ಆ್ಯಪ್ನಗರ

ಉಗ್ರರ ಸಾವಿನ ಬಗ್ಗೆ ಸಂಶಯ: ಯುವಕನಿಗೆ ಥಳಿತ

ವಾಹಿನಿಯೊಂದರ ಸುದ್ದಿಯನ್ನು ಆಧರಿಸಿ ಉಗ್ರರ ಸಾವಿನ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅನುಮಾನ ವ್ಯಕ್ತಪಡಿಸಿದ್ದ ನಗರದ ಯುವಕನೊಬ್ಬನಿಗೆ ಹಿಂದೂಪರ ಸಂಘಟನೆಯೊಂದರ ಸದಸ್ಯರು ಸಾರ್ವಜನಿಕವಾಗಿ ಥಳಿಸಿದ್ದಾರೆ.

Vijaya Karnataka 2 Mar 2019, 5:00 am
ಚಾಮರಾಜನಗರ: ವಾಹಿನಿಯೊಂದರ ಸುದ್ದಿಯನ್ನು ಆಧರಿಸಿ ಉಗ್ರರ ಸಾವಿನ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅನುಮಾನ ವ್ಯಕ್ತಪಡಿಸಿದ್ದ ನಗರದ ಯುವಕನೊಬ್ಬನಿಗೆ ಹಿಂದೂಪರ ಸಂಘಟನೆಯೊಂದರ ಸದಸ್ಯರು ಸಾರ್ವಜನಿಕವಾಗಿ ಥಳಿಸಿದ್ದಾರೆ.
Vijaya Karnataka Web suspicion about the death of terrorists throw a young man
ಉಗ್ರರ ಸಾವಿನ ಬಗ್ಗೆ ಸಂಶಯ: ಯುವಕನಿಗೆ ಥಳಿತ


ನಗರದಲ್ಲಿ ಅಂಗಡಿಯೊಂದನ್ನು ನಡೆಸುತ್ತಿರುವ ಯುವಕ ಪ್ರಕಾಶ್‌ ಗೌಡ ಅವರು ಸುದ್ದಿವಾಹಿನಿಯೊಂದನ್ನು ಉಲ್ಲೇಖಿಸಿ ''300 ಉಗ್ರರ ಹೆಣ ಬೀಳಿಸಿದ್ದೀವಿ ಎಂದು ಟಾಂಟಾಂ ಹೊಡೀತಿದ್ದೀರಲ್ಲಾ, ಈಗ ನೋಡಿದ್ರೆ ಒಂದು ಹೆಣವೂ ಇಲ್ಲವಲ್ಲಾ, ಸಂತ್ರಸ್ತರಾರ‍ಯರು ಚಚ್ಚಿಕೊಂಡು ಅಳುತ್ತನೂ ಇಲ್ವಲ್ಲಾ '' ಎಂದು ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದರು.

ಇದರಿಂದ ಕೆರಳಿದ ಹಿಂದೂಪರ ಸಂಘಟನೆ ಯುವಕರು, ಆತನ ಅಂಗಡಿಗೆ ನುಗ್ಗಿ ಥಳಿಸಿದ್ದಾರೆ. ಅಲ್ಲದೇ ಪೊಲೀಸ್‌ ಠಾಣೆಗೆ ಕರೆದೊಯ್ದು ದೇಶ ವಿರೋಧಿ ಪ್ರಕರಣ ದಾಖಲಿಸುವಂತೆ ಒತ್ತಾಯಿಸಿದ್ದಾರೆ. ಆದರೆ, ಆ ಪೋಸ್ಟ್‌ ಗಮನಿಸಿದ ಪೊಲೀಸರು, ಇದರಲ್ಲಿ ದೇಶ ವಿರೋಧಿ ಹೇಳಿಕೆ ಇಲ್ಲವೆಂಬುದನ್ನು ಮನಗಂಡು ಪ್ರಕರಣ ದಾಖಲಿಸಿಲ್ಲ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ