ಆ್ಯಪ್ನಗರ

ತಮಿಳುನಾಡಿನಲ್ಲಿ ಐದು ಹೊಸ ಕೋವಿಡ್‌ 19 ಪ್ರಕರಣ ಪತ್ತೆ: ಒಟ್ಟು ಸೋಂಕಿತರು 23

ತಮಿಳುನಾಡಿನಲ್ಲಿ ಬುಧವಾರ ಮತ್ತೆ ಐದು ಹೊಸ ಕೋವಿಡ್‌-19 ಪ್ರಕರಣ ಪತ್ತೆಯಾಗಿದೆ. ಇಂಡೋನೇಷ್ಯ ನಾಗರಿಕರು ಹಾಗೂ ಅವರ ಟ್ರಾವೆಲ್‌ ಗೈಡ್‌ ಓರ್ವನಿಗೆ ಸೋಂಕು ದೃಢಪಟ್ಟಿದೆ. ತಮಿಳುನಾಡಿನಲ್ಲಿ ಒಟ್ಟಾರೆ ಪ್ರಕರಣಗಳ ಸಂಖ್ಯೆ 23ಕ್ಕೆ ಏರಿಕೆಯಾಗಿದೆ.

THE ECONOMIC TIMES 25 Mar 2020, 5:30 pm
ಚೆನ್ನೈ: ತಮಿಳುನಾಡಿನಲ್ಲಿ ಬುಧವಾರ ಒಟ್ಟು 5 ಮಂದಿಯಲ್ಲಿ ಹೊಸ ಕೊರೊನಾ ಸೋಂಕು ಪತ್ತೆಯಾಗಿದೆ. ಒಟ್ಟಾರೆ ತಮಿಳುನಾಡಿನಲ್ಲಿ ಪ್ರಕರಣಗಳ ಸಂಖ್ಯೆ 23ಕ್ಕೆ ಏರಿಕೆಯಾಗಿದ್ದು, ಮಂಗಳವಾರ ಒಟ್ಟು ಪ್ರಕರಣಗಳ ಸಂಖ್ಯೆ 18 ಇತ್ತು.
Vijaya Karnataka Web covid


ನಾಲ್ವರು ಇಂಡೋನೇಷ್ಯಾ ನಾಗರಿಕರು ಹಾಗೂ ಅವರ ಟ್ರಾವೆಲ್‌ ಗೈಡ್‌ನಲ್ಲಿ ಕೋವಿಡ್‌-19 ಪತ್ತೆಯಾಗಿರುವುದಾಗಿ ತಮಿಳುನಾಡು ಆರೋಗ್ಯ ಸಚಿವ ಸಿ. ವಿಜಯ ಭಾಸ್ಕರ್‌ ಟ್ವಿಟರ್‌ನಲ್ಲಿ ತಿಳಿಸಿದ್ದಾರೆ.


  • ದೇಶದಲ್ಲಿ ಒಟ್ಟಾರೆ ಪ್ರಕರಣಗಳು: 562, 11 ಸಾವು.
  • ತಮಿಳುನಾಡು : 23, 1 ಸಾವು
ಮುಕ್ಕಾಲು ಪ್ರಪಂಚವನ್ನು ನುಂಗಿ ಹಾಕಿತು ಕೊರೊನಾ, 18,900ಕ್ಕೂ ಹೆಚ್ಚು ಬಲಿ!

ಸೇಲಂ ಮೆಡಿಕಲ್‌ ಕಾಲೇಜಿನಲ್ಲಿ ನಾಲ್ವರ ಆರೋಗ್ಯ ಪರೀಕ್ಷೆ ವರದಿಯಲ್ಲಿ ಕೋವಿಡ್‌ - 19 ದೃಢಪಟ್ಟಿದೆ. ಈ ವರೆಗೆ ರಾಜ್ಯದಲ್ಲಿ 2,09,276 ಪ್ರಯಾಣಿಕರನ್ನು ಸ್ಕ್ರೀನಿಂಗ್‌ ಮಾಡಲಾಗಿದೆ. 15,492 ಮಂದಿ ಆರೋಗ್ಯದ ಕುರಿತು ಫಾಲೋಅಪ್‌ ಮಾಡಲಾಗುತ್ತಿದೆ. ಒಟ್ಟಾರೆ ಈ ವರೆಗೆ 890 ಮಂದಿಯಲ್ಲಿ ಕೋವಿಡ್‌-19 ಪರೀಕ್ಷೆ ನಡೆಸಲಾಗಿದ್ದು, 757 ಮಂದಿಯಲ್ಲಿ ಸೋಂಕು ಇಲ್ಲ ಎಂಬುದು ದೃಢವಾಗಿದೆ. 23 ಮಂದಿ ಸೋಂಕಿತರಾಗಿದ್ದಾರೆ ಎಂದು ಸಿ. ಭಾಸ್ಕರ್‌ ತಿಳಿಸಿದ್ದಾರೆ.

ಬ್ರಿಟನ್‌ ರಾಜಮನೆತನಕ್ಕೂ ತಟ್ಟಿದ ಕೊರೊನಾ;

ಇತ್ತೀಚೆಗೆ ವಿದೇಶ ಪ್ರಯಾಣ ಮಾಡಿದವರು ಕಡ್ಡಾಯವಾಗಿ ಸಾಮಾಜಿಕವಾಗಿ ಪರಸ್ಪರ ಅಂತರ ಕಾಯ್ದುಕೊಳ್ಳಬೇಕು. ಪಾಲಿಸದೇ ಇದ್ದಲ್ಲಿ ಪಾಸ್‌ಪೋರ್ಟ್‌ ರದ್ದುಗೊಳಿಸುವ ಕ್ರಮ ಕೈಗೊಳ್ಳಲಾಗುವುದು. ಮಾ.7 ರಂದು ತಮಿಳುನಾಡಿನಲ್ಲಿ ಮೊದಲ ಪ್ರಕರಣ ಪತ್ತೆಯಾಗಿತ್ತು. ಎಂಜಿನಿಯರ್‌ ಆಗಿ ವೃತ್ತಿಯಲ್ಲಿದ್ದ ಕಾಂಚೀವರಂ ಮೂಲದ 45 ವರ್ಷದ ವ್ಯಕ್ತಿಯಲ್ಲಿ ಸೋಂಕು ಕಾಣಿಸಿಕೊಂಡಿತ್ತು. ಸೂಕ್ತ ಚಿಕಿತ್ಸೆಯ ಬಳಿಕ ಅವರು ಇದೀಗ ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ತೆರಳಿದ್ದಾರೆ.

ತಮಿಳುನಾಡಿನಾದ್ಯಂತ ಸೆಕ್ಷನ್‌ 144 ವಿಧಿಸಲಾಗಿದ್ದು, ಒಂದು ಬಾರಿಗೆ ನಾಲ್ಕೈದು ಮಂದಿ ರಸ್ತೆಯಲ್ಲಿ ಓಡಾಡುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ