ಆ್ಯಪ್ನಗರ

ಮಾತು ತಪ್ಪಿದ ಮುಖಂಡರು, ಗ್ರಾಪಂ ಕಟ್ಟಡಕ್ಕೆ ಬೀಗ ಜಡಿದ ಅಜ್ಜ

ಕೊಟ್ಟ ಮಾತಿನಂತೆ ನಡೆದುಕೊಳ್ಳದ ಗ್ರಾ.ಪಂ ಸದಸ್ಯರು ಮತ್ತು ಗ್ರಾಮದ ಹಿರಿಯ ಮುಖಂಡರ ವಿರುದ್ಧ ರೊಚ್ಚಿಗೆದ್ದು ಗ್ರಾಮದ ಹಿರಿಯರೊಬ್ಬರು ನೂತನ ಪಂಚಾಯಿತಿ ಕಟ್ಟಡಕ್ಕೆ ಬೀಗ ಜಡಿದು ಆಕ್ರೋಶ ವ್ಯಕ್ತಪಡಿಸಿರುವ ಘಟನೆ ತಾಲೂಕಿನ ಕೋಟಗಲ್‌ ಗ್ರಾಮದಲ್ಲಿ ನಡೆದಿದೆ.

Vijaya Karnataka 25 Apr 2019, 4:28 pm
ಷರತ್ತಿನ ಮೇಲೆ ಕಟ್ಟಡಕ್ಕೆ ಜಮೀನು ದಾನ | ಮಾತು ಮರೆತ ಸದಸ್ಯರು | ದನದ ದೊಡ್ಡಿಯಾದ ಹೊಸ ಕಟ್ಟಡ
Vijaya Karnataka Web
ಮಾತು ತಪ್ಪಿದ ಮುಖಂಡರು, ಗ್ರಾಪಂ ಕಟ್ಟಡಕ್ಕೆ ಬೀಗ ಜಡಿದ ಅಜ್ಜ

ಚಿಂತಾಮಣಿ ಗ್ರಾಮಾಂತರ: ಕೊಟ್ಟ ಮಾತಿನಂತೆ ನಡೆದುಕೊಳ್ಳದ ಗ್ರಾ.ಪಂ ಸದಸ್ಯರು ಮತ್ತು ಗ್ರಾಮದ ಹಿರಿಯ ಮುಖಂಡರ ವಿರುದ್ಧ ರೊಚ್ಚಿಗೆದ್ದು ಗ್ರಾಮದ ಹಿರಿಯರೊಬ್ಬರು ನೂತನ ಪಂಚಾಯಿತಿ ಕಟ್ಟಡಕ್ಕೆ ಬೀಗ ಜಡಿದು ಆಕ್ರೋಶ ವ್ಯಕ್ತಪಡಿಸಿರುವ ಘಟನೆ ತಾಲೂಕಿನ ಕೋಟಗಲ್‌ ಗ್ರಾಮದಲ್ಲಿ ನಡೆದಿದೆ.

ವೆಂಕಟೇಶಯ್ಯಶೆಟ್ಟಿ ಗಾ.್ರಪಂ ಕಟ್ಟಡಕ್ಕೆ ಬೀಗ ಜಡಿದಿರುವ ವ್ಯಕ್ತಿ. ವೆಂಕಟೇಶಯ್ಯಶೆಟ್ಟಿ ಗ್ರಾಮ ಪಂಚಾಯಿತಿ ಕಟ್ಟಡ ಕಟ್ಟಲು ಗ್ರಾ.ಪಂ ಸದಸ್ಯರ ಮತ್ತು ಗ್ರಾಮದ ಮುಖಂಡರೊಂದಿಗೆ ಒಪ್ಪಂದ ಮಾಡಿಕೊಂಡು ತಮ್ಮ ಜಮೀನನ್ನು ದಾನವಾಗಿ ನೀಡಿದ್ದರು. ಆದರೆ ಒಪ್ಪಂದದಂತೆ ಗ್ರಾಮದ ಮುಖಂಡರು ಮತ್ತು ಗ್ರಾ.ಪಂ ಸದಸ್ಯರು ನಡೆದುಕೊಳ್ಳದ ಕಾರಣ, ಅಸಮಾಧಾನಗೊಂಡ ವೆಂಕಟೇಶಯ್ಯಶೆಟ್ಟಿ ಕಟ್ಟಡಕ್ಕೆ ಬೀಗ ಜಡಿದಿದ್ದಾರೆ ಎನ್ನಲಾಗಿದೆ.

ಒಪ್ಪಂದವೇನು?: ಕಳೆದ 2013-14ನೇ ಸಾಲಿನಲ್ಲಿ ಕೋಟಗಲ್‌ ಗ್ರಾ.ಪಂ ಕಾರ್ಯಾಲಯವನ್ನು ನಿರ್ಮಾಣ ಮಾಡಲೆಂದು ಸರಕಾರದಿಂದ ಕಟ್ಟಡಕ್ಕೆ ಅನುದಾನ ಮಂಜೂರಾಗಿತ್ತು. ಕಟ್ಟಡ ನಿರ್ಮಾಣ ಮಾಡಲು ಸ್ಥಳವಿಲ್ಲದ ಕಾರಣ, ಗ್ರಾಮದ ಮುಖಂಡರು ಮತ್ತು ಗ್ರಾ.ಪಂ ಸದಸ್ಯರು ಜಾಗಕ್ಕಾಗಿ ಹುಡುಕಾಟ ನಡೆಸುತ್ತಿದ್ದರು. ಈ ವೇಳೆ ವೆಂಕಟೇಶಯ್ಯಶೆಟ್ಟಿ ಷರತ್ತುಬದ್ಧವಾಗಿ ಕಟ್ಟಡ ಕಟ್ಟಲು ಜಾಗ ಬಿಟ್ಟುಕೊಡುವುದಾಗಿ ಒಪ್ಪಿಕೊಂಡಿದ್ದರು. ತಮ್ಮ ಮನೆಯಲ್ಲಿ ಬಾಡಿಗೆಗೆ ಇರುವ ಶಾಹಿನ ಎಂಬುವರನ್ನು ಖಾಲಿ ಮಾಡಿಸಿದರೆ, ಗ್ರಾ.ಪಂ ಕಟ್ಟಡ ನಿರ್ಮಾಣ ಜಾಗ ಕೊಡುವುದಾಗಿ ವೆಂಕಟೇಶಯ್ಯಶೆಟ್ಟಿ ಮಾತು ಕೊಟ್ಟಿದ್ದರು ಎನ್ನಲಾಗಿದೆ. ವೆಂಕಟೇಶಯ್ಯಶೆಟ್ಟಿ ಷರತ್ತಿಗೆ ಒಪ್ಪಿದ ಕೋಟಗಲ್‌ ಗ್ರಾಮದ ಮುಖಂಡರು ಮತ್ತು ಅಂದಿನ ಗ್ರಾ.ಪಂ ಸದಸ್ಯರು ದಾನವಾಗಿ ಬಂದ ಜಾಗದಲ್ಲಿ ಗ್ರಾಮ ಪಂಚಾಯಿತಿ ಕಟ್ಟಡ ಕಟ್ಟಿದರು. ಆದರೆ, ವೆಂಕಟೇಶಯ್ಯಶೆಟ್ಟಿ ಅವರ ಷರತ್ತನ್ನು ಮರೆತುಬಿಟ್ಟರು. ಇದರಿಂದ ಬೇಸರಗೊಂಡು ಗ್ರಾಪಂ ಕಟ್ಟಡಕ್ಕೆ ಬೀಗ ಹಾಕಿದ್ದಾರೆ.

ದನದ ಕೊಟ್ಟಿಗೆಯಾದ ಆವರಣ: ಒಪಂದದ ಮೆರೆಗೆ ಭೂ ದಾನ ಪಡೆದು ಗ್ರಾ.ಪಂ ಕಟ್ಟಡ ನಿರ್ಮಾಣ ಮಾಡಿರುವ ಗ್ರಾಮದ ಮುಖಂಡರು ಒಪ್ಪಂದದಂತೆ ನಡೆದುಕೊಳ್ಳಲಿಲ್ಲ. ಇತ್ತ, ಜಾಗವನ್ನು ದಾನವಾಗಿ ಕೊಟ್ಟ ವೆಂಕಟೇಶಯ್ಯಶೆಟ್ಟಿ ಮಾತು ತಪ್ಪಿದ ಗ್ರಾಮಸ್ಥರ ವಿರುದ್ಧ ಸಿಟ್ಟಿಗೆದ್ದು ಕಟ್ಟಡಕ್ಕೆ ಬೀಗ ಹಾಕಿದ್ದಾರೆ. ಇದನ್ನೇ ಬಂಡವಾಳ ಮಾಡಿಕೊಂಡ ಊರಿನ ಕೆಲವರು ಹೊಸ ಕಟ್ಟಡದ ಮುಂಭಾಗ ದನ, ಕರುಗಳನ್ನು ಕಟ್ಟಿ ಹಾಕುತ್ತಿದ್ದಾರೆ. ಇದರಿಂದಾಗಿ ಹೊಸ ಪಂಚಾಯಿತಿ ಕಟ್ಟಡದ ಆವರಣದ ದನದ ಕೊಟ್ಟಿಗೆಯಂತಾಗಿದೆ.

ನಾನು ವೃದ್ಧನಾಗಿರುವ ಕಾರಣ ನಮ್ಮ ಮೆನೆಯಲ್ಲಿ ಬಾಡಿಗೆಗೆ ಇರುವ ಶಾಹಿನ ಎಂಬ ಮುಸ್ಲಿಂ ಮಹಿಳೆಯನ್ನು ಖಾಲಿ ಮಾಡಿಸಲು ನನ್ನಿಂದ ಸಾಧ್ಯವಾಗಿಲ್ಲ. ನನ್ನ ಜಮೀನು ಹೋದರೆ ಹೋಗಲಿ ಎಂದು ಗ್ರಾ.ಪಂ ಕಟ್ಟಡ ನಿರ್ಮಾಣಕ್ಕೆ ಜಮೀನು ದಾನ ಕೊಟ್ಟೆ. ನಮ್ಮ ಮನೆಯಲ್ಲಿ ಬಾಡಿಗೆಗೆ ಇರುವ ಆ ಮಹಿಳೆಯನ್ನು ಮನೆಯಿಂದ ಖಾಲಿ ಮಾಡಿಸುವಂತೆ ಷರತ್ತು ಹಾಕಿದ್ದೆ. ಅದಕ್ಕೆ ಒಪ್ಪಿ ಭೂಮಿ ಪಡೆದು ಕಟ್ಟಡ ಕಟ್ಟಿದ ಊರಿನ ಮುಖಂಡರು ಈಗ ಮಾತು ಮರೆತು ಕುಳಿತಿದ್ದಾರೆ. ಹೀಗಾಗಿ ಬೇರೆ ದಾರಿಯಿಲ್ಲದೆ ಹೊಸ ಕಟ್ಟಡಕ್ಕೆ ಬೀಗ ಹಾಕಿದ್ದೇನೆ. ನಮ್ಮ ಒಪ್ಪಂದರ ಪ್ರಕಾರ ಯಾವಾಗ ಖಾಲಿ ಮಾಡಿಸುತ್ತಾರೋ ಆಗ ಕಟ್ಟಡದ ಬೀಗ ತೆಗೆಯುತ್ತೇನೆ ಇಲ್ಲವಾದರೆ ತೆಗೆಯಲ್ಲ.
-ವೆಂಕಟೇಶಯ್ಯಶೆಟ್ಟಿ. ಕಟ್ಟಡ ನಿರ್ಮಾಣಕ್ಕೆ ಭೂಮಿ ಕೊಟ್ಟವರು

ವೆಂಕಟೇಶಯ್ಯಶೆಟ್ಟಿ ಅವರಿಂದ ಷರತ್ತುಬದ್ಧವಾಗಿ ಜಮೀನು ಪಡೆದಿರುವುದು ನಿಜ. ಆದರಂತೆ ಶಾಹಿನರವರಿಗೆ ಗ್ರಾ.ಪಂ ವತಿಯಿಂದ ವಸತಿ ಸೌಲಭ್ಯ ಕಲ್ಪಿಸಿ ಮನೆ ನಿರ್ಮಿಸಿಕೊಡಲಾಗಿದೆ. ಆದರೂ ಅವರು ವೆಂಕಟೇಶಯ್ಯಶೆಟ್ಟಿ ರವರ ಮನೆ ಖಾಲಿ ಮಾಡದಿರುವ ಕಾರಣವೇನೆಂಬುವುದು ತಿಳಿಯುತ್ತಿಲ್ಲ. ಶೀಘ್ರದಲ್ಲಿಯೇ ವೆಂಕಟೇಶಯ್ಯಶೆಟ್ಟಿ ಅವರ ಮನೆಯಲ್ಲಿರುವ ಶಾಹಿನ ಅವರನ್ನು ಖಾಲಿ ಮಾಡಿಸಿಕೊಡಲಾಗುವುದು.
-ಲಕ್ಷ್ಮೀನಾರಾಯಣ ಗ್ರಾ.ಪಂ ಸದಸ್ಯ ಕೋಟಗಲ್‌

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ