ಆ್ಯಪ್ನಗರ

ಸಾರಿಗೆ ಸಂಪರ್ಕ, ಪ್ರತ್ಯೇಕ ನ್ಯಾಯಬೆಲೆ ಅಂಗಡಿ ಸೌಲಭ್ಯಕ್ಕೆ ಆಗ್ರಹ

ತಮ್ಮ ಗ್ರಾಮಕ್ಕೆ ಸಮರ್ಪಕ ಸಾರಿಗೆ ಸಂಪರ್ಕ, ನ್ಯಾಯ ಬೆಲೆ ಅಂಗಡಿ ಸೌಲಭ್ಯಗಳನ್ನು ಕಲ್ಪಿಸಬೇಕು ಎಂದು ಆಗ್ರಹಿಸಿ ಯಳಂದೂರು ತಾಲೂಕಿನ ಅಂಬಳೆ ಗ್ರಾಮದ ಡಾ.ಬಿ.ಆರ್‌. ಅಂಬೇಡ್ಕರ್‌ ನಿವಾಸಿಗಳು ನಗರದ ಜಿಲ್ಲಾಡಳಿತ ಭವನಕ್ಕೆ ಭೇಟಿನೀಡಿ ಹಕ್ಕೋತ್ತಾಯದ ಮನವಿ ಪತ್ರವನ್ನು ಚುನಾವಣಾ ತಹಸೀಲ್ದಾರ್‌ ನಂದೀಶ್‌ ಅವರ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

Vijaya Karnataka 12 Apr 2019, 5:00 am
ಚಾಮರಾಜನಗರ : ತಮ್ಮ ಗ್ರಾಮಕ್ಕೆ ಸಮರ್ಪಕ ಸಾರಿಗೆ ಸಂಪರ್ಕ, ನ್ಯಾಯ ಬೆಲೆ ಅಂಗಡಿ ಸೌಲಭ್ಯಗಳನ್ನು ಕಲ್ಪಿಸಬೇಕು ಎಂದು ಆಗ್ರಹಿಸಿ ಯಳಂದೂರು ತಾಲೂಕಿನ ಅಂಬಳೆ ಗ್ರಾಮದ ಡಾ.ಬಿ.ಆರ್‌. ಅಂಬೇಡ್ಕರ್‌ ನಿವಾಸಿಗಳು ನಗರದ ಜಿಲ್ಲಾಡಳಿತ ಭವನಕ್ಕೆ ಭೇಟಿನೀಡಿ ಹಕ್ಕೋತ್ತಾಯದ ಮನವಿ ಪತ್ರವನ್ನು ಚುನಾವಣಾ ತಹಸೀಲ್ದಾರ್‌ ನಂದೀಶ್‌ ಅವರ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
Vijaya Karnataka Web transport connection demand for separate legal price facility
ಸಾರಿಗೆ ಸಂಪರ್ಕ, ಪ್ರತ್ಯೇಕ ನ್ಯಾಯಬೆಲೆ ಅಂಗಡಿ ಸೌಲಭ್ಯಕ್ಕೆ ಆಗ್ರಹ


ಅಂಬಳೆ ಗ್ರಾಮದ ಅಂಬೇಡ್ಕರ್‌ ಬಡಾವಣೆಯಿಂದ ಯಳಂದೂರಿಗೆ ಹೋಗುವ ರಸ್ತೆಯ ಕಾಮಗಾರಿಯ ನಿರ್ಮಾಣ ಹಂತದಲ್ಲಿದ್ದು, ಬಡಾವಣೆಯಿಂದ ವೈ.ಕೆ.ಮೋಳೆ ಮಾರ್ಗವಾಗಿ ಯಳಂದೂರಿಗೆ ಸಂಪರ್ಕ ರಸ್ತೆ ಹಾಗೂ ಗ್ರಾಮದ ವೀರಶೈವ ಬೀದಿಯಿಂದ ಯಳಂದೂರಿಗೆ ಹೋಗುವ ರಸ್ತೆ ಕಾಮಗಾರಿಯನ್ನು 6 ತಿಂಗಳಿನಿಂದ ಏಕಾಏಕಿ ಅರ್ಧಕ್ಕೆ ಸ್ಥಗಿತಗೊಳಿಸಲಾಗಿದೆ.

ಈ ಸಮಸ್ಯೆಯನ್ನು ಸಂಬಂಧಪಟ್ಟ ಗ್ರಾಮ ಪಂಚಾಯಿತಿ ಅಧ್ಯಕ್ಷ ರು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಗಮನಕ್ಕೂ ತಂದರು ಯಾವುದೇ ಪ್ರಯೋಜನವಾಗಿಲ್ಲ ಎಂದು ದೂರಿದ್ದಾರೆ.

ಗ್ರಾಮದಿಂದ ಯಳಂದೂರಿಗೆ ಸುಮಾರು 4 ಕಿ.ಮೀ.ದೂರವಿದ್ದು, ಶಾಲೆ ಹೋಗುವ ವಿದ್ಯಾರ್ಥಿಗಳು ಸಾರಿಗೆ ಸೌಲಭ್ಯದಿಂದ ವಂಚಿತರಾಗಿದ್ದಾರೆ, ಕೂಡಲೇ ಸಾರಿಗೆ ಸೌಲಭ್ಯ ಕಲ್ಪಿಸಬೇಕು.

ಅಂಬಳೆ ಗ್ರಾಮದಲ್ಲಿ 2 ನ್ಯಾಯ ಬೆಲೆ ಅಂಗಡಿಗಳಿದ್ದು, ಅಂಬಳೆ ಅಂಬೇಡ್ಕರ್‌ ಬಡಾವಣೆಯಿಂದ 1.5 ಕಿ.ಮೀ ದೂರದಲ್ಲಿ ಪ್ರತ್ಯೇಕವಾಗಿ ಅಂಗಡಿಯಿದೆ, ಪ್ರತಿ ತಿಂಗಳ ಪಡಿತರ ಪಡೆಯಲು ಅಂಬಳೆಗೆ ಒಂದು ದಿನ ಬಯೋಮೆಟ್ರಿಕ್‌ ಹಾಕಲು ಮತ್ತೊಂದು ಪಡಿತರ ಪಡೆಯಲು ಎರಡು ದಿನ ಕೂಲಿ ಕೆಲಸ ಬಿಡಬೇಕಾಗಿದೆ. ಅಂಬೇಡ್ಕರ್‌ ಬಡಾವಣೆಯಲ್ಲಿ ಸುಮಾರು 250 ರಿಂದ 300 ಪಡಿತರ ಕಾರ್ಡ್‌ಗಳಿದ್ದು, ಪ್ರತ್ಯೇಕವಾಗಿ ಅಂಬೇಡ್ಕರ್‌ ಬಡಾವಣೆಗೆ ನ್ಯಾಯ ಬೆಲೆ ಅಂಗಡಿ ಮಂಜೂರು ಮಾಡಿಕೊಡಬೇಕು. ಇಲ್ಲದಿದ್ದಲ್ಲಿ ಏ. 18 ರಂದು ನಡೆಯುವ ಲೋಕಸಭಾ ಚುನಾವಣೆಯಲ್ಲಿ ಮತದಾನ ಬಹಿಷ್ಕರಿಸುವುದಾಗಿ ಅಂಬಳೆ ಅಂಬೇಡ್ಕರ್‌ ಬಡಾವಣೆ ಯಜಮಾನರು, ಮಹಿಳಾ ಸ್ವಸಹಾಯ ಸಂಘ, ಅಂಬೇಡ್ಕರ್‌ ಯುವಜನ ಸಂಘ ಪದಾಧಿಕಾರಿಗಳು, ನಿವಾಸಿಗಳು, ಗ್ರಾಮಸ್ಥರು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿರುವ ಮನವಿಯಲ್ಲಿ ಎಚ್ಚರಿಸಿದ್ದಾರೆ.

ಯಜಮಾನರಾದ ಎಸ್‌.ನಂಜುಂಡಸ್ವಾಮಿ, ನಾಗಯ್ಯ, ಪಿ. ಹೊನ್ನಯ್ಯ, ಆರ್‌.ಮಹೇಶ್‌, ಎಸ್‌.ಶಂಕರಪ್ಪ, ಚಾಮರಾಜ ಹಾಜರಿದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ