ಆ್ಯಪ್ನಗರ

‘ಯೋಗಿ ರನ್‌’ನಲ್ಲಿ ಓಡಿದ 700 ಮಂದಿ ವಿದೇಶಿಯರು

ನಮ್ಮ ನಿಮ್ಮ ಸೈಕಲ್‌ ಫೌಂಡೇಶನ್‌, ಇಂದಿರಾ ಗಾಂಧಿ ರಾಷ್ಟ್ರೀಯ ಕಲಾ ಕೇಂದ್ರ, ಭಾರತೀಯ ಪುರಾತತ್ವ ಇಲಾಖೆ ಮತ್ತು ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಸಹಯೋಗದಲ್ಲಿ ಭಾನುವಾರ ತಾಲೂಕಿನ ವಿಶ್ವಪ್ರಸಿದ್ಧ ನಂದಿಯ ಭೋಗ ನಂದೀಶ್ವರ ಹಾಗೂ ನಂದಿ ಬೆಟ್ಟದಲ್ಲಿ ಯೋಗಿ ರನ್‌(ಓಟ), ಯೋಗ ಮತ್ತು ಸಂಗೀತಗಳ ಸಂಗಮದ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿತ್ತು.

Vijaya Karnataka 10 Jun 2019, 3:59 pm
ಮೂರು ವಿಭಾಗಗಳಲ್ಲಿ ಓಟ ಆಯೋಜನೆ | ಗಮನ ಸೆಳೆದ ಯೋಗಾಸನ
Vijaya Karnataka Web 00 foreigners who ran at yogi run
‘ಯೋಗಿ ರನ್‌’ನಲ್ಲಿ ಓಡಿದ 700 ಮಂದಿ ವಿದೇಶಿಯರು


ವಿಕ ಸುದ್ದಿಲೋಕ ಚಿಕ್ಕಬಳ್ಳಾಪುರ.


ನಮ್ಮ ನಿಮ್ಮ ಸೈಕಲ್‌ ಫೌಂಡೇಶನ್‌, ಇಂದಿರಾ ಗಾಂಧಿ ರಾಷ್ಟ್ರೀಯ ಕಲಾ ಕೇಂದ್ರ, ಭಾರತೀಯ ಪುರಾತತ್ವ ಇಲಾಖೆ ಮತ್ತು ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಸಹಯೋಗದಲ್ಲಿ ಭಾನುವಾರ ತಾಲೂಕಿನ ವಿಶ್ವಪ್ರಸಿದ್ಧ ನಂದಿಯ ಭೋಗ ನಂದೀಶ್ವರ ಹಾಗೂ ನಂದಿ ಬೆಟ್ಟದಲ್ಲಿ ಯೋಗಿ ರನ್‌(ಓಟ), ಯೋಗ ಮತ್ತು ಸಂಗೀತಗಳ ಸಂಗಮದ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಮೂರು ವಿಭಾಗಗಳಲ್ಲಿ ಹಮ್ಮಿಕೊಂಡಿದ್ದ ಯೋಗಿ ರನ್‌ ಕಾರ್ಯಕ್ರಮದಲ್ಲಿ ಬೆಂಗಳೂರು ಸೇರಿದಂತೆ ದೇಶ ವಿದೇಶಗಳಿಂದ ಸುಮಾರು 700ಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು.

ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ನಮ್ಮ ನಿಮ್ಮ ಸೈಕಲ್‌ ಫೌಂಡೇಶನ್‌ ಮುಖ್ಯ ನಿರ್ದೇಶಕ ಎಚ್‌.ಆರ್‌. ಮುರಳಿ, ಭೋಗನಂದಿಶ್ವರನ ಸನ್ನಿಧಿಯಲ್ಲಿ ಪ್ರಸ್ತುತ ಯೋಗದೊಂದಿಗೆ ಕ್ರೀಡೆಯ ಸಂಯೋಗವಿದೆ. ಸಂಸ್ಕೃತಿಯೊಡನೆ ಆಧುನಿಕತೆಯ ಸಂಗಮವಿದೆ. ನಾದ ಮತ್ತು ತಾಳದೊಂದಿಗೆ ಓಟದ ಸಮ್ಮಿಲನವಿದೆ. ಇದು ನಮ್ಮ ನಾಡಿನ ಭವ್ಯತೆ ಮತ್ತು ದಿವ್ಯತೆಯನ್ನು ಜನರ ಹೃದಯ ತಲುಪಿಸಲು ಕೈಗೊಂಡ ವಿಶೇಷ ಕಾರ್ಯಕ್ರಮವಾಗಿದೆ. ಭಾರತೀಯ ಸಂಸ್ಕೃತಿಯ ನಾದ, ಶಿಲ್ಪಕಲೆ, ಓಟದ ಕ್ರೀಡೆ, ದೇಸಿ ತಿನಿಸು ಮತ್ತು ಪರಿಸರದ ಸೌಂದರ್ಯವನ್ನು ಸವಿಯಲು ನಂದಿ ಬೆಟ್ಟ ಸೂಕ್ತವಾದ ಸ್ಥಳವಾಗಿದೆ. ಇದನ್ನು ಯೋಗಿ ರನ್‌ ಮೂಲಕ ದೇಶ ವಿದೇಶಗಳಿಗೆ ತಿಳಿಸುವ ಸಣ್ಣ ಪ್ರಯತ್ನವಾಗಿದೆ ಎಂದರು.

ಭೋಗ ನಂದೀಶ್ವರ ದೇವಸ್ಥಾನದ ಆರಂಭಗೊಂಡ ಯೋಗಿ ರನ್‌ ಓಟವು ಸುಲ್ತಾನಪೇಟೆಯ ಮುಖಾಂತರ

ಮೆಟ್ಟಿಲು ದಾರಿಯಿಂದ ನಂದಿಬೆಟ್ಟವನ್ನು ಹತ್ತಿ, ಮತ್ತೆ ಅದೇ ಮಾರ್ಗವಾಗಿ ಬೆಟ್ಟವನ್ನು ಇಳಿದು ದೇವಾಲಯದ ಆವರಣದಲ್ಲಿ ಕೊನೆಕೊಂಡಿತು. ಬೆಳಗ್ಗೆ 6.30ಕ್ಕೆ 21ಕೆ, 6.45ಕ್ಕೆ 10ಕೆ ಹಾಗೂ 7.15ಕ್ಕೆ 5ಕೆ ಹೀಗೆ ಒಟ್ಟು ಮೂರು ವಿಭಾಗಗಳಲ್ಲಿ ಓಟ ಆಯೋಜಿಸಲಾಗಿತ್ತು. ಓಟದಲ್ಲಿ ವಿಜೇತರಿಗೆ ನಗದು ಬಹುಮಾನ ಜತೆಗೆ ಪದಕ ಮತ್ತು ಪ್ರಮಾಣಪತ್ರ ನೀಡಲಾಯಿತು.

ಓಟಕ್ಕೂ ಮುನ್ನ ಭೋಗನಂದೀಶ್ವರ ಸ್ವಾಮಿ ದೇವಾಲಯದ ಆವರಣದಲ್ಲಿ ಯೋಗ ಪ್ರದರ್ಶನ ನಡೆಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ