ಆ್ಯಪ್ನಗರ

ಮೊದಲ ದಿನವೇ 5 ಕ್ಷಯ ರೋಗಿಗಳು ಪತ್ತೆ

ಜಿಲ್ಲೆಯಲ್ಲಿ ಬುಧವಾರದಿಂದ ಪ್ರಾರಂಭವಾದ ಸಕ್ರಿಯ ಕ್ಷಯ ಪತ್ತೆ ಆಂದೋಲನಕ್ಕೆ ನಗರದ ವಾಪಸಂದ್ರ ಸರಕಾರಿ ಶಾಲೆಯಲ್ಲಿ ಡಾ.ಯಲ್ಲಾ ರಮೇಶ್‌ಬಾಬು ಚಾಲನೆ ನೀಡಿದರು.

Vijaya Karnataka 3 Jan 2019, 5:00 am
3356 ಮನೆ, 22670 ಜನರ ಭೇಟಿ | ವಾಪಸಂದ್ರ ಸರಕಾರಿ ಶಾಲೆಯಲ್ಲಿ ಆಂದೋಲನಕ್ಕೆ ಚಾಲನೆ
Vijaya Karnataka Web CBP-2CBPM5

ಚಿಕ್ಕಬಳ್ಳಾಪುರ:
ಜಿಲ್ಲೆಯಲ್ಲಿ ಬುಧವಾರದಿಂದ ಪ್ರಾರಂಭವಾದ ಸಕ್ರಿಯ ಕ್ಷಯ ಪತ್ತೆ ಆಂದೋಲನಕ್ಕೆ ನಗರದ ವಾಪಸಂದ್ರ ಸರಕಾರಿ ಶಾಲೆಯಲ್ಲಿ ಡಾ.ಯಲ್ಲಾ ರಮೇಶ್‌ಬಾಬು ಚಾಲನೆ ನೀಡಿದರು.

ಏಡ್ಸ್‌ಗಿಂತ ಮಾರಕವಾಗಿರುವ ಕ್ಷಯರೋಗ ಹೊಂದಿರುವ ವ್ಯಕ್ತಿ ಚಿಕಿತ್ಸೆ ಪಡೆದು ಗುಣಮುಖನಾಗಲಿಲ್ಲ ಎಂದರೆ ತನ್ನ ಕುಟುಂಬವಷ್ಟೇ ಅಲ್ಲದೆ ತಾನಿರುವ ಪರಿಸರಕ್ಕೆಲ್ಲಾ ಕ್ಷಯವನ್ನು ಹರಡಿಸುವ ಸಂಭವವಿರುತ್ತದೆ. ಏಡ್ಸ್‌ ಬಂದ ವ್ಯಕ್ತಿಯ ದೇಹ ಸಂಪರ್ಕಕ್ಕೆ ಬಂದವರಿಗೆ ಮಾತ್ರವೇ ರೋಗ ಹರಡುತ್ತದೆ. ಆದರೆ ಕ್ಷಯ ಗಾಳಿಯ ಮೂಲಕ ಕಫದ ಮೂಲಕ ಹರಡುವ ಕಾರಣ ಎಚ್ಚರಿಕೆ ಮತ್ತು ಸಕಾಲದಲ್ಲಿ ಚಿಕಿತ್ಸೆ ಅಗತ್ಯವಿದೆ ಎಂದರು.

ಜಿಲ್ಲೆಯಲ್ಲಿ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಈ ಬಗ್ಗೆ ನಿಗಾ ಕೇಂದ್ರಗಳಿದ್ದು ಉಚಿತವಾಗಿ ಪರೀಕ್ಷೆ ಮಾಡಿಸಿಕೊಂಡು ರೋಗದಿಂದ ಸಂಪೂರ್ಣ ಗುಣಮುಖರಾಗಬಹುದು. ಸಾರ್ವಜನಿಕರು ವಿದ್ಯಾರ್ಥಿಗಳು ಈಬಗ್ಗೆ ಮಾಹಿತಿ ಇದ್ದರೆ ವೈದ್ಯರಿಗೆ ತಿಳಿಸುವ ಮೂಲಕ ರೋಗಿಗಳ ಜೀವವನ್ನು ಉಳಿಸಿದಂತೆ ಆಗುತ್ತದೆ ಎಮದು ಸಲಹೆ ನೀಡಿದರು.

ಮೊದಲ ದಿನ ಜಿಲ್ಲೆಯಲ್ಲಿ ಮನೆ ಮನೆ ಭೇಟಿಯಲ್ಲಿ 3356 ಮನೆಗಳಿಗೆ ತೆರಳಿ 22670 ಜನರಿಂದ ಮಾಹಿತಿ ಪಡೆಯಲಾಗಿದೆ. ಇವರಲ್ಲಿ 445 ಶಂಕಿತರಿಗೆ ಕಫ ಸಂಗ್ರಹ ಮಾಡಿದ್ದಾರೆ. ಈ ಶಂಕಿತರ ಕಫ ಪರೀಕ್ಷೆಯಲ್ಲಿ 5 ಮಂದಿಯಲ್ಲಿ ಕ್ಷಯ ರೋಗ ಇರುವುದು ದೃಢಪಟ್ಟಿದ್ದು, 25 ಜನರನ್ನು ಎಕ್ಸರೇಗೆ ಶಿಫಾರಸು ಮಾಡಲಾಗಿದೆ ಎಂದರು.

ಮನೆ ಬಾಗಿಲಿಗೆ ವೈದ್ಯರು
ಚಿಕ್ಕಬಳ್ಳಾಪುರ-906, ಶಿಡ್ಲಘಟ್ಟ-790, ಚಿಂತಾಮಣಿ-801, ಬಾಗೇಪಲ್ಲಿ-1066, ಗುಡಿಬಂಡೆ-417, ಗೌರಿಬಿದನೂರು-1066, ಮನೆಗಳಿಗೆ ಭೇಟಿ ನೀಡಿ ಪತ್ತೆ ಕಾರ್ಯವನ್ನು ಆರೋಗ್ಯ ಸಹಾಯಕಿಯರು ಮತ್ತು ಅಶಾ ಕಾರ್ಯಕರ್ತೆಯರು ನಡೆಸಿದ್ದಾರೆ ಎಂದು ಜಿಲ್ಲಾ ಕ್ಷಯ ರೋಗ ನಿಯಂತ್ರಣಾಧಿಕಾರಿ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ