ಆ್ಯಪ್ನಗರ

ಮೋದಿ ಬರ್ತ ಡೇ ಸಂಭ್ರಮದ ವೇಳೆ ಅವಘಡ: ಸಿಡಿದ ಹೀಲಿಯಂ ಬಲೂನ್‌, ಬೆಂಕಿ ತಗುಲಿ ಬಿಜೆಪಿಗರಿಗೆ ಗಾಯ!

​​ಪಡಿ ಎಂಬಲ್ಲಿ ಪ್ರಧಾನಿ ಮೋದಿ ಬರ್ತ ಡೇ ಹಿನ್ನೆಲೆ ಬಿಜೆಪಿ ರೈತ ಮೋರ್ಚಾದ ಕಾರ್ಯಕರ್ತರು ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ. ಸಂಭ್ರಮಾಚರಣೆಯ ಭಾಗವಾಗಿ ಹೀಲಿಯಂ ಬಲೂನ್‌ಗಳನ್ನು ಆಕಾಶಕ್ಕೆ ಹಾರಿಸುವ ಕಾರ್ಯಕ್ರಮ ಆಯೋಜಿಸಲಾಗಿತ್ತು. ಆದರೆ ಆಕಾಶಕ್ಕೆ ಹಾರಿಸುವ ಮುನ್ನವೇ ಹೀಲಿಯಂ ಬಲೂನ್‌ಗಳು ಬ್ಲಾಸ್‌ ಆಗಿದೆ. ಮೂಲಗಳ ಪ್ರಕಾರ 30 ಮಂದಿಗೆ ಸಣ್ಣ ಪುಟ್ಟ ಗಾಯಾಗಳಾಗಿದೆ ಎಂದು ತಿಳಿದುಬಂದಿದೆ. ನಂತರ ಅವರನ್ನು ಕಿಲಪೌಕ್‌ ಆಸ್ಪತ್ರೆಗೆ ದಾಖಲಿಸಲಾಗಿದೆ.

Agencies 19 Sep 2020, 10:51 am
ಚೆನ್ನೈ: ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನವನ್ನು ಆಚರಿಸುವ ವೇಳೆ ಹೀಲಿಯಂ ಬಲೂನ್‌ಗಳು ಸ್ಪೋಟಗೊಂಡ ಘಟನೆಯೊಂದು ಚೆನ್ನೈನ ಪಡಿ ಎಂಬಲ್ಲಿ ನಡೆದಿದೆ. ಈ ಘಟನೆ ಸೆ.17ರಂದು ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಈ ಸಂಬಂಧ ವಿಡಿಯೋ ಕೂಡ ಹರಿದಾಡುತ್ತಿದೆ.
Vijaya Karnataka Web Hydrogen-balloon


ಪಡಿ ಎಂಬಲ್ಲಿ ಪ್ರಧಾನಿ ಮೋದಿ ಬರ್ತ ಡೇ ಹಿನ್ನೆಲೆ ಬಿಜೆಪಿ ರೈತ ಮೋರ್ಚಾದ ಕಾರ್ಯಕರ್ತರು ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ. ಸಂಭ್ರಮಾಚರಣೆಯ ಭಾಗವಾಗಿ ಹೀಲಿಯಂ ಬಲೂನ್‌ಗಳನ್ನು ಆಕಾಶಕ್ಕೆ ಹಾರಿಸುವ ಕಾರ್ಯಕ್ರಮ ಆಯೋಜಿಸಲಾಗಿತ್ತು. ಆದರೆ ಆಕಾಶಕ್ಕೆ ಹಾರಿಸುವ ಮುನ್ನವೇ ಹೀಲಿಯಂ ಬಲೂನ್‌ಗಳು ಬ್ಲಾಸ್‌ ಆಗಿದೆ. ಮೂಲಗಳ ಪ್ರಕಾರ 30 ಮಂದಿಗೆ ಸಣ್ಣ ಪುಟ್ಟ ಗಾಯಾಗಳಾಗಿದೆ ಎಂದು ತಿಳಿದುಬಂದಿದೆ. ನಂತರ ಅವರನ್ನು ಕಿಲಪೌಕ್‌ ಆಸ್ಪತ್ರೆಗೆ ದಾಖಲಿಸಲಾಗಿದೆ.

ವಿಡಿಯೋದಲ್ಲಿ ಏನಿದೆ?: ರೈತ ಮೋರ್ಚಾದ ಉಪಾಧ್ಯಕ್ಷ ಮುತ್ತು ರಾಮನ್‌ ಎಂಬವರು ದೊಡ್ಡ ಹೂ ಮಾಲೆ ಹಾಕಿಂಡು ಜನರ ಮಧ್ಯದಲ್ಲಿ ನಿಂತು ಫೋಟೊ ತೆಗೆದುಕೊಂಡಿರುತ್ತಾರೆ. ವಿಡಿಯೋದಲ್ಲಿ ಪಟಾಕಿ ಸದ್ದು ಕೂಡ ಕೇಳಿ ಬರುತ್ತಿರುತ್ತದೆ. ಇನ್ನು ಮಹಿಳೆಯೊಬ್ಬರು ಯುವಕನೊಬ್ಬ ಹಿಡಿದಿದ್ದ ಬಲೂನ್‌ ತೆಗೆದುಕೊಳ್ಳಲು ಬರುತ್ತಾರೆ.


ಈ ವೇಳೆ ಏಕಾಏಕಿ ಬಲೂನ್‌ ಸಿಡಿದಿದೆ. ಪಟಾಕಿಯ ಕಿಡಿ ಹಾರಿ ಹೀಲಿಯಂ ಬಲೂನ್‌ಗಳು ಬ್ಲಾಸ್ ಆಗಿರುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ. ಸದ್ಯ ಅನುಮತಿ ಇಲ್ಲದೆ ಕಾರ್ಯಕ್ರಮ ಆಯೋಜಿಸಿದ ಬಿಜೆಪಿ ಕಾರ್ಯಕರ್ತರ ವಿರುದ್ಧ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.

ಶೋಪಿಯಾನ್‌ ಎನ್‌ಕೌಂಟರ್‌ ಕುರಿತು ಕೋರ್ಟ್‌ ಮಾರ್ಷಲ್‌ ವಿಚಾರಣೆ!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ