ಆ್ಯಪ್ನಗರ

ಶ್ರೀಕೃಷ್ಣ ಮಾನವೀಯ ಮೌಲ್ಯಗಳ ಪ್ರತಿಪಾದಕ

ಮಾನವೀಯ ಮೌಲ್ಯಗಳ ಪ್ರತಿಪಾದಕನಾಗಿದ್ದ ಶ್ರೀ ಕೃಷ್ಣನ ಆದರ್ಶ, ಸರಳತೆ ಅನುಕರಣೀಯ ಎಂದು ಜಿಲ್ಲಾಧಿಕಾರಿ ಬಿ. ಬಿ. ಕಾವೇರಿ ತಿಳಿಸಿದರು.

Vijaya Karnataka 3 Sep 2018, 5:00 am
ಚಾಮರಾಜನಗರ : ಮಾನವೀಯ ಮೌಲ್ಯಗಳ ಪ್ರತಿಪಾದಕನಾಗಿದ್ದ ಶ್ರೀ ಕೃಷ್ಣನ ಆದರ್ಶ, ಸರಳತೆ ಅನುಕರಣೀಯ ಎಂದು ಜಿಲ್ಲಾಧಿಕಾರಿ ಬಿ. ಬಿ. ಕಾವೇರಿ ತಿಳಿಸಿದರು.
Vijaya Karnataka Web sri krishna is a proponent of human values
ಶ್ರೀಕೃಷ್ಣ ಮಾನವೀಯ ಮೌಲ್ಯಗಳ ಪ್ರತಿಪಾದಕ


ನಗರದ ಜೆ.ಎಚ್‌. ಪಟೇಲ್‌ ಸಭಾಂಗಣದಲ್ಲಿ ಭಾನುವಾರ ಜಿಲ್ಲಾಡಳಿತದಿಂದ ಆಯೋಜಿಸಿದ್ದ ಶ್ರೀಕೃಷ್ಣ ಜಯಂತಿ ಉದ್ಘಾಟಿಸಿ ಮಾತನಾಡಿದರು.

ಬಾಲ್ಯಾವಸ್ಥೆಯಲ್ಲೇ ಶ್ರೀಕೃಷ್ಣ ತನ್ನ ಚಿನ್ನಾಟ, ತುಂಟಾಟಗಳಿಂದ ಎಲ್ಲರ ಮನಗೆದ್ದಿದ್ದ. ಆತನ ಸತ್ಯಮೇವ ಜಯತೆ ಎಂಬ ವಾಕ್ಯವೂ ಸತ್ಯ ಎಂದಿಗೂ ಜಯಸುತ್ತದೆ ಎಂಬುದನ್ನು ಸೂಚಿಸುತ್ತದೆ. ಹೀಗಾಗಿ ನಾವೆಲ್ಲರೂ ಸತ್ಯಕ್ಕೆ ಬೆಲೆ ಕೊಡಬೇಕು. ಅಲ್ಲದೇ ಸತ್ಯ ಮಾರ್ಗದಲ್ಲಿ ನಡೆಯಬೇಕು ಎಂದರು.

ಅಧರ್ಮ ನಿರ್ಮೂಲನೆ: ಸಂಸ್ಕೃತ ಪಾಠಶಾಲೆ ಪ್ರಾಚಾರ್ಯ ಪ್ರದೀಪ್‌ಕುಮಾರ್‌ ದೀಕ್ಷಿತ್‌ ಮಾತನಾಡಿ, ಶ್ರೀಕೃಷ್ಣ ಜನ್ಮ ತಾಳಿ, ಅಧರ್ಮದ ನಿರ್ಮೂಲನೆಗಾಗಿ, ಪಾಂಡವರ ಮೂಲಕ ಧರ್ಮ ಸ್ಥಾಪನೆಗೆ ಮುಂದಾಗಿದ್ದ. ಅಲ್ಲದೇ ರಾಜ ಧರ್ಮ ಹೇಗಿರಬೇಕೆಂಬುದನ್ನು ಆತ ಸಾರಿದ್ದ. ಇಂದಿನ ರಾಜಕೀಯ ರಂಗದಲ್ಲಿ ಶ್ರೀಕೃಷ್ಣನ ಧರ್ಮ, ಅದರ ಪಾಲನೆಯಾದರೆ ನಮ್ಮೆಲ್ಲ ಸಮಸ್ಯೆಗಳಿಗೆ ಪರಿಹಾರ ದೊರೆಯಲಿದೆ ಎಂದರು.

ಜೀವನೋತ್ಸಾಹ: ಜಿಲ್ಲಾ ಪಂಚಾಯಿತಿ ಸಿಇಒ ಡಾ. ಕೆ. ಹರೀಶ್‌ಕುಮಾರ್‌ ಅವರು ಮಾತನಾಡಿ, ಶ್ರೀಕೃಷ್ಣ ಜೀವನೋತ್ಸಾಹದ ಸಂಕೇತ. ಆತನ ಪ್ರಬುದ್ಧತೆಯಿಂದ ಜಯಕ್ಕೆ ಅಂದು ಜಯ ದೊರೆಯಿತು. ಇಂದಿಗೂ ಅಂಥ ಮೌಲ್ಯಗಳು, ಪ್ರಬುದ್ಧ ಮನಸ್ಥಿತಿಗಳ ಅಗತ್ಯತೆ ಇದೆ ಎಂದು ಸಲಹೆ ನೀಡಿದರು.

ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಗೀತಾ ಪ್ರಸನ್ನ, ಶ್ರೀಕೃಷ್ಣ ಪ್ರತಿಷ್ಠಾನದ ಅಧ್ಯಕ್ಷ ಸುರೇಶ್‌ ಋುಗ್ವೇದಿ, ಕನ್ನಡ ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಚ್‌. ಚೆನ್ನಪ್ಪ ಇತರರು ಹಾಜರಿದ್ದರು.

ಇದೇ ಸಂದರ್ಭದಲ್ಲಿ ನಾನಾ ಮಕ್ಕಳು ಶ್ರೀಕೃಷ್ಣ ವೇಷಧಾರಿಗಳಾಗಿ ಗಮನ ಸೆಳೆದರು. ನಂತರ ಅಕ್ಷತಾ ಜೈನ್‌ ತಂಡದವರಿಂದ ನೃತ್ಯರೂಪಕ ಕಾರ್ಯಕ್ರಮ ನಡೆಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ