji jayanti money
ಶಿವಾಜಿ ಜಯಂತಿ ಹಣ ಯೋಧರ ಬ್ಯಾಂಕ್‌ ಖಾತೆಗೆ ಜಮಾ


ಮನವಿ ಸ್ವೀಕರಿಸಿದ ನಂತರ ಮಾತನಾಡಿ, ಜಯಂತಿ ಆಚರಣೆಗೆ ಬರುವ ಅನುದಾನವನ್ನು ನಾವು ಆ ಕಾರ್ಯಕ್ರಮಕ್ಕೆ ಬಳಸಬೇಕು ಇಲ್ಲದಿದ್ದರೇ ಹಣ ಸರಕಾರಕ್ಕೆ ವಾಪಸ್‌ ಹೋಗಲಿದೆ. ಅದರಿಂದ ಶಿವಾಜಿ ಜಯಂತಿಯನ್ನು ಜಿಲ್ಲಾಡಳಿತ ವತಿಯಿಂದ ಹಳೇ ಕೆಡಿಪಿ ಸಭಾಂಗಣದಲ್ಲಿ ಸರಳವಾಗಿ ಆಚರಿಸಲಾಗುವುದು, ಸಂಘದ ಸದಸ್ಯರು ಎಲ್ಲರೂ ಭಾಗವಹಿಸಬೇಕೆಂದು ತಿಳಿಸಿದರು.

ಸಭೆಯಲ್ಲಿ ಕರ್ನಾಟಕ ಕ್ಷ ತ್ರಿಯ ಮರಾಠ ಪರಿಷತ್‌, ಅಖಂಡ ಕರ್ನಾಟಕ ಗೊಂಧಳಿ ಸಮಾಜ, ಕರ್ನಾಟಕ ಭಾವಸಾರ್‌ ಕ್ಷ ತ್ರಿಯ ಸಮಾಜ ಮಂಡಳಿ ಸದಸ್ಯರಾದ ವಿನೋದ್‌ ಕುಮಾರ್‌ ಸುಲಾಖೆ, ಪ್ರಕಾಶ್‌, ಎಸ್‌.ಆರ್‌.ಸಿಂತ್ರೆ, ಶಂಕರ್‌ರಾವ್‌ವಾಕುಡೆ, ಶ್ರೀನಿವಾಸ್‌ರಾವ್‌ ಚೌಹಾಣ್‌, ಸಿ.ಡಿ.ನಾಗರಾಜುನಾಜರೆ, ಶ್ರೀನಿವಾಸರಾವ್‌ಸಾಳಂಕೆ, ಮಮತಾಬಾಯಿಧುಮಾಳೆ, ರವಿರಾವ್‌ಜಾಧವ್‌, ಲೋಕೇಶ್‌ರಾವ್‌ಜಾಧವ್‌, ಶಿವಕುಮಾರ್‌ರಾವ್‌ ವಾಕುಡೆ, ಬಾಬುರಾವ್‌ ಸಾಠಿ ಚಂದ್ರುಜಗತಾಫ್‌, ಪೃಥ್ವಿರಾಜ್‌ ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ