ಆ್ಯಪ್ನಗರ

ನಗರದಲ್ಲಿ ರಾಜ್ಯಮಟ್ಟದ ಕದಂಬ ಸಮ್ಮೇಳನ ಡಿ.20ಕ್ಕೆ

ಜಿಲ್ಲಾ ಕೇಂದ್ರವಾದ ಚಾಮರಾಜನಗರದಲ್ಲಿ ಕದಂಬ ಸೇನೆ ರಾಜ್ಯ ಘಟಕದ ವತಿಯಿಂದ ಡಿ.20 ರಂದು ರಾಜ್ಯಮಟ್ಟದ ಕದಂಬ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ ಎಂದು ಕದಂಬ ಕನ್ನಡ ಸೇನೆ ರಾಜ್ಯಾಧ್ಯಕ್ಷ ಅಂಬರೀಷ್‌ ತಿಳಿಸಿದರು.

Vijaya Karnataka 29 Nov 2018, 5:00 am
ಚಾಮರಾಜನಗರ : ಜಿಲ್ಲಾ ಕೇಂದ್ರವಾದ ಚಾಮರಾಜನಗರದಲ್ಲಿ ಕದಂಬ ಸೇನೆ ರಾಜ್ಯ ಘಟಕದ ವತಿಯಿಂದ ಡಿ.20 ರಂದು ರಾಜ್ಯಮಟ್ಟದ ಕದಂಬ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ ಎಂದು ಕದಂಬ ಕನ್ನಡ ಸೇನೆ ರಾಜ್ಯಾಧ್ಯಕ್ಷ ಅಂಬರೀಷ್‌ ತಿಳಿಸಿದರು.
Vijaya Karnataka Web the state level and kadamba conference will be held at d20
ನಗರದಲ್ಲಿ ರಾಜ್ಯಮಟ್ಟದ ಕದಂಬ ಸಮ್ಮೇಳನ ಡಿ.20ಕ್ಕೆ


ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2012ರಲ್ಲಿ ನಗರದಲ್ಲಿ ಚಾಮರಾಜನಗರ ಶಾಪಗ್ರಸ್ಥವಲ್ಲ ಪುಣ್ಯಭೂಮಿ ಎಂಬ ವಿಚಾರ ಕುರಿತು 2 ದಿನಗಳ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕದಂಬ ಕರ್ನಾಟಕ ಸೇನೆ ಸ್ಥಾಪನೆಯಾಗಿ 6 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಮೊಟ್ಟ ಮೊದಲ ಬಾರಿಗೆ ರಾಜ್ಯಕದಂಬ ಒಂದು ದಿನದ ಸಮ್ಮೇಳನ ಆಯೋಜಿಸಲಾಗುತ್ತಿದೆ ಎಂದು ಹೇಳಿದರು.

ಅಂದು ನಗರದ ಚಾಮರಾಜೇಶ್ವರ ದೇವಸ್ಥಾನದ ಆವರಣದಿಂದ ನಾನಾ ಕಲಾತಂಡಗಳ ಮೆರವಣಿಗೆ ನಡೆಯಲಿದೆ. ಮೆರವಣಿಗೆ ನಂತರ ವೇದಿಕೆ ಕಾರ್ಯಕ್ರಮ ನಗರದ ಜಿಲ್ಲಾಡಳಿತ ಭವನದ ಜೆ.ಎಚ್‌. ಪಟೇಲ್‌ ಸಭಾಂಗಣದಲ್ಲಿ ಜರುಗಲಿದೆ. ಕರ್ನಾಟಕ ಏಕೀಕರಣ ಹಾಗೂ ಕದಂಬ ಇತಿಹಾಸ ಸಾರುವ ಎರಡು ಗೋಷ್ಠಿಗಳು, ರಾಜ್ಯದ ನಾನಾ ಕ್ಷೇತ್ರಗಳಲ್ಲಿ ಗಣನೀಯ ಸೇವೆಸಲ್ಲಿಸದ ಮಹನೀಯರನ್ನು ಗುರುತಿಸಿ ಕದಂಬ ಸೇವಾರತ್ನ ಕದಂಬ ಕಲಾರತ್ನ ಶ್ರೀ, ಕದಂಬ ವೈದ್ಯರತ್ನಶ್ರೀಮರಣೋತ್ತರವಾಗಿ ನೀಡುವ ಕದಂಬ ಗೌರವ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದರು. ಅಂದು ಸಂಜೆ 6 ಸಮಾರೋಪ ಸಮಾರಂಭ ನಡೆಯಲಿದೆ.

ರಾಜ್ಯ ಕನ್ನಡ ಮತ್ತು ಸಂಸ್ಕೃತಿ ಸಚಿವೆ ಜಯಮಾಲಾ, ಕನ್ನಡ ಚಳವಳಿ ವಾಟಾಳ್‌ ಪಕ್ಷದ ಅಧ್ಯಕ್ಷ ವಾಟಾಳ್‌ ನಾಗರಾಜು ಸೇರಿದಂತೆ ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು, ಜನಪ್ರತಿನಿಧಿಗಳನ್ನು ಸಮ್ಮೇಳನದಲ್ಲಿ ಭಾಗವಹಿಸುವಂತೆ ಕೋರಲಾಗಿದೆ ಎಂದರು.

ಗೋಷ್ಠಿಯಲ್ಲಿ ರಾಜ್ಯ ಸಮಿತಿಸದಸ್ಯ ಶಂಭುನಾಯಕ, ಜಿಲ್ಲಾಧ್ಯಕ್ಷ ಕುಮಾರ್‌,ಗುಂಡ್ಲುಪೇಟೆ ತಾಲೂಕು ಅಧ್ಯಕ್ಷ ಜಹೀರ್‌, ದಡದಹಳ್ಳಿ ಶಂಕರ್‌ ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ