ಆ್ಯಪ್ನಗರ

ರೈತರ ಬೇಡಿಕೆ ಈಡೇರಿಕೆಗೆ ಒತ್ತಾಯ

ರೈತರು ಮತ್ತು ಕೃಷಿ ಕೂಲಿಗಾರರ ವಿವಿಧ ಸಮಸ್ಯೆಗಳನ್ನು ಶೀಘ್ರ ಪರಿಹರಿಸಲು ಒತ್ತಾಯಿಸಿ ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಸಮಿತಿ ಪದಾಧಿಕಾರಿಗಳು ಜಿಲ್ಲಾಡಳಿತ ಭವನದಲ್ಲಿ ಅಪರ ತಹಶೀಲ್ದಾರ್‌ ಕೃಷ್ಣಪ್ಪ ಅವರಿಗೆ ಗುರುವಾರ ಮನವಿ ಸಲ್ಲಿಸಿದರು.

Vijaya Karnataka 7 Jun 2019, 3:56 pm
ಚಿಕ್ಕಬಳ್ಳಾಪುರ:
ರೈತರು ಮತ್ತು ಕೃಷಿ ಕೂಲಿಗಾರರ ವಿವಿಧ ಸಮಸ್ಯೆಗಳನ್ನು ಶೀಘ್ರ ಪರಿಹರಿಸಲು ಒತ್ತಾಯಿಸಿ ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಸಮಿತಿ ಪದಾಧಿಕಾರಿಗಳು ಜಿಲ್ಲಾಡಳಿತ ಭವನದಲ್ಲಿ ಅಪರ ತಹಶೀಲ್ದಾರ್‌ ಕೃಷ್ಣಪ್ಪ ಅವರಿಗೆ ಗುರುವಾರ ಮನವಿ ಸಲ್ಲಿಸಿದರು.
Vijaya Karnataka Web CBP-6CBPD6


ಸಂಘದ ಜಿಲ್ಲಾಧ್ಯಕ್ಷ ಬಿ.ಎನ್‌.ಮುನಿಕೃಷ್ಣಪ್ಪ ಮಾತನಾಡಿ, ಜಿಲ್ಲೆ ಸತತ ಬರಗಾಲಕ್ಕೆ ಸಿಲುಕಿ ರೈತರು, ಕೃಷಿ ಕೂಲಿಗಾರರನ್ನು ವಲಸೆ ಹೋಗುವ ಪರಿಸ್ಥಿತಿ ಉಂಟಾಗಿದೆ. ಕೇಂದ್ರ ಮತ್ತು ರಾಜ್ಯ ಸರಕಾರ ಯಾವುದೇ ಬರ ಪರಿಹಾರ ಕ್ರಮ ಕೈಗೊಳ್ಳದಿರುವುದರಿಂದ ರೈತರನ್ನು ಸಂಕಷ್ಟಕ್ಕೆ ತಳ್ಳಿದೆ. ಶೀಘ್ರವಾಗಿ ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸಲು ಸರಕಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ರೈತರಿಗೆ ಕಿರುಕುಳ ತಪ್ಪಿಸಿ: ಬಗುರ್‌ಹುಕಂ ಸಾಗುವಳಿದಾರರು ಮಂಜೂರಾತಿ ಸಲ್ಲಿಸಿರುವ ಫಾರಂ ನಂ 57, 53 ಮತ್ತು 50 ಅರ್ಜಿಗಳನ್ನು ಶೀಘ್ರ ಪರಿಶೀಲಿಸಿ ಸಾಗುವಳಿ ಚೀಟಿ ನೀಡಲು ತಕ್ಷ ಣ ಭೂ ಮಂಜುರಾತಿ ಸಮಿತಿ ರಚಿಸಬೇಕು. ಗೋಮಾಳ ಮತ್ತು ಅರಣ್ಯ ಪ್ರದೇಶ ಜಮೀನುಗಳಲ್ಲಿ ಉಳುಮೆ ಮಾಡುತ್ತಿರುವ ರೈತರಿಗೆ ಕಿರುಕುಳ ನೀಡುವುದನ್ನು ತಪ್ಪಿಸಬೇಕು ಎಂದು ಒತ್ತಾಹಿಸಿದರು.

ಬರಪರಿಹಾರಕ್ಕೆ ಒತ್ತಾಯ: ಜಿಲ್ಲೆಯಲ್ಲಿ ಬರ, ಬಿರುಗಾಳಿಯಿಂದ ನಷ್ಟ ಉಂಟಾಗಿರುವ ರೈತರಿಗೆ ಶೀಷ್ರ ಪರಿಹಾರ ಒಕದಗಿಸಬೇಕು. ಈ ಬಾರಿ ಬರ ಹೆಚ್ಚಿರುವುದರಿಂದ ಪಡಿತರ ಹೆಚ್ಚಳ ಮಾಡಿ, ಜನ ಜಾನುವಾರಗಳಿಗೆ ನೀರು, ಮೇವು ಸೌಕರ್ಯಗಳನ್ನು ನೀಡಬೇಕು. ಎಲ್ಲ ತಾಲೂಕುಗಳಲ್ಲಿ ಗೋಶಾಲೆ ತೆರೆಯಬೇಕು. ಹಾಲು ಡೇರಿಗಳ ಮೂಲಕ ಮೇವು ವಿತರಿಸಬೇಕು. ಹಾಲಿನ ದರ ಹೆಚ್ಚಿಸಿ, ಪಶು ಆಹಾರ ಕಡಿಮೆ ಮಾಡಬೇಕು ಎಂದು ಆಗ್ರಹಿಸಿದರು.

ನರೇಗಾ ಕೂಲಿ 600 ರೂ.ಗೆ ಹೆಚ್ಚಿಸಿ: ಉದ್ಯೋಗ ಖಾತ್ರಿ ಯೋಜನೆಯಡಿ ವಾರ್ಷಿಕ ಕನಿಷ್ಠ 300 ದಿನಗಳ ಕೆಲಸ ಹಾಗೂ ದಿನಕ್ಕೆ 600 ಕೂಲಿ ನಿಗಧಿಪಡಿಸಬೇಕು.ಉದ್ಯೋಗ ಖಾತ್ರಿ ಯೋಜನೆಯಡಿ ನಡೆಯುತ್ತಿರುವ ಅವ್ಯವಹಾರ ತಡೆಯಬೇಕು ಹಾಗೂ ಅವ್ಯವಹಾರ ನಡೆಸಿರುವ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಪ್ರಧಾನ ಕಾರ್ಯದರ್ಶಿ ಚನ್ನರಾಯಪ್ಪ ಮಾತನಾಡಿ, ರೈತರ ಸಂಪೂರ್ಣ ಸಾಲ ಮನ್ನಾ, ಕಿರುಕುಳ ನೀಡುವ ಬ್ಯಾಂಕ್‌ ಅಧಿಕಾರಿಗಳ ವಿರುದ್ಧ ಕ್ರಮ, ಕೃಷಿ ಇಲಾಖೆಯಲ್ಲಿ ಹನಿ ನೀರಾವರಿ, ತುಂತರು ನೀರಾವರಿ, ಯಂತ್ರೋಪಕರಣಗಳಲ್ಲಿ ನಡೆದಿರುವ ಅವ್ಯವಹಾರಗಳ ತನಿಖೆ ಮಾಡಿ, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.

ಜಿಲ್ಲಾ ಸಮಿತಿ ಸದಸ್ಯರಾದ ರವಿಚಂದ್ರರೆಡ್ಡಿ, ಹೇಮಚಂದ್ರ, ಆರ್‌.ಚಂದ್ರಶೇಖರ್‌ ರೆಡ್ಡಿ, ಶ್ರೀರಾಮಪ್ಪ, ರಾಜು, ಎಲ್‌.ವೆಂಕಟೇಶ್‌, ವೆಂಕಟರಾಮರೆಡ್ಡಿ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ