ಆ್ಯಪ್ನಗರ

ಮಕ್ಕಳ ಚಲನಚಿತ್ರೋತ್ಸವಕ್ಕೆ ಚಾಲನೆ

ಪಟ್ಟಣದ ಆರ್‌.ಕೆ.ಎನ್‌. ಚಿತ್ರ ಮಂದಿರದಲ್ಲಿ ಪುಟಾಣಿ ಸಫಾರಿ ಮಕ್ಕಳ ಚಲನಚಿತ್ರೋತ್ಸವಕ್ಕೆ ಪ್ರಾಥಮಿಕ ಶಾಲೆಗಳ ಶಿಕ್ಷ ಣ ಸಂಯೋಜಕ ರವೀಂದ್ರಗೌಡ ಚಾಲನೆ ನೀಡಿದರು.

Vijaya Karnataka 19 Jul 2019, 3:32 pm
ಗುಡಿಬಂಡೆ: ಪಟ್ಟಣದ ಆರ್‌.ಕೆ.ಎನ್‌. ಚಿತ್ರ ಮಂದಿರದಲ್ಲಿ ಪುಟಾಣಿ ಸಫಾರಿ ಮಕ್ಕಳ ಚಲನಚಿತ್ರೋತ್ಸವಕ್ಕೆ ಪ್ರಾಥಮಿಕ ಶಾಲೆಗಳ ಶಿಕ್ಷ ಣ ಸಂಯೋಜಕ ರವೀಂದ್ರಗೌಡ ಚಾಲನೆ ನೀಡಿದರು.
Vijaya Karnataka Web
ಮಕ್ಕಳ ಚಲನಚಿತ್ರೋತ್ಸವಕ್ಕೆ ಚಾಲನೆ


ಮಕ್ಕಳೇ ನಟಿಸಿರುವ ಚಲನಚಿತ್ರಗಳಲ್ಲಿ ಸಂಸ್ಕಾರ, ಪರಿಸರ, ಸಾಮಾಜಿಕ ಕಾಳಜಿಯನ್ನು ಮನರಂಜನೆ ಜತೆ ಪ್ರದರ್ಶಿಸುವುದರಿಂದ ಮಕ್ಕಳು ಸಮಾಜಮುಖಿಗಳಾಗಲು ಸಹಕಾರಿ. ಅದಕ್ಕಾಗಿ ಒಂದು ವಾರ ನಗರದಲ್ಲಿ ಮಕ್ಕಳ ಚಿತ್ರೋತ್ಸವವನ್ನು ಆಯೋಜಿಸಲಾಗಿದೆ ಎಂದರು.

ಪುಟಾಣಿ ಸಫಾರಿ ಎಂಬ ಮಕ್ಕಳ ಚಲನಚಿತ್ರವನ್ನು ತಾಲೂಕಿನ ವಿವಿಧ ಶಾಲೆಗಳ ವಿದ್ಯಾರ್ಥಿಗಳಿಗೆ ಆರ್‌.ಕೆ.ಎನ್‌. ಚಿತ್ರ ಮಂದಿರದಲ್ಲಿ ಬೆಳಗ್ಗೆ 8ರಿಂದ 10 ಗಂಟೆಯವರೆಗೆ ತೋರಿಸಲಾಗುತ್ತದೆ. ಸುಮಾರು 2ರಿಂದ 3 ಸಾವಿರ ವಿದ್ಯಾರ್ಥಿಗಳು ಈ ಚಲನಚಿತ್ರ ವೀಕ್ಷಿಸಲಿದ್ದಾರೆ ಎಂದರು.

ನಮ್ಮದು ಒತ್ತಡದ ಬದುಕು. ಮಕ್ಕಳ ಬಗ್ಗೆ ಕಾಳಜಿ ಕಡಿಮೆ. ಸಾಫ್ಟ್‌ ವೇರ್‌ ದಂಪತಿ ಮಗನೊಬ್ಬ ಓದಿನಲ್ಲಿ ತುಂಬಾ ಜಾಣ. ಆದರೆ, ಅವನಿಗೆ ಅಪ್ಪ ಅಮ್ಮನ ಪ್ರೀತಿ ಸಿಗುವುದಿಲ್ಲ. ಅವನಿಗೆ ಕಾಡಿನಲ್ಲಿ ಸಫಾರಿ ಮಾಡುವ ಆಸೆ. ಇನ್ನೊಂದೆಡೆ ಅನಕ್ಷ ರಸ್ಥ ದಂಪತಿಯ ಮಗನಲ್ಲಿ ಕಾಡಿನ ಜ್ಞಾನ ಭಂಡಾರವೇ ಇರುತ್ತದೆ. ಇಬ್ಬರೂ ಕಾಡಿನಲ್ಲಿ ಸಂಧಿಸುತ್ತಾರೆ. ಅಲ್ಲಿ ಅವರು ಏನು ಕಲಿಯುವರು ಎಂಬುದೇ ಚಿತ್ರಕಥೆಯ ತಿರುಳು. ವಿದ್ಯಾರ್ಥಿಗಳಿಗೆ ಈ ಸಫಾರಿಯ ಮೂಲಕ ಕಲಿಕೆಯೂ ಆಗಲಿದೆ ಎಂದು ಅವರು ವಿವರಿಸಿದರು.

ಪಟ್ಟಣದ ಸರಕಾರಿ ಬಾಲಕಿಯರ ಪ್ರೌಢಶಾಲೆಯ ಮುಖ್ಯಶಿಕ್ಷ ಕಿ ಜಿ.ವಿ.ಗಂಗರತ್ನಮ್ಮ, ಸಿ.ಎಲ್‌.ವೆಂಕಟೇಶ್‌ ಮೂರ್ತಿ, ಸರಕಾರಿ ಬಾಲಕಿಯರ ಪ್ರಾಥಮಿಕ ಶಾಲೆಯ ರೂಪಾ, ಪ್ರಭಾವತಿ, ಶಿಕ್ಷ ಕ ಗಂಗಾಧರ್‌, ಎಲ್ಲೋಡು ನೇತಾಜಿ ಶಾಲೆ, ಆರ್‌.ಕೆ.ಎನ್‌. ಚಿತ್ರ ಮಂದಿರದ ಗೌತಮ್‌ ನಾಯ್ಡು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ