ಆ್ಯಪ್ನಗರ

ಗೂಡ್ಸ್‌ ವಾಹನ ಮಗುಚಿ ಇಬ್ಬರಿಗೆ ಗಾಯ

ಚಾಲಕನ ನಿಯಂತ್ರಣ ತಪ್ಪಿ ಗೂಡ್ಸ್‌ ವಾಹನ ಹುಲುಸುಗುಡ್ಡೆಯ ಬಳಿ ಮಗುಚಿ ಬಿದ್ದ ಪರಿಣಾಮ ಇಬ್ಬರು ಗಾಯಗೊಂಡಿದ್ದಾರೆ.

Vijaya Karnataka 4 Jan 2020, 5:00 am
ಹನೂರು: ಚಾಲಕನ ನಿಯಂತ್ರಣ ತಪ್ಪಿ ಗೂಡ್ಸ್‌ ವಾಹನ ಹುಲುಸುಗುಡ್ಡೆಯ ಬಳಿ ಮಗುಚಿ ಬಿದ್ದ ಪರಿಣಾಮ ಇಬ್ಬರು ಗಾಯಗೊಂಡಿದ್ದಾರೆ.
Vijaya Karnataka Web ಹನೂರು ಸಮೀಪದ ಹುಲುಸುಗುಡ್ಡೆಯ ಬಳಿ ಚಾಲಕ ನಿಯಂತ್ರಣ ತಪ್ಪಿ ಮಗುಚಿ ಬಿದ್ದ ಗೂಡ್ಸ್‌ ವಾಹನ.


ಹನೂರಿನ ನಾಗೇಂದ್ರ(30) ಹಾಗೂ ಚಾಲಕ ಮಾಣಿಕ್ಯ(55) ಗಾಯಾಳುಗಳು.

ಶುಕ್ರವಾರ ಬೆಳಗ್ಗೆ 11.30ರಲ್ಲಿಕೊಳ್ಳೇಗಾಲ ಕಡೆಯಿಂದ ಗೂಡ್ಸ್‌ ಆಟೋದಲ್ಲಿತರಕಾರಿ ತುಂಬಿಕೊಂಡು ಹನೂರಿಗೆ ಬರುತ್ತಿದ್ದರು. ಈ ವೇಳೆ ಹುಲುಸುಗುಡ್ಡೆಯ ಬಳಿ ರಸ್ತೆಯಲ್ಲಿಹಾವು ಅಡ್ಡ ಬಂದ ಪರಿಣಾಮ ಅದನ್ನು ತಪ್ಪಿಸಲು ಹೋಗಿದ್ದರಿಂದ ಚಾಲಕ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿಆಟೋ ಮಗುಚಿ ಬಿತ್ತು. ಇದರಿಂದ ನಾಗೇಂದ್ರ ಅವರಿಗೆ ತೀವ್ರ ಪೆಟ್ಟಾಗಿದ್ದರೆ, ಮಾಣಿಕ್ಯನಿಗೆ ತಲೆ ಹಾಗೂ ಕಾಲಿಗೆ ತರಚಿದ ಗಾಯಗಳಾಗಿವೆ.

ಕೂಡಲೇ ಸ್ಥಳೀಯರು ಸಮೀಪದಲ್ಲಿಯೇ ಇದ್ದ ಅಗ್ನಿಶಾಮಕ ಠಾಣೆ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಸಿಬ್ಬಂದಿ ಗಾಯಾಳುಗಳನ್ನು ಹನೂರಿನ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ ಪ್ರಥಮ ಚಿಕಿತ್ಸೆ ಕೊಡಿಸಿದರು. ಬಳಿಕ ಕುಟುಂಬಸ್ಥರು ಆಗಮಿಸಿ ಗಾಯಾಳುಗಳನ್ನು ಕೊಳ್ಳೇಗಾಲದ ಉಪ ವಿಭಾಗೀಯ ಆಸ್ಪತ್ರೆಗೆ ಕರೆದೊಯ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ