ಆ್ಯಪ್ನಗರ

ತಮಿಳುನಾಡಿನ ದೇವಾಲಯದಲ್ಲಿ ಸಿಕ್ತು ನಿಧಿ, 1.7 ಕೆಜಿಯ 505 ಚಿನ್ನದ ನಾಣ್ಯಗಳು ಪತ್ತೆ

ತಮಿಳುನಾಡಿನ ದೇವಾಲಯವೊಂದರಲ್ಲಿ ನಿಧಿ ಪತ್ತೆಯಾಗಿದ್ದು, ಬರೋಬ್ಬರಿ 505 ಚಿನ್ನದ ನಾಣ್ಯಗಳು ಸಿಕ್ಕಿವೆ. ಕ್ರಿ.ಶ. 1000-1200ನೇ ಕಾಲಕ್ಕೆ ಸೇರಿವೆ​ ಎನ್ನಲಾದ ನಾಣ್ಯಗಳಲ್ಲಿ ಅರೆಬಿಕ್‌ ಲಿಪಿ ಹೋಲುವ ಅಕ್ಷರಗಳು ಇವೆ.

Vijaya Karnataka Web 27 Feb 2020, 1:38 pm
ಚೆನ್ನೈ: ತಮಿಳುನಾಡಿನ ತಿರುಚ್ಚಿ ಸಮೀಪದ ತಿರುವನೈಕಾವಲ್‌ನಲ್ಲಿ ದೇವಸ್ಥಾನದಲ್ಲಿ ನಿಧಿಯೊಂದು ಪತ್ತೆಯಾಗಿದೆ. ಇಲ್ಲಿನ ಅಖಿಲಾಂಡೇಶ್ವರಿ ಜಂಭುಕೇಶ್ವರ ದೇವಸ್ಥಾನದಲ್ಲಿ ಕಾರ್ಮಿಕರು ನೆಲವನ್ನು ಅಗೆಯುತ್ತಿದ್ದಾಗ ಬರೋಬ್ಬರಿ 505 ಚಿನ್ನದ ನಾಣ್ಯಗಳು ದೊರೆತಿದ್ದು, 1,716 ಗ್ರಾಂ ತೂಕವನ್ನು ಹೊಂದಿವೆ.
Vijaya Karnataka Web TRICHI NIDHI


ಅರೆಬಿಕ್‌ ಲಿಪಿ ಹೋಲುವ ಅಕ್ಷರಗಳನ್ನು ಹೊಂದಿರುವ ನಾಣ್ಯಗಳು ಕ್ರಿ.ಶ. 1000-1200ನೇ ಕಾಲಕ್ಕೆ ಸೇರಿವೆ ಎಂದು ದೇವಸ್ಥಾನದ ಅಧಿಕಾರಿಗಳು ತಿಳಿಸಿದ್ದಾರೆ. ದೇವಾಲಯದ ನವೀಕರಣ ಕಾರ್ಯದಲ್ಲಿ ತೊಡಗಿದ್ದ ಕಾರ್ಮಿಕರಿಗೆ ಅಮ್ಮನ್ ಸನ್ನತಿ ಬಳಿ ನಾಣ್ಯಗಳಿರುವ ತಾಮ್ರದ ಪಾತ್ರೆ ಸಿಕ್ಕಿದೆ.

ದೇವಸ್ಥಾನದ ಮಾಹಿತಿ ನಂತರ, ಸ್ಥಳಕ್ಕೆ ಧಾವಿಸಿದ ಹಿಂದೂ ಧಾರ್ಮಿಕ ಮತ್ತು ಚಾರಿಟಬಲ್ ಎಂಡೋಮೆಂಟ್ ಅಧಿಕಾರಿಗಳು ಪಾತ್ರೆಯನ್ನು ವಶಪಡಿಸಿಕೊಂಡರು. ಬಳಿಕ ಪೊಲೀಸರ ಸಮ್ಮುಖದಲ್ಲಿ ನಾಣ್ಯಗಳನ್ನು ಎಣಿಕೆ ನಡೆಸಿದರು.


ದೇವಾಲಯದ ನವೀಕರಣಕ್ಕಾಗಿ ಪೊದೆಗಳನ್ನು ತೆರವುಗೊಳಿಸಿ, ನೆಲವನ್ನು 7 ಅಡಿಯಷ್ಟು ಅಗೆದಾಗ ತಾಮ್ರದ ಪಾತ್ರೆ ಕಂಡು ಬಂದಿದೆ ಎಂದು ದೇವಾಲಯದ ಅಧಿಕಾರಿಗಳು ಹೇಳಿದ್ದಾರೆ. ನಾಣ್ಯಗಳು ಅವಧಿ ಅಥವಾ ಪ್ರಾಚೀನ ಮೌಲ್ಯವನ್ನು ಇನ್ನು ನಿರ್ಧರಿಸಿಲ್ಲವಾದರೂ, ಹಿಂದೂ ಧಾರ್ಮಿಕ ಮತ್ತು ಚಾರಿಟಬಲ್ ಎಂಡೋಮೆಂಟ್ ಅಧಿಕಾರಿಗಳು ಅವುಗಳ ಮೌಲ್ಯವನ್ನು ಅಂದಾಜು 68 ಲಕ್ಷ ರೂ. ಎಂದು ಅಂದಾಜಿಸಿದ್ದಾರೆ.

ತಿರುಚ್ಚಿ: ಟ್ರಾಕ್ಟರ್‌ ಹರಿಸಿ ಸಬ್‌ ಇನ್‌ಸ್ಪೆಕ್ಟರ್‌ ಹತ್ಯೆ ಹತ್ನ

ನಾಣ್ಯಗಳ ಮೌಲ್ಯ ಮತ್ತು ಅವಧಿಯನ್ನು ಖಚಿತಪಡಿಸಿಕೊಳ್ಳಲು ಪುರಾತತ್ವ ಇಲಾಖೆಗೆ ಮಾಹಿತಿ ನೀಡಲಾಗಿದೆ. ಅಲ್ಲಿಯವರೆಗೂ ನಾಣ್ಯಗಳನ್ನು ಜಿಲ್ಲಾ ಖಜಾನೆಯಲ್ಲಿ ಇಡಲಾಗುವುದು ಎಂದು ಜಿಲ್ಲಾಧಿಕಾರಿ ಶಿವರಸು ಹೇಳಿದ್ದಾರೆ.

ನಟ ಕಮಲ ಹಾಸನ್ ಇಂಡಿಯನ್-2 ಸೆಟ್ ನಲ್ಲಿ ಕ್ರೇನ್ ಅವಘಡ, 3 ಮಂದಿ ದುರ್ಮರಣ

ಬುಧವಾರ ಮಧ್ಯಾಹ್ನ 1 ಗಂಟೆ ಸುಮಾರಿಗೆ ದೇವಾಲಯದಲ್ಲಿ ಚಿನ್ನದ ನಾಣ್ಯಗಳು ಪತ್ತೆಯಾಗಿದ್ದರೂ, ದೇವಾಲಯದ ಅಧಿಕಾರಿಗಳು ಸಂಜೆ 7 ರವರೆಗೂ ಅವುಗಳನ್ನು ಪ್ಯಾಕ್‌ ಮಾಡಿಟ್ಟಿದ್ದರು. ಇನ್ನು, ಮಾಹಿತಿ ತಿಳಿಯುತ್ತಿದ್ದಂತೆ ಜಿಲ್ಲಾಧಿಕಾರಿ, ನಾಣ್ಯಗಳನ್ನು ತಕ್ಷಣ ಶ್ರೀಂಗಂ ತಹಶೀಲ್ದಾರ್‌ಗೆ ಹಸ್ತಾಂತರಿಸುವಂತೆ ದೇವಾಲಯದ ಅಧಿಕಾರಿಗಳಿಗೆ ಆದೇಶಿಸಿದರು.

ತಮಿಳುನಾಡು: ಬೆಂಗಳೂರಿನಿಂದ ಹೊರಟಿದ್ದ ಬಸ್ ಮತ್ತು ಟ್ರಕ್ ನಡುವೆ ಭೀಕರ ಅಪಘಾತ, 20 ಮಂದಿ ಸಾವು

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ