ಆ್ಯಪ್ನಗರ

ಸಂವಿಧಾನ ಜಾಗೃತಿಗೆ ವಾಕಥಾನ್

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಹಾಗೂ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಸಂವಿಧಾನದ ಬಗ್ಗೆ ಜಾಗತಿ ಮೂಡಿಸುವ ನಿಟ್ಟಿನಲ್ಲಿ ನಡೆದ ವಾಕಥಾನ್ ಕಾರ‌್ಯಕ್ರಮಕ್ಕೆ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ದ ಆವರಣದಲ್ಲಿ ಚಾಲನೆ ನೀಡಿದರು.

Vijaya Karnataka 24 Jan 2020, 9:21 pm
ಚಾಮರಾಜನಗರ: ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಹಾಗೂ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಸಂವಿಧಾನದ ಬಗ್ಗೆ ಜಾಗತಿ ಮೂಡಿಸುವ ನಿಟ್ಟಿನಲ್ಲಿ ನಡೆದ ವಾಕಥಾನ್ ಕಾರ‌್ಯಕ್ರಮಕ್ಕೆ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ದ ಆವರಣದಲ್ಲಿ ಚಾಲನೆ ನೀಡಿದರು.
Vijaya Karnataka Web ಚಾಮರಾಜನಗರದಲ್ಲಿ ಸಂವಿಧಾನ ಜಾಗೃತಿ ಅಂಗವಾಗಿ ವಾಕಥಾನ್ ನಡೆಯಿತು.


ಬಳಿಕ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಡಿ.ವಿ.ಪಾಟೀಲ್ ಮಾತನಾಡಿ, ‘‘ಡಾ.ಬಿ. ಆರ್.ಅಂಬೇಡ್ಕರ್ ಅವರು ದೇಶದ ಭದ್ರತೆಗೆ ಉತ್ಕೃಷ್ಟವಾದ ಸಂವಿಧಾನವನ್ನು ರಚನೆ ಮಾಡಿ ಕೊಟ್ಟಿದ್ದು, ಅವರು ಸಂವಿಧಾನದಲ್ಲಿ ಅಳವಡಿಸಿ ರುವ ಮೂಲಭೂತ ಹಕ್ಕುಗಳಿಂದಾಗಿ ನಾವು ಸಮಾಜದಲ್ಲಿ ಉನ್ನತ ಹುದ್ದೆಯಲ್ಲಿ ಸೇವೆಸಲ್ಲಿಸುವ ಅವಕಾಶ ಸಿಕ್ಕಿದೆ. ನಾವು ಸ್ವಚ್ಛಂದವಾಗಿ ಬದುಕುವ ಹಕ್ಕನ್ನು ಒದಗಿಸಲಾಗಿದೆ,’’ ಎಂದರು.

‘‘2019 ನ.26 ರಿಂದ 2020 ನ.26 ರವರೆಗೂ ಸಂವಿಧಾನದ ಕುರಿತು ಜಾಗತಿ ಮೂಡಿಸುವ ಕಾರ‌್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದು ಕರ್ನಾಟಕ ಹೈಕೋರ್ಟ್ ರಾಜ್ಯ ಕಾನೂನುಸೇವಾ ಪ್ರಾಧಿಕಾರಕ್ಕೆ ಆದೇಶ ನೀಡಿದೆ. ಆ ಆದೇಶದನ್ವಯ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ವತಿಯಿಂದ ವಾಕಥಾನ್ ಕಾರ‌್ಯಕ್ರಮ ಹಮ್ಮಿಕೊಳ್ಳಲಾಗಿದೆ,’’ ಎಂದು ಹೇಳಿದರು.

ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ಮಾತನಾಡಿ,‘ ‘ಅಂಬೇಡ್ಕರ್ ಅವರು ಹಲವು ದೇಶಗಳ ಸಂವಿಧಾನ ಗಳನ್ನು ಅಧ್ಯಯನ ಮಾಡಿ, ನಮ್ಮ ದೇಶಕ್ಕೆ ಒಂದು ಅತ್ಯುತ್ತಮ ಸಂವಿಧಾನ ನೀಡಿದ್ದಾರೆ, ಮೂಲಭೂತ ಹಕ್ಕುಗಳ ಜತೆ ಕರ್ತವ್ಯ ಪಾಲನೆಗೂ ಮುಂದಾದರೆ ಮಾತ್ರ ಸಂವಿಧಾನ ಜಾಗತಿ ಅರ್ಥ ಪೂರ್ಣವಾಗ ಲಿದೆ,’’ ಎಂದು ಸಲಹೆ ನೀಡಿದರು.

ಬಿಳಿಟೋಪಿ, ಟೀಷರ್ಟ್ ಧರಿಸಿದ್ದ ವಿದ್ಯಾರ್ಥಿಗಳು, ವಕೀಲರು, ಸಂಘ ಸಂಸ್ಥೆಗಳ ಮುಖಂಡರು ಸಂವಿಧಾನ ಜಾಗತಿ ಘೋಷಣಾ ಲಕಗಳನ್ನು ಹಿಡಿದುಕೊಂಡು ನ್ಯಾಯಾಲಯ ಆವರಣದಿಂದ ಹೊರಟು ಕರಿನಂಜನ ಪುರ ರಸ್ತೆ, ಗುಂಡ್ಲುಪೇಟೆ ವತ್ತ, ದೊಡ್ಡಂಗಡಿಬೀದಿ, ಚಿಕ್ಕಅಂಗಡಿಬೀದಿ, ಚಾಮರಾಜೇಶ್ವರ ದೇವಸ್ಥಾನ, ಭುವನೇಶ್ವರಿವತ್ತದಿಂದ ಬಿ.ರಾಚಯ್ಯ ಜೋಡಿರಸ್ತೆಯ ಮೂಲಕ ತೆರಳಿ, ಜಿಲ್ಲಾಡಳಿತಭವನದ ಆವರಣದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು. ರಾಷ್ಟ್ರಗೀತೆ ಹಾಡುವುದರೊಂದಿಗೆ ಸಂವಿಧಾನ ವಾಕಥಾನ್ ಅನ್ನು ಮುಕ್ತಾಯಗೊಳಿಸಿದರು.

ಇದೇವೇಳೆ ಸಂವಿಧಾನ ಜಾಗತಿ ಕುರಿತ ಪ್ರತಿಜ್ಞಾವಿಧಿಯನ್ನು ನ್ಯಾಯಾಧೀಶ ರಾದ ಡಿ.ವಿ.ಪಾಟೀಲ್ ಬೋಧಿಸಿದರು. ಶಾಸಕ ಸಿ.ಪುಟ್ಟರಂಗಶೆಟ್ಟಿ, ಜಿಲ್ಲಾ ಮತ್ತು ಸೆಷನ್ಸ್ ಹೆಚ್ಚುವರಿ ನ್ಯಾಯಾಧೀಶರಾದ ಡಿ.ವಿನಯ್, ಸಿವಿಲ್ ನ್ಯಾಯಾಧೀಶ ರಮೇಶ್, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಿ.ಜಿ.ವಿಶಾಲಾಕ್ಷಿ, ನ್ಯಾಯಾಧೀಶರಾದ ಗಣಪತಿ. ಬಿ.ಬದಾಮಿ, ಸ್ಮಿತಾ, ಮಹಮದ್ ರೋಷನ್, ಸರಕಾರಿ ಅಭಿಯೋಜಕ ಲೋಕೇಶ್, ಯೋಗೇಶ್, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಉಮ್ಮತ್ತೂರು ಇಂದೂಶೇಖರ್, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಂ.ಸಿ.ರವಿ, ರೋಟರಿ, ಲಯನ್, ರೆಡ್‌ಕ್ರಾಸ್ ಸೊಸೈಟಿಯ ಪದಾಧಿಕಾರಿಗಳು, ನರ್ಸಿಂಗ್, ನಾನಾ ಪದವಿ, ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಸಂವಿಧಾನ ನಮ್ಮ ದೇಶಕ್ಕೆ ನೀಡಿರುವ ದೊಡ್ಡ ಕೊಡುಗೆಯಾಗಿದ್ದು, ಇದು ನಮ್ಮ ಏಳಿಗೆಗೆ ಆದರ್ಶಪ್ರಾಯವಾಗುವುದರ ಜತೆಗೆ ಕಾನೂನಡಿ ಪ್ರತಿಯೊಬ್ಬರಿಗೂ ಸಮಾನತೆ ನೀಡಿದೆ.
-ಸಿ.ಪುಟ್ಟರಂಗಶೆಟ್ಟಿ ಶಾಸಕ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ