ಆ್ಯಪ್ನಗರ

ಕಣ್ಮರೆಯಾದ ಬುಡತಿತ್ತಿಯ ಸಂತೆಯಲ್ಲಿಕಂಡೆ...

ಜಾಗತೀಕರಣದ ಪ್ರಭಾವದಿಂದ ನಮ್ಮ ಪೂರ್ವಜರು ಗ್ರಾಮೀಣ ಭಾಗಳಲ್ಲಿದಿನ ನಿತ್ಯ ಬಳಸುತ್ತಿದ್ದು ಆನೇಕ ವಸ್ತುಗಳು ಇದೀಗ ಕಣ್ಮರೆಯಾಗುತ್ತಿದ್ದು, ಹಳ್ಳಿಗಾಡು ಪ್ರದೇಶಗಳಲ್ಲಿ ಮಹಿಳೆಯರು ಬಳಸುತ್ತಿದ್ದು ಎಲೆ ಅಡಿಕೆ ಇಟ್ಟುಕೊಳ್ಳುವ ಬುಡತಿತ್ತಿಗಳು ಬಹುತೇಕ ಕಣ್ಮೆಯಾಗಿವೆ.

Vijaya Karnataka 27 Aug 2019, 5:00 am
ಬಹುತೇಕ ಮರೆಯಾಗಿರುವ ಸಂಚಿ ಚೀಲಗಳು | ಭಾನುವಾರದ ಸಂತೆಯಲ್ಲಿಮಾರಾಟ
Vijaya Karnataka Web 07451225CMYG1_10

ಬಿ ದ್ಯಾವಪ್ಪ
ಚಿಂತಾಮಣಿ:
ಜಾಗತೀಕರಣದ ಪ್ರಭಾವದಿಂದ ನಮ್ಮ ಪೂರ್ವಜರು ಗ್ರಾಮೀಣ ಭಾಗಳಲ್ಲಿದಿನ ನಿತ್ಯ ಬಳಸುತ್ತಿದ್ದು ಆನೇಕ ವಸ್ತುಗಳು ಇದೀಗ ಕಣ್ಮರೆಯಾಗುತ್ತಿದ್ದು, ಹಳ್ಳಿಗಾಡು ಪ್ರದೇಶಗಳಲ್ಲಿ ಮಹಿಳೆಯರು ಬಳಸುತ್ತಿದ್ದು ಎಲೆ ಅಡಿಕೆ ಇಟ್ಟುಕೊಳ್ಳುವ ಬುಡತಿತ್ತಿಗಳು ಬಹುತೇಕ ಕಣ್ಮೆಯಾಗಿವೆ.
ಎಲೆ ಅಡಿಕೆ ಜಗಿಯುವ ಮಹಿಳೆಯರು ಕಡ್ಡಾಯವಾಗಿ ಈ ಚೀಲಗಳನ್ನು ಇಟ್ಟುಕೊಳ್ಳುತ್ತಿದ್ದರು. ಇವುಗಳನ್ನು ಎಲೆ ಅಡಿಕೆ ಚೀಲ, ಬುಡತಿತ್ತಿ, ಸಂಚಿ ಮತಿತ್ತರ ಹೆಸರುಗಳಿಂದಲೂ ಕರೆಯಲಾಗುತ್ತಿದೆ. ಇದೇ ಚೀಲಗಳನ್ನು ಮಹಿಳೆಯರು ಪಾಕೆಟ್‌ನಂತೆಯೂ ಅವರು ಬಳಸುತ್ತಿದ್ದರು.

ಕಣ್ಮೆಯಾಗಿರುವ ಬುಡತ್ತಿತ್ತಿಗಳು ಭಾನುವಾರದ ಚಿಂತಾಮಣಿ ಸಂತೆಯಲ್ಲಿಕಣ್ಣಿಗೆ ಬಿದ್ದವು. ವೃದ್ಧೆಯೊಬ್ಬರು ಮಾರುತ್ತಿದ್ದ ದೃಶ್ಯ ಕಂಡುಬಂತು.

ಗ್ರಾಮೀಣ ಭಾಗದ ಜನರ ಜೀವನದ ಅವಿಭಾಜ್ಯ ಅಂಗವಾಗಿದ್ದ ಎಲೆ ಆಡಿಕೆ ಚೀಲಗಳು (ಬುಡತಿತ್ತಿಗಳು) ವಿಜ್ನಾನ ತಂತ್ರಜ್ನಾನ ಮುಂದುವರೆದಂತೆ ಮಾರುಕಟ್ಟೆಗೆ ಪಾನ್‌ ಬೀಡಾ, ಪಾನ್‌ ಪರಾಗ್‌, ಮತಿತ್ತರ ಸಿದ್ಧ ವಸ್ತುಗಳು ಲಗ್ಗೆ ಇಟ್ಟ ಮೇಲೆ ಕಣ್ಮರೆಯಾಗಿವೆ. ಹಳ್ಳಿಗಾಡಿನ ಜನತೆ ಕೂಡ ಎಲೆ ಅಡಿಕೆ ಬಿಟ್ಟು ಪಾನ್‌ ಬೀಡಾ, ಪಾನ್‌ ಪರಾಗ್‌ ಮತ್ತಿತರ ವಸ್ತುಗಳಿಗೆ ಮಾರು ಹೋಗಿದ್ದಾರೆ. ಹೀಗಾಗಿ ಎಲೆ, ಅಡಿಕೆ, ಹೊಗೆಸೊಪ್ಪು ಮತ್ತು ಸುಣ್ಣದ ಡಬ್ಬಿಗಳನ್ನು ಇಟ್ಟುಕೊಂಡು ತಿರುಗಾಡಬೇಕಿಲ್ಲ. ಇವುಗಳನ್ನೆಲ್ಲಾಇಡಲು ಬುಡತಿತ್ತಿಗಳೂ ಬೇಕಿಲ್ಲ. ಹೀಗಾಗಿಯೇ ಈ ಚೀಲಗಳನ್ನು ಯಾರೂ ಬಳಸುತ್ತಿಲ್ಲ.

ನಮ್ಮ ಕಾಲದಲ್ಲಿಪ್ರತಿಯೊಂದು ಮನೆಯಲ್ಲಿಯೂ ಮಹಿಳೆಯರ ಬಳಿ ಎಲೆ ಅಡಿಕೆ ಬುಡತಿತ್ತಿಗಳು ಇದ್ದವು. ಆಗಿನ ಕಾಲದಲ್ಲಿಬುಡತಿತ್ತಿಗಳಿಗೆ ಹೆಚ್ಚಿನ ಬೇಡಿಕೆ ಇತ್ತು. ಆದರೆ ಕಾಲ ಬದಲಾದಂತೆ ಜನತೆ ಕೂಡ ಬದಲಾಗಿ ಹೈಟೆಕ್‌ ಆಗಿಬಿಟ್ಟಿದ್ದಾರೆ. ಮಹಿಳೆಯರು ಪಾಕೇಟ್‌ ಪರ್ಸ್‌ಗಳಿಗೆ ಮಾರು ಹೋಗಿ, ಬುಡತಿತ್ತಿಗಳನ್ನು ಮರೆತಿದ್ದಾರೆ. ಅಲ್ಲೊಬ್ಬರು, ಇಲ್ಲೊಬ್ಬರು ಹಿರಿಯ ಮಹಿಳೆಯರು ಬುಡತಿತ್ತಿಗಳನ್ನು ಹುಡುಕಿಕೊಂಡು ಬರುತ್ತಾರೆ. ಅವರಿಗಾಗಿ ಪ್ರತಿ ಭಾನುವಾರದ ಸಂತೆಯಲ್ಲಿಬುಡತಿತ್ತಿಗಳನ್ನು ಮಾರಾಟ ಮಾಡುತ್ತಿದ್ದೇವೆ.
-ರತ್ನಮ್ಮ. ಬುಡತಿತ್ತಿ ಮಾರುವ ಮಹಿಳೆ

ಚೀಲದೊಳಗೆ ಏನೇನಿದೆ?
ಬುಡತಿತ್ತಿಗಳು ಸಂತೆಯಲ್ಲಿ25 ರೂ.ನಿಂದ 30 ರೂ. ತನಕ ಮಾರಾಟವಾಗುತ್ತವೆ. ಈ ಬುಡತಿತ್ತಿಗಳಲ್ಲಿಎಲೆ ಅಡಿಕೆಗೊಂದು ಜಾಗ, ಕಡ್ಡಿಪುಡಿಗೊಂದು ಜಾಗ, ಸುಣ್ಣದ ಡಬ್ಬಿಗೊಂದು ಜಾಗ, ಹಲ್ಲುಇಲ್ಲದವರು ಕುಟ್ಟಾಣಿ ಇಟ್ಟುಕೊಳ್ಳಲು ಮತ್ತೊಂದು ಜಾಗ. ಸೂಜಿ ದಾರ ಸೇರಿದಂತೆ ಹಣ ಇಡುವುದಕ್ಕೂ ಚೀಲದಲ್ಲಿಜಾಗವಿರುತ್ತದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ