ಆ್ಯಪ್ನಗರ

ಶೌಚಾಲಯ ಇದ್ದರೂ ಬಳಕೆಗಿಲ್ಲ !

ನಗರದ ಶಿಕ್ಷ ಕರ ಭವನದ ಮುಂಭಾಗ ನಿರ್ಮಿಸಿರುವ ಶೌಚಾಲಯಗಳು ಬಳಕೆಯಾಗದೇ ನಿರುಪಯುಕ್ತವಾಗಿವೆ.

Vijaya Karnataka 24 Nov 2018, 5:00 am
ಹರವೆ ಮಹೇಶ್‌ ಚಾಮರಾಜನಗರ
Vijaya Karnataka Web toilet wasted
ಶೌಚಾಲಯ ಇದ್ದರೂ ಬಳಕೆಗಿಲ್ಲ !


ನಗರದ ಶಿಕ್ಷ ಕರ ಭವನದ ಮುಂಭಾಗ ನಿರ್ಮಿಸಿರುವ ಶೌಚಾಲಯಗಳು ಬಳಕೆಯಾಗದೇ ನಿರುಪಯುಕ್ತವಾಗಿವೆ.

ನಗರದ ಭುವನೇಶ್ವರಿ ವೃತ್ತದ ಸಮೀಪ ಕಳೆದ 20 ವರ್ಷಗಳ ಹಿಂದೆ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷ ಕರು ಸಭೆ, ಸಮಾರಂಭ ಮತ್ತು ಶೈಕ್ಷ ಣಿಕ ಚಟುವಟಿಕೆಗಳನ್ನು ನಡೆಸಲು ತಾಲೂಕು ಪ್ರಾಥಮಿಕ ಶಾಲಾ ಶಿಕ್ಷ ಕರ ಭವನ ನಿರ್ಮಿಸಲಾಗಿತ್ತು.

ಭವನÜ ಉದ್ಘಾಟನೆಯಾದ ತರುವಾಯದಿಂದಲೂ ಶೈಕ್ಷ ಣಿಕ ಚಟುವಟಿಕೆಗಳು ಸೇರಿದಂತೆ ಇತರೇ ಕಾರ್ಯಕ್ರಮಗಳು ನಡೆಯುತ್ತಲೇ ಇವೆ, ಆದರೆ ಶಿಕ್ಷ ಕರಿಗಾಗಿಯೇ ಭವನದ ಮುಂಭಾಗ ನಿರ್ಮಿಸಲಾಗಿರುವ ಶೌಚಾಲಯಗಳಿಗೆ ಬೀಗ ಜಡಿದು ಬಳಕೆ ಮಾಡದೇ ನಿರುಪಯುಕ್ತವಾಗಿವೆ. ಒಂದೆಡೆ ಸರಕಾರ ಬಯಲು ಶೌಚಮುಕ್ತ ಮಾಡಲು ಶೌಚಾಲಯ ಬಳಕೆ ಮಾಡಬೇಕು ಎಂಬ ಪಣ ತೊಟ್ಟಿದ್ದರೆ, ನಿರ್ಮಾಣ ಮಾಡಿರುವ ಶೌಚಾಲಯಗಳನ್ನು ಬಳಕೆ ಮಾಡದಿರುವುದು ಎಷ್ಟರ ಮಟ್ಟಿಗೆ ಸರಿ ಎಂಬುದು ಸಾರ್ವಜನಿಕರ ಆರೋಪ.

ಯೋಜನಾ ಗಾತ್ರ; 2012-13ನೇ ಸಾಲಿನ ವಿಧಾನ ಪರಿಷತ್‌ ಸದಸ್ಯ ಗೋ.ಮಧುಸೂಧನ್‌ ಅವರ ಪ್ರದೇಶಾಭಿವೃದ್ಧಿ ಅನುದಾನ 2 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿತಿ ಕೇಂದ್ರದ ವತಿಯಿಂದ 5 ಶೌಚಾಲಯಗಳನ್ನು ನಿರ್ಮಾಣ ಮಾಡಲಾಗಿದೆ, ಆದರೆ ಅವುಗಳನ್ನು ಉಪಯೋಗಿಸದೆ ಬೀಗ ಹಾಕಲಾಗಿದೆ. ಇದರಿಂದ ಶೌಚಾಲಯದ ಬಾಗಿಲುಗಳು ಧೂಳಿನಿಂದ ಆವರಿಸಿವೆ.

ಮೂತ್ರ ವಿಸರ್ಜನೆಯ ತಾಣ: ಡಿವಿಯೇಷನ್‌ ರಸ್ತೆ ಅಗಲೀಕರಣ ಮಾಡುವ ವೇಳೆ ಚರಂಡಿ ನಿರ್ಮಿಸಲು ಸುತ್ತುಗೋಡೆ ಕೆಡವಲಾಗಿದೆ. ಪರಿಣಾಮ ಶೌಚಾಲಯದ ಆವರಣ ಮೂತ್ರ ವಿಸರ್ಜನೆಯ ತಾಣವಾಗಿ ಮಾರ್ಪಟ್ಟಿದೆ. ಇದಕ್ಕೆ ಹೊಂದಿಕೊಂಡಂತೆ ಅಡುಗೆ ಮನೆ ಕಟ್ಟಡವಿದ್ದು, ಅದು ಅಭಿವೃದ್ಧಿಯಾಗದ ಹಿನ್ನೆಲೆಯಲ್ಲಿ ಪಾಳು ಬಂಗಲೆಯಂತೆ ಗೋಚರಿಸುತ್ತಿದೆ.

ನಲ್ಲಿಗಳು ಮುರಿದಿವೆ; ಶೌಚಾಲಯ ಕೊಠಡಿಗಳಿಗೆ ಹೊಂದಿಕೊಂಡಂತೆ ಕೈ ತೊಳೆಯಲು ನಲ್ಲಿಗಳನ್ನು ಅಳವಡಿಸಲಾಗಿತ್ತು. ಅವುಗಳು ಬಳಕೆಯಾಗದ ಹಿನ್ನೆಲೆಯಲ್ಲಿ ಮುರಿದು ಮೂಲೆ ಗುಂಪಾಗಿವೆ. ಸಿಗರೇಟ್‌ ಪ್ಯಾಕ್‌, ಮದ್ಯ ಕುಡಿದ ಪೌಚ್‌ಗಳು ಇಲ್ಲಿ ಯಥೇಚ್ಚವಾಗಿ ಹರಡಿವೆ. ಕೂಡಲೇ ಶಿಕ್ಷ ಣ ಇಲಾಖೆಯವರು ಶೌಚಾಲಯದ ಬಳಕೆ ಸಂಬಂಧ ಕ್ರಮವ ವಹಿಸಬೇಕು, ಸುತ್ತುಗೋಡೆಯನ್ನು ನಿರ್ಮಿಸಿ ಅನೈರ್ಮಲ್ಯವನ್ನು ತಡೆಗಟ್ಟಬೇಕು ಎಂಬುದು ಸಾರ್ವಜನಿಕರ ಆಗ್ರಹ.


ಶಿಕ್ಷ ಕರ ಭವನದ ಮುಂಭಾಗದಲ್ಲಿ ಶಿಕ್ಷ ಕರಿಗಾಗಿಯೇ ಶೌಚಾಲಯಗಳನ್ನು ನಿರ್ಮಾಣ ಮಾಡಲಾಗಿದೆ. ಅವುಗಳು ಈಗ ಬಳಕೆಯಾಗದೇ ನಿರುಪಯುಕ್ತವಾಗಿರುವುದು ಗಮನಕ್ಕೆ ಬಂದಿದೆ. ರಸ್ತೆ ಅಗಲೀಕರಣ ವೇಳೆ ಸುತ್ತುಗೋಡೆ ಕೆಡವಿದ ಪರಿಣಾಮ ಭದ್ರತೆ ಇಲ್ಲವಾಗಿದೆ, ಇದರಿಂದ ಅದು ಸಾರ್ವಜನಿಕರ ಮೂತ್ರಾಲಯವಾಗಿ ಮಾರ್ಪಟ್ಟಿದೆ. ಈ ಸಂಬಂಧ ಸುತ್ತುಗೋಡೆ ನಿರ್ಮಾಣ ಮಾಡಲು ಅನುದಾನ ಬಿಡುಗಡೆ ಮಾಡಿಸಿಕೊಡಬೇಕು ಎಂದು ಶಾಸಕರಿಗೆ ಮನವಿ ಸಲ್ಲಿಸಿದ್ದೇವೆ. ಅನುದಾನ ಬಿಡುಗಡೆಯಾದರೆ ಶೌಚಾಲಯ. ಅಡುಗೆಮನೆ ಕಟ್ಟಡವನ್ನು ದುರಸ್ತಿಪಡಿಸಲಾಗುವುದು.

-ಲಕ್ಷ್ಮೀಪತಿ. ಬಿಇಒ, ಚಾಮರಾಜನಗರ

ಗುರು ಭವನಕ್ಕೆ ಹೊಂದಿಕೊಂಡ ಸುತ್ತುಗೋಡೆಯನ್ನು ರಸ್ತೆ ಅಗಲೀಕರಣ ವೇಳೆ ಕೆಡವಿದ ಪರಿಣಾಮ ಶೌಚಾಲಯ ಸಮೀಪದ ಜಾಗ ಮೂತ್ರ ವಿಸರ್ಜನೆಯ ತಾಣವಾಗಿದೆ. ಸುತ್ತುಗೋಡೆ ನಿರ್ಮಾಣ ಮಾಡಿದರೆ ಅನೈರ್ಮಲ್ಯ ತಪ್ಪುತ್ತದೆ, ಶಿಕ್ಷ ಣ ಇಲಾಖೆಯವರು ಸುತ್ತುಗೋಡೆ ನಿರ್ಮಿಸಲು ಕ್ರಮ ಕೈಗೊಳ್ಳಬೇಕು.

ಮಹೇಶ್‌, ಚಾಮರಾಜನಗರ


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ