ಆ್ಯಪ್ನಗರ

ಥ್ರೋಬಾಲ್‌: ಜೆಎನ್‌ಸಿ ಕಾಲೇಜು ಪ್ರಥಮ

ನಗರದ ಸರಕಾರಿ ಮಹಿಳಾ ಕಾಲೇಜಿನಲ್ಲಿ ನಡೆದ ಬೆಂಗಳೂರು ವಿವಿ ದಕ್ಷಿಣ ವಲಯದ ಥ್ರೋಬಾಲ್‌ ಪಂದ್ಯಾವಳಿ ಬೆಂಗಳೂರಿನ ಜೆಎನ್‌ಸಿ ಕಾಲೇಜು ತಂಡ ಪ್ರಥಮ ಹಾಗೂ ಚಿಂತಾಮಣಿ ಸರಕಾರಿ ಮಹಿಳಾ ಕಾಲೇಜು ದ್ವಿತೀಯ ಸ್ಥಾನಗಳಿಸಿವೆ.

Vijaya Karnataka 24 Mar 2019, 5:00 am
ಚಿಂತಾಮಣಿ: ನಗರದ ಸರಕಾರಿ ಮಹಿಳಾ ಕಾಲೇಜಿನಲ್ಲಿ ನಡೆದ ಬೆಂಗಳೂರು ವಿವಿ ದಕ್ಷಿಣ ವಲಯದ ಥ್ರೋಬಾಲ್‌ ಪಂದ್ಯಾವಳಿ ಬೆಂಗಳೂರಿನ ಜೆಎನ್‌ಸಿ ಕಾಲೇಜು ತಂಡ ಪ್ರಥಮ ಹಾಗೂ ಚಿಂತಾಮಣಿ ಸರಕಾರಿ ಮಹಿಳಾ ಕಾಲೇಜು ದ್ವಿತೀಯ ಸ್ಥಾನಗಳಿಸಿವೆ.
Vijaya Karnataka Web
ಥ್ರೋಬಾಲ್‌: ಜೆಎನ್‌ಸಿ ಕಾಲೇಜು ಪ್ರಥಮ


ಚಿಂತಾಮಣಿ ಸರಕಾರಿ ಮಹಿಳಾ ಕಾಲೇಜಿನ ದೈಹಿಕ ಶಿಕ್ಷ ಣ ನಿರ್ದೇಶಕ ಡಾ.ಸಣ್ಣಚಿಕ್ಕಯ್ಯ ಮಾತನಾಡಿ, ನಮ್ಮ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ದಕ್ಷಿಣ ವಲಯದ ಥ್ರೋಬಾಲ್‌ ಪಂದ್ಯಾವಳಿಯಲ್ಲಿ ಜಯಗಳಿಸಿರುವ ಬೆಂಗಳೂರಿನ ಜ್ಯೋತಿ ನಿವಾಸ್‌ ಕಾಲೇಜು ಮತ್ತು ಚಿಂತಾಮಣಿ ಸರಕಾರಿ ಮಹಿಳಾ ಕಾಲೇಜುಗಳು ಮಾರ್ಚ್‌ 28ರಂದು ಬೆಂಗಳೂರಿನ ಜಿಂದಾಲ್‌ ಪದವಿ ಕಾಲೇಜಿನಲ್ಲಿ ನಡೆಯಲಿರುವ ಅಂತರ ವಲಯ ವಿವಿ ಮಟ್ಟದ ಥ್ರೋ ಬಾಲ್‌ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಕಾಲೇಜಿನ ಪ್ರಿನ್ಸಿಪಾಲ್‌ ಪ್ರೊ.ಕೆ.ಆರ್‌.ಶಿವಶಂಕರ್‌ ಪ್ರಸಾದ್‌ ಮಾತನಾಡಿ, ಕ್ರೀಡಾ ಸ್ಪೂರ್ತಿ ಹೊಂದಿರುವ ಯಾವುದೇ ವಿದ್ಯಾರ್ಥಿ ತಮ್ಮ ಬದುಕು ಉತ್ತಮವಾಗಿ ರೂಪಿಸಿಕೊಳ್ಳಲು ಸಾಧ್ಯ. ಆದ್ದರಿಂದ ವಿದ್ಯಾರ್ಥಿಗಳು ತಾವು ಆಸಕ್ತಿ ಹೊಂದಿರುವ ಯಾವುದೇ ರಂಗದಲ್ಲಿ ಸ್ಪರ್ಧಾ ಮನೋಭಾವದಿಂದ ಮುನ್ನುಗ್ಗುವುದನ್ನು ಕಲಿಯಬೇಕು ಎಂದು ವಿದ್ಯಾರ್ಥಿಗಳಿಗೆ ಮನವಿ ಮಾಡಿದರು.

ಕನ್ನಡ ವಿಭಾಗದ ಮುಖ್ಯಸ್ಥ ಡಾ.ಜಿ.ಎಲ್‌.ವಿಜಯೇಂದ್ರ ಕುಮಾರ್‌ ಮಾತನಾಡಿದರು. ವಿಜೇತ ತಂಡಗಳನ್ನು ಅಭಿನಂದಿಸಲಾಯಿತು. ಸಮಾಜಶಾಸ್ತ್ರ ವಿಭಾಗದ ಚಂದ್ರಶೇಖರ್‌, ಇಂಗ್ಲೀಷ್‌ ವಿಭಾಗದ ಸಣ್ಣೀರಯ್ಯ, ರಾಜ್ಯಶಾಸ್ತ್ರ ವಿಭಾಗದ ಕೆ.ಚಂದ್ರಶೇಖರ್‌, ಗಣಿತ ವಿಭಾಗದ ಕೆಂಪರಾಜು, ದಿನೇಶ್‌, ರವಿ, ಡಾ.ಎಂ.ಎನ್‌.ರಘು ಉಪಸ್ಥಿತರಿದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ