Please enable javascript.ನಗರದಲ್ಲಿ 65 ನೇ,ನಗರದಲ್ಲಿ 65 ನೇ ಅಖಿಲ ಭಾರತ ಸಹಕಾರ ಸಪ್ತಾಹಕ್ಕೆ ಚಾಲನೆ - the 65th all india cooperation week will be launched in the city - Vijay Karnataka

ನಗರದಲ್ಲಿ 65 ನೇ ಅಖಿಲ ಭಾರತ ಸಹಕಾರ ಸಪ್ತಾಹಕ್ಕೆ ಚಾಲನೆ

Vijaya Karnataka 21 Nov 2018, 5:00 am
Subscribe

ನಗರದ ಹಳೇ ತರಕಾರಿ ಮಾರುಕಟ್ಟೆ ಸಮೀಪದ ಮರ್ಚೆಂಟ್ಸ್‌ ಕ್ರೆಡಿಟ್‌ ಕೋ-ಆಪರೇಟಿವ್‌ ಕಚೇರಿ ಆವರಣದಲ್ಲಿ 65 ನೇ ಅಖಿಲ ಭಾರತ ಸಹಕಾರ ಸಪ್ತಾಹ ಕಾರ್ಯಕ್ರಮ ನಡೆಯಿತು.

the 65th all india cooperation week will be launched in the city
ನಗರದಲ್ಲಿ 65 ನೇ ಅಖಿಲ ಭಾರತ ಸಹಕಾರ ಸಪ್ತಾಹಕ್ಕೆ ಚಾಲನೆ
ಚಾಮರಾಜನಗರ : ನಗರದ ಹಳೇ ತರಕಾರಿ ಮಾರುಕಟ್ಟೆ ಸಮೀಪದ ಮರ್ಚೆಂಟ್ಸ್‌ ಕ್ರೆಡಿಟ್‌ ಕೋ-ಆಪರೇಟಿವ್‌ ಕಚೇರಿ ಆವರಣದಲ್ಲಿ 65 ನೇ ಅಖಿಲ ಭಾರತ ಸಹಕಾರ ಸಪ್ತಾಹ ಕಾರ್ಯಕ್ರಮ ನಡೆಯಿತು.

ಸಹಕಾರಿಸಂಘಗಳ ಪದಾಧಿಕಾರಿಗಳು ಸಹಕಾರಿ ಸಂಘಗಳ ಪಿತಾಮಹ ಸಿದ್ದನಗೌಡ ಸಣ್ಣಗೌಡನ ಪಾಟೀಲ್‌ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಸಹಕಾರಿಗಳಾದ ಎಂ.ಚಂದ್ರಶೇಖರಯ್ಯ, ಸಿದ್ದನಗೌಡರು ಭಾರತ ದೇಶದಲ್ಲಿಯೇ ಪ್ರಥಮ ಬಾರಿಗೆ ಇಂದಿನ ಗದಗ ಜಿಲ್ಲೆಯ ಕಣಗಿನ ಹಾಳ ಗ್ರಾಮದಲ್ಲಿ ಜನಪರ ಸಂಘ ಆರಂಭಿಸಿದರು. ಈ ಸಂಘ ಇಂದು ರಾಜ್ಯಾದ್ಯಂತ ಪಸರಿಸಿದೆ. ಇವರ ಜನಪರ ಕಾಳಜಿಯಿಂದ ಲಕ್ಷಾಂತರ ಮಂದಿ ಜೀವನ ನಡೆಸಲು ಅನುಕೂಲವಾಗಿದೆ ಎಂದು ತಿಳಿಸಿದರು.

ಲೆಕ್ಕ ಪರಿಶೋಧಕ ಸಿ.ಎಂ.ವೆಂಕಟೇಶ್‌ ಮಾತನಾಡಿ, ಸಹಕಾರಿ ಸಪ್ತಾಹವನ್ನು ಮಂದಿನ ವರ್ಷದಲ್ಲಿ ನಡೆಸುವ ಸಪ್ತಾಹದ 7ದಿನಗಳಲ್ಲಿ ಸಹಕಾರದ ಮಹತ್ವ ಕುರಿತ ನೀಡುವ ಕಾರ್ಯಕ್ರಮ ಆಯೋಜಿಸಲಾಗುವುದು ಎಂದರು.

ರೇನಾಬ್ಯಾಂಕ್‌ ಅಧ್ಯಕ್ಷ ಪ್ರಕಾಶ್‌ ಮಾತನಾಡಿ, ಸಹಕಾರ ಸಂಘಗಳು ಈ ರೀತಿಯ ಕಾರ್ಯಕ್ರಮಗಳನ್ನು ಹೆಚ್ಚುಹೆಚ್ಚು ಹಮ್ಮಿಕೊಂಡು ಸಹಕಾರಿ ಚಳವಳಿಯನ್ನು ಗಟ್ಟಿಗೊಳಿಸಿ ಏಕತೆ ಸಾಧಿಸಬೇಕು ಎಂದು ತಿಳಿಸಿದರು.

ಮರ್ಚೆಂಟ್ಸ್‌ ಸೌಹಾರ್ದ ಸಹಕಾರ ಸಂಘದ ಅಧ್ಯಕ್ಷ ಬಾಲಸುಬ್ರಹ್ಮಣ್ಯ, ನವ್ಯ ಕರ್ನಾಟಕ ಸೌಹಾರ್ದ ಸಂಘದ ಅಧ್ಯಕ್ಷ ಎಂ.ನಂಜುಂಡಸ್ವಾಮಿ, ಸಿದ್ದಮಲ್ಲೇಶ್ವರ ಸಹಕಾರ ಸಂಘದ ಅಧ್ಯಕ್ಷ ರಾಮಸಮುದ್ರ ಬಾಬು, ಪಾರ್ವತಿ ಸಹಕಾರ ಸಂಘದ ಕುದೇರು ಮಹದೇವಸ್ವಾಮಿ, ರಾಜಣ್ಣ, ಸಿದ್ದಮಲ್ಲಸ್ವಾಮಿ, ಸಿಇಓ ಶಿವಕುಮಾರ್‌, ಆರ್‌.ಬಾಲಚಂದ್ರು, ಯಶೋಧ, ಪದ್ಮನಾಭ, ಕೀರ್ತಿ, ಉಮೇಶ್‌, ರಶ್ಮಿ ಸೇರಿದಂತೆ ಮತ್ತಿತರರು ಹಾಜರಿದ್ದರು.


ಕಾಮೆಂಟ್‌ ಮಾಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ