ಆ್ಯಪ್ನಗರ

ಸಿದ್ದರಾಮಯ್ಯ, ಡಿಕೆಶಿ ಭಿನ್ನಾಭಿಪ್ರಾಯದ ಲಾಭ ಪಡೆಯಿರಿ: ಅಶೋಕ್‌

ಶಿರಾ ಮತ್ತು ಆರ್‌.ಆರ್‌ ನಗರ ಚುನಾವಣೆಯಲ್ಲಿ ಗೆದ್ದ ನಂತರವಾದರೂ ಸಿದ್ದರಾಮಯ್ಯನವರು ಎದ್ದೇಳುತ್ತಾರೆ ಎಂದುಕೊಂಡಿದ್ದೆವು. ಆದರೆ, ಅಂತಹ ಲಕ್ಷಣಗಳು ಕಾಣುತ್ತಿಲ್ಲ. ಈಗಾಗಿ ಅವರು ಎದ್ದೇಳುವ ತನಕ ಗ್ರಾ.ಪಂ.ಚುನಾವಣೆ ಮಾಡಿ ಮುಗಿಸಿಬಿಡೋಣ.

Vijaya Karnataka Web 1 Dec 2020, 11:11 pm
ಗುಂಡ್ಲುಪೇಟೆ (ಚಾ.ನಗರ): ಗ್ರಾಮ ಪಂಚಾಯಿತಿ ಚುನಾವಣೆ ನೇತೃತ್ವ ವಹಿಸುವ ವಿಚಾರದಲ್ಲಿ ಪ್ರತಿಪಕ್ಷದ ನಾಯಕರಾದ ಸಿದ್ದರಾಮಯ್ಯ ಮತ್ತು ಡಿಕೆಶಿ ಅವರ ನಡುವೆ ಇರುವ ಭಿನ್ನಾಭಿಪ್ರಾಯದ ಲಾಭವನ್ನು ಬಿಜೆಪಿ ಪಡೆದುಕೊಳ್ಳಬೇಕಿದೆ ಎಂದು ಕಂದಾಯ ಸಚಿವ ಆರ್‌.ಅಶೋಕ್‌ ಹೇಳಿದರು.
Vijaya Karnataka Web ಆರ್‌ ಅಶೋಕ್‌
ಆರ್‌ ಅಶೋಕ್‌


ಪಟ್ಟಣದ ಅಂಬೇಡ್ಕರ್‌ ಭವನದಲ್ಲಿಮಂಗಳವಾರ ಗ್ರಾಮ ಸ್ವರಾಜ್‌ ಸಮಾವೇಶ ಉದ್ಘಾಟಿಸಿ ಸಚಿವ ಅಶೋಕ್‌ ಮಾತನಾಡಿದರು.

''ಶಿರಾ ಮತ್ತು ಆರ್‌.ಆರ್‌ ನಗರ ಚುನಾವಣೆಯಲ್ಲಿ ಗೆದ್ದ ನಂತರವಾದರೂ ಸಿದ್ದರಾಮಯ್ಯನವರು ಎದ್ದೇಳುತ್ತಾರೆ ಎಂದುಕೊಂಡಿದ್ದೆವು. ಆದರೆ, ಅಂತಹ ಲಕ್ಷಣಗಳು ಕಾಣುತ್ತಿಲ್ಲ. ಈಗಾಗಿ ಅವರು ಎದ್ದೇಳುವ ತನಕ ಗ್ರಾ.ಪಂ.ಚುನಾವಣೆ ಮಾಡಿ ಮುಗಿಸಿಬಿಡೋಣ. ಬೆಳೆಗೆ ಮಾರಕವಾದ ಪಾರ್ಥೇನಿಯಂನ ಪ್ರತಿರೂಪವೆಂಬ ಕಾಂಗ್ರೆಸ್‌ ಕಳೆಯನ್ನು ಗ್ರಾಮಮಟ್ಟದಲ್ಲಿ ಬೇರು ಸಹಿತ ಕಿತ್ತು ಹಾಕಿ'' ಎಂದು ಹೇಳಿದರು.

''ಅತಂತ್ರ ವಿಧಾನಸಭೆ ಸೃಷ್ಟಿಯೇ ಮುಖ್ಯ ಗುರಿ ಎಂದು ತಿಳಿದಿರುವ ಕುಮಾರಣ್ಣ ಗ್ರಾ.ಪಂ. ಚುನಾವಣೆಗೆ ಬರುವುದಿಲ್ಲ'' ಎಂದು ಟೀಕಿಸಿದರು.

''ಪ್ರೀತಿ-ಪ್ರೇಮದ ಹೆಸರಿನಲ್ಲಿ ಮತಾಂತರವನ್ನು ನಾವು ಎಂದಿಗೂ ಸಹಿಸುವುದಿಲ್ಲ. ಆದ್ದರಿಂದ ಲವ್ ‌ಜಿಹಾದ್‌ ಅನ್ನು ತಡೆದೇ ತೀರುತ್ತೇವೆ. ದೈವಿ ಸ್ವರೂಪದಲ್ಲಿ ನೋಡುವ ಮತ್ತು ಗ್ರಾಮೀಣ ಜನರ ಅವಿಭಾಜ್ಯ ಅಂಗವಾಗಿರುವ ಗೋಮಾತೆಯನ್ನು ರಕ್ಷಿಸಲು ನಾವು ಬದ್ಧವಾಗಿದ್ದೇವೆ. ವಯಸ್ಸಾದ ಮತ್ತು ಅಂಗಹೂನವಾದ ಗೋವುಗಳ ರಕ್ಷಣೆಗೆ ಗೋಶಾಲೆ ತೆರೆಯಲು ನಾವು ಸಿದ್ಧವಾಗಿದ್ದೇವೆ. ಹಿಂದಿನ ತಲೆಮಾರಿನ ಎಲ್ಲರೂ ಗೋವನ್ನು ದೈವಿ ಭಾವದಿಂದ ನೋಡುತ್ತಿದ್ದು, ಅದನ್ನೇ ಪಾಲಿಸುತ್ತಿದ್ದ ಸಿದ್ದರಾಮಯ್ಯನವರು ಮತಕ್ಕಾಗಿ ಬದಲಾಗಿದ್ದಾರೆ''ಎಂದು ಟೀಕಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ