ಆ್ಯಪ್ನಗರ

ಇಬ್ಬರು ಯುವಕರು ನೀರುಪಾಲು

ಕೆರೆಗೆ ಈಜಾಡಲು ತೆರಳಿದ್ದ ಇಬ್ಬರು ಯುವಕರು ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ತಾಲೂಕಿನ ತಮ್ಮಡಹಳ್ಳಿ ಗ್ರಾಮದಲ್ಲಿ ಭಾನುವಾರ ಸಂಜೆ ನಡೆದಿದೆ.

Vijaya Karnataka 8 Apr 2019, 5:00 am
ಚಾಮರಾಜನಗರ: ಕೆರೆಗೆ ಈಜಾಡಲು ತೆರಳಿದ್ದ ಇಬ್ಬರು ಯುವಕರು ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ತಾಲೂಕಿನ ತಮ್ಮಡಹಳ್ಳಿ ಗ್ರಾಮದಲ್ಲಿ ಭಾನುವಾರ ಸಂಜೆ ನಡೆದಿದೆ.
Vijaya Karnataka Web two young men are dumped in water
ಇಬ್ಬರು ಯುವಕರು ನೀರುಪಾಲು


ಗುಂಡ್ಲುಪೇಟೆ ಪಟ್ಟಣದ ಹೊರವಲಯದಲ್ಲಿರುವ ಹೊಸೂರು ಗ್ರಾಮದ ರವಿ (24), ಪ್ರಶಾಂತ್‌ (23) ಮೃತಪಟ್ಟ ಯುವಕರು.

ರವಿ, ಪ್ರಶಾಂತ್‌ ಸೇರಿದಂತೆ ಐವರು ಯುವಕರು ಯುಗಾದಿ ಹಬ್ಬದ ಮಾರನೆಯ ದಿನವಾದ, ವರ್ಷದ ತೊಡಗಿನ ದಿನ ಭಾನುವಾರ ಬಣ್ಣ ಹಚ್ಚಿಕೊಂಡು ಆಟವಾಡಿದ್ದಾರೆ. ನಂತರ ಈಜಾಡಲು ತಮ್ಮಡಹಳ್ಳಿಯ ಕೆರೆಗೆ ಬಂದಿದ್ದರು. ಮಧ್ಯಾಹ್ನದ ವೇಳೆ ಐವರು ಈಜಾಡಲೆಂದು ಕೆರೆಗೆ ಇಳಿದಿದ್ದಾರೆ ಎಂದು ಪ್ರತ್ಯಕ್ಷ ದರ್ಶಿಗಳು ತಿಳಿಸಿದ್ದಾರೆ.

ನೀರಿಗೆ ಬಿದ್ದ ಐವರು ಈಜಾಡುತ್ತಿದ್ದಾಗ ರವಿ ಮತ್ತು ಪ್ರಶಾಂತ್‌ ಮೇಲೆ ಬರಲಿಲ್ಲ. ಈ ವಿಷಯ ತಿಳಿದ ಇನ್ನು ಮೂವರು ನಾಪತ್ತೆಯಾಗಿದ್ದಾರೆ.

ಈ ವಿಷಯ ತಿಳಿದ ಗ್ರಾಮಾಂತರ ಠಾಣೆ ಸಬ್‌ ಇನ್ಸ್‌ಪೆಕ್ಟರ್‌ ರವಿಕಿರಣ್‌ ಮತ್ತು ಪೇದೆಗಳು ತೆರಳಿ ಪರಿಶೀಲಿಸಿದರು.

ಶವಗಳು ಪತ್ತೆಯಾಗದಿದ್ದಾಗ ಕೆರೆಯ ಅರ್ಧ ನೀರನ್ನು ನಂಜದೇವನಪುರ ಕೆರೆಯ ನಾಲೆಗೆ ಹರಿಸಿದ್ದಾರೆ. ಶವಗಳು ರಾತ್ರಿ 9 ಗಂಟೆಯ ಸುಮಾರಿಗೆ ಪತ್ತೆಯಾದವು. ಈ ಸಂಬಂಧ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ