ಆ್ಯಪ್ನಗರ

ಕೊರೊನಾ ವೈರಸ್‌ಗೆ 'ಡ್ರೋನ್‌' ಸಡ್ಡು..! ಚೆನ್ನೈ ನಗರಾದ್ಯಂತ ಸೋಂಕು ನಿವಾರಕ ಸಿಂಪಡಣೆ..

ಮುಂಬೈನಲ್ಲಿ ಡ್ರೋನ್‌ಗಳನ್ನು ಪೊಲೀಸ್ ಪ್ಯಾಟ್ರೋಲಿಂಗ್‌ಗೆ ಬಳಸಿಕೊಂಡರೆ, ಚೆನ್ನೈನಲ್ಲಿ ಸೋಂಕು ನಿವಾರಕ ದ್ರಾವಣ ಸಿಂಪಡಣೆಗೆ ಬಳಸಿಕೊಳ್ಳಲಾಗುತ್ತಿದೆ. ಕೊರೊನಾ ವೈರಸ್‌ ವಿರುದ್ಧ ಹೋರಾಟಕ್ಕೆ ಚೆನ್ನೈನಲ್ಲಿ ಇದೀಗ ಡ್ರೋನ್‌ಗಳು ಪಾಲಿಕೆಯ ನೆರವಿಗೆ ನಿಂತಿವೆ.

TIMESOFINDIA.COM 26 Mar 2020, 4:54 pm

ಹೈಲೈಟ್ಸ್‌:

  • ಒಮ್ಮೆಲೇ 50 ಸಾವಿರ ಚದರ ಅಡಿ ಪ್ರದೇಕ್ಕೆ ಸೋಂಕು ನಿವಾರಕ ಸಿಂಪಡಣೆ
  • ಪೆಟ್ರೋಲ್ ಎಂಜಿನ್ ಹೊಂದಿರುವ ಡ್ರೋನ್
  • 16 ಲೀಟರ್ ದ್ರಾವಣ ಹೊತ್ತು ಸಾಗುವ ಸಾಮರ್ಥ್ಯ
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
ಚೆನ್ನೈ: ಕೊರೊನಾ ವೈರಸ್‌ ವಿರುದ್ಧದ ಹೋರಾಟಕ್ಕೆ ಚೆನ್ನೈ ಮಹಾನಗರ ಪಾಲಿಕೆಗೆ ಹೊಸ ಅಸ್ತ್ರ ಸಿಕ್ಕಿದೆ. ಡ್ರೋನ್‌ಗಳ ಮೂಲಕ ಸೋಂಕು ನಿವಾಕರಗಳನ್ನು ಹರಡುವ ಕಾರ್ಯಕ್ಕೆ ಚೆನ್ನೈ ಮಹಾನಗರ ಪಾಲಿಕೆ ಮುಂದಾಗಿದೆ. ಸೋಂಕು ನಿವಾರಕ ದ್ರಾವಣವನ್ನು ಡ್ರೋನ್‌ಗಳು ಆಗಸದಿಂದಲೇ ಸಿಂಪಡಣೆ ಮಾಡುತ್ತಿವೆ.
ಮೊದಲು ಲಾರಿ ಹಾಗೂ ಟ್ರ್ಯಾಕ್ಟರ್‌ಗಳಲ್ಲಿ ಸೋಂಕು ನಿವಾರಕ ದ್ರಾವಣಗಳನ್ನು ನಗರದಾದ್ಯಂತ ಸಿಂಪಡಣೆ ಮಾಡಲಾಗುತ್ತಿತ್ತು. ಇದೀಗ ಈ ಕೆಲಸವನ್ನು ಡ್ರೋನ್‌ಗಳಿಗೆ ವಹಿಸಲಾಗಿದೆ. ಪೌರ ಕಾರ್ಮಿಕರಿಗೂ ಡ್ರೋನ್‌ ಬಳಕೆ ಹಾಗೂ ದ್ರಾವಣ ತುಂಬಿಸುವ ವಿಧಾನ ಹೇಳಿಕೊಡಲಾಗಿದೆ. ಕೆಲವೇ ದಿನಗಳಲ್ಲಿ ಪೌರ ಕಾರ್ಮಿಕರು ಡ್ರೋನ್ ಚಾಲನೆ ಮಾಡುವ ಕೌಶಲ್ಯ ಸಾಧಿಸಿದ್ದಾರೆ.

ಪೆಟ್ರೋಲ್‌ ಚಾಲಿತ ಡ್ರೋನ್‌ಗಳು ನಗರಾದ್ಯಂತ ಸಂಚರಿಸಿ ಸೋಂಕು ನಿವಾರಕಗಳನ್ನು ಸಿಂಪಡಿಸುವ ಕಾರ್ಯಕ್ಕೆ ಬುಧವಾರವಷ್ಟೇ ಚೆನ್ನೈ ಮಹಾನಗರ ಪಾಲಿಕೆ ಚಾಲನೆ ನೀಡಿದೆ.

ಕೊರೊನಾ ಕರ್ಫ್ಯೂ ಉಲ್ಲಂಘಿಸಿದ್ರೆ ಹುಷಾರ್..! ಜನರ ಮೇಲೆ ಕಣ್ಣಿಟ್ಟಿದೆ ಡ್ರೋನ್ ಕ್ಯಾಮೆರಾ..!

ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ ಚೆನ್ನೈ ಮಹಾನಗರ ಪಾಲಿಕೆ ಆಯುಕ್ತ ಜಿ ಪ್ರಕಾಶ್, ಡ್ರೋನ್‌ಗಳು 150 ಅಡಿ ಎತ್ತರದಿಂದ ಸೋಂಕು ನಿವಾರಕಗಳನ್ನು ಸಿಂಪಡಿಸುತ್ತಿವೆ ಎಂದು ಮಾಹಿತಿ ನೀಡಿದರು. ದೂರದಲ್ಲಿ ನಿಂತೇ ಡ್ರೋನ್‌ಗಳನ್ನು ನಿಯಂತ್ರಿಸಬಹುದಾಗಿದ್ದು, ಪ್ರತಿಯೊಂದು ಡ್ರೋನ್‌ಗಳು ಒಮ್ಮೆ ಗಗನಕ್ಕೆ ಹಾರಿದರೆ 50 ಸಾವಿರ ಚದರ ಅಡಿ ಪ್ರದೇಶಕ್ಕೆ ಸೋಂಕು ನಿವಾರಕ ದ್ರವಣವನ್ನು ಸಿಂಪಡಿಸುತ್ತವೆ.

ಕೊರೊನಾ ಕರ್ಫ್ಯೂ: ಮನೆಯಿಂದ ಹೊರಗೆ ಹೋಗಬೇಕಾದ್ರೆ ಈ ದಾಖಲೆಗಳು ಜೊತೆಗಿರಲಿ..

ಮೊದಲಿಗೆ ಅಣ್ಣಾ ವಿಶ್ವ ವಿದ್ಯಾಲಯದ ಆವರಣದಿಂದ ಸೋಂಕು ನಿವಾರಕಗಳನ್ನು ಸಿಂಪಡಿಸುವ ಕಾರ್ಯ ಆರಂಭವಾಯ್ತು. ಒಂದು ಬಾರಿ ಗಗನಕ್ಕೆ ಹಾರುವಾಗ 16 ಲೀಟರ್ ದ್ರಾವಣವನ್ನು ಡ್ರೋನ್‌ ಹೊತ್ತು ಸಾಗುತ್ತದೆ. ಡ್ರೋನ್‌ನ ನಾಲ್ಕೂ ದಿಕ್ಕುಗಳಿಂದಲೂ ದ್ರಾವಣ ಸಿಂಪಡಣೆ ಆಗುತ್ತದೆ. ಒಂದು ಬಾರಿಗೆ ಮೂರೂವರೆ ಲೀಟರ್‌ ಪೆಟ್ರೋಲನ್ನು ಇಂಧನ ರೂಪದಲ್ಲಿ ತುಂಬಿಸಿಕೊಂಡು ಹಾರುವ ಡ್ರೋನ್, ಒಂದೂವರೆ ಗಂಟೆ ಕಾರ್ಯನಿರ್ವಹಿಸುತ್ತದೆ.

ಕೊರೊನಾ ವೈರಸ್ ವಿರುದ್ಧದ ಹೋರಾಟಕ್ಕೆ ಹೊಸ ಅಸ್ತ್ರ..! 69 ಔಷಧಗಳ ಪಟ್ಟಿ ರಡಿ..!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ