ಆ್ಯಪ್ನಗರ

ಕೊರೊನಾ ವೈರಸ್‌ ಭೀತಿ: ಇರಾನ್‌ನಲ್ಲಿರುವ ಭಾರತೀಯ ಮೀನುಗಾರರ ಸ್ಥಳಾಂತರಕ್ಕೆ ತಮಿಳುನಾಡು ಸಿಎಂ ಒತ್ತಾಯ

ಇರಾನ್‌ನಲ್ಲಿರುವ ಭಾರತೀಯ ಮೀನುಗಾರರನ್ನು ಭಾರತಕ್ಕೆ ಸುರಕ್ಷಿತವಾಗಿ ಸ್ಥಳಾಂತರಿಸಬೇಕೆಂದು ತಮಿಳುನಾಡು ಸಿಎಂ ಎಡಪ್ಪಾಡಿ ಪಳನಿಸ್ವಾಮಿ ವಿದೇಶಾಂಗ ಸಚಿವ ಜೈಶಂಕರ್‌ಗೆ ಪತ್ರ ಬರೆದಿದ್ದಾರೆ.

TIMESOFINDIA.COM 28 Feb 2020, 5:21 pm

ಹೈಲೈಟ್ಸ್‌:

  • ಇರಾನ್‌ನಲ್ಲಿ ಹೆಚ್ಚಾದ ಕೊರೊನಾ ವೈರಸ್‌, ರದ್ದಾದ ವಿಮಾನಗಳು
  • ಭಾರತೀಯ ಮೀನುಗಾರರ ಸ್ಥಳಾಂತರಕ್ಕೆ ತಮಿಳುನಾಡು ಸಿಎಂ ಒತ್ತಾಯ
  • ವಿದೇಶಾಂಗ ಸಚಿವ ಜೈಶಂಕರ್‌ಗೆ ಪತ್ರ ಬರೆದ ಎಡಪ್ಪಾಡಿ ಪಳನಿಸ್ವಾಮಿ
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web edappadi k palaniswami
ಚೆನ್ನೈ: ಇರಾನ್‌ನಲ್ಲಿ ಕೊರೊನಾ ವೈರಸ್‌ ಪ್ರಕರಣಗಳು ಪತ್ತೆಯಾದ ಹಿನ್ನೆಲೆಯಲ್ಲಿ, ಆ ದೇಶದಲ್ಲಿ ಸಿಲುಕಿರುವ ತಮಿಳುನಾಡಿನ ಸೇರಿ 450 ಭಾರತೀಯ ಮೀನುಗಾರರಿಗೆ ನೆರವು ನೀಡುವಂತೆ ತಮಿಳುನಾಡು ಸಿಎಂ ಎಡಪ್ಪಾಡಿ ಪಳನಿಸ್ವಾಮಿ ಮನವಿ ಮಾಡಿದ್ದಾರೆ. ವಿದೇಶಾಂಗ ಸಚಿವ ಜೈಶಂಕರ್‌ಗೆ ಶುಕ್ರವಾರ ಕೇಳಿಕೊಂಡಿದ್ದಾರೆ.
ಇರಾನ್‌ನಲ್ಲಿ ಕೊರೊನಾ ವೈರಸ್‌ ಪ್ರಕರಣಗಳು ಹೆಚ್ಚಾಗಿದ್ದು, ವಿಮಾನಗಳು ಸಹ ರದ್ದಾಗಿವೆ. ಈ ಹಿನ್ನೆಲೆ ಇರಾನ್‌ನಲ್ಲಿ ಸಿಲುಕಿರುವ ತಮಿಳುನಾಡಿನ 300 ಮಂದಿ ಸೇರಿದಂತೆ 450 ಭಾರತೀಯ ಮೀನುಗಾರರನ್ನು ಸ್ಥಳಾಂತರಿಸಬೇಕೆಂದು ತಮಿಳುನಾಡು ಸಿಎಂ ವಿದೇಶಾಂಗ ಸಚಿವರನ್ನು ಒತ್ತಾಯಿಸಿದ್ದಾರೆ.

ಈ ಸಂಬಂಧ ವಿದೇಶಾಂಗ ವ್ಯವಹಾರಗಳ ಸಚಿವ ಜೈಶಂಕರ್‌ಗೆ ಪತ್ರ ಬರೆದ ಎಡಪ್ಪಾಡಿ ಪಳನಿಸ್ವಾಮಿ, ಅದರ ಪ್ರತಿಯನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದರು. ವಿವಿಧ ಮೀನುಗಾರಿಕಾ ಹಡಗುಗಳಲ್ಲಿ ಕೆಲಸ ಮಾಡುತ್ತಿರುವ, ಇರಾನ್‌ನ ವಿವಿಧ ಬಂದರುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಮೀನುಗಾರರ ದುಃಸ್ಥಿತಿಯನ್ನು ತಮಿಳುನಾಡು ಮುಖ್ಯಮಂತ್ರಿ ವಿವರಿಸಿದ್ದಾರೆ.

ಸಿಎಎ ವಿರುದ್ಧ ಚೆನ್ನೈನಲ್ಲಿ ಬೃಹತ್‌ ರ‍್ಯಾಲಿ, ವಿಧಾನಸಭೆಗೆ ಮುತ್ತಿಗೆ ಯತ್ನ

ಪೋರ್ಟ್ ಕಿಶ್, ಚೀರು ಮತ್ತು ಇರಾನ್‌ನ ಇತರ ಸ್ಥಳಗಳಲ್ಲಿ ಮೀನುಗಾರರು ಸಿಲುಕಿಕೊಂಡಿದ್ದಾರೆ. ಇರಾನ್‌ನಲ್ಲಿ ಕೊರೊನಾವೈರಸ್ ಸೋಂಕು ಹರಡಿದ ಕಾರಣ ವಿಮಾನಗಳು ರದ್ದಾಗಿವೆ. ಈ ಹಿನ್ನೆಲೆ ಮೀನುಗಾರರು ಇರಾನ್‌ನಿಂದ ತಕ್ಷಣ ತಮ್ಮನ್ನು ಸ್ಥಳಾಂತರಿಸುವಂತೆ ಮನವಿ ಮಡುತ್ತಿದ್ದಾರೆ ಎಂದು ಪಳನಿಸ್ವಾಮಿ ಜೈಶಂಕರ್‌ಗೆ ಬರೆದಿರುವ ಪತ್ರದಲ್ಲಿ ಹೇಳಿದ್ದಾರೆ.

ಪ್ರಧಾನ ಮಂತ್ರಿ ಕಿಸಾನ್‌ ಸಮ್ಮಾನ್‌ ಯೋಜನೆ: ತಮಿಳುನಾಡಿಗೆ 2 ಸಾವಿರ ಕೋಟಿ ಅನುದಾನ

ಅಲ್ಲದೆ, ಮೀನುಗಾರರಿಗೆ ಅಗತ್ಯವಾದ ನೆರವು ನೀಡುವಂತೆ ಇರಾನ್‌ನ ಭಾರತೀಯ ರಾಯಭಾರ ಕಚೇರಿಗೆ ನಿರ್ದೇಶನ ನೀಡುವಂತೆ ಪಳನಿಸ್ವಾಮಿ ಕೇಂದ್ರ ಸಚಿವರನ್ನು ಒತ್ತಾಯಿಸಿದರು.

ಕಾರವಾರ: ದಿಗ್ಬಂಧನದ ಹಡಗಿನಿಂದ ಮರಳಿದ ಭಾರತೀಯರು, ಅಭಿಷೇಕ್‌ ಕುಟುಂಬದಲ್ಲಿ ಸಂತಸ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ