ಆ್ಯಪ್ನಗರ

ಶ್ರೀಗಂಧದ ಚಕ್ಕೆ ತುಂಬಿದ್ದ 7 ಪ್ಲಾಸ್ಟಿಕ್‌ ಚೀಲ ವಶ

ಕಾರಿನಲ್ಲಿಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಶ್ರೀಗಂಧದ ಚಕ್ಕೆಗಳನ್ನು ತುಂಬಿದ 7 ಪ್ಲಾಸ್ಟಿಕ್‌ ಚೀಲಗಳನ್ನು ಚಿಕ್ಕಬಳ್ಳಾಪುರ ತಾಲೂಕು ದೊಡ್ಡಮರಳಿ ಗ್ರಾಮದ ಬಳಿಯ ಚೆಕ್‌ಪೋಸ್ಟ್‌ನ ಚುನಾವಣಾಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

Vijaya Karnataka 25 Sep 2019, 3:16 pm
ಕಾರಿನಲ್ಲಿಅಕ್ರಮವಾಗಿ ಸಾಗಾಟಸುತ್ತಿದ್ದ ಆರೋಪಿಗಳು ಪರಾರಿ | ನಂದಿ ಗಿರಿಧಾಮ ಠಾಣೆಯಲ್ಲಿಪ್ರಕರಣ
Vijaya Karnataka Web 7 bags of sandalwood seized by elction officers
ಶ್ರೀಗಂಧದ ಚಕ್ಕೆ ತುಂಬಿದ್ದ 7 ಪ್ಲಾಸ್ಟಿಕ್‌ ಚೀಲ ವಶ

ಚಿಕ್ಕಬಳ್ಳಾಪುರ:
ಕಾರಿನಲ್ಲಿಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಶ್ರೀಗಂಧದ ಚಕ್ಕೆಗಳನ್ನು ತುಂಬಿದ 7 ಪ್ಲಾಸ್ಟಿಕ್‌ ಚೀಲಗಳನ್ನು ಚಿಕ್ಕಬಳ್ಳಾಪುರ ತಾಲೂಕು ದೊಡ್ಡಮರಳಿ ಗ್ರಾಮದ ಬಳಿಯ ಚೆಕ್‌ಪೋಸ್ಟ್‌ನ ಚುನಾವಣಾಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ಈ ಸಂಬಂಧ ಇಬ್ಬರು ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದು, ನಂದಿ ಗಿರಿಧಾಮ ಪೊಲೀಸ್‌ ಠಾಣೆಯಲ್ಲಿದೂರು ದಾಖಲಾಗಿದೆ.

ನಡೆದದ್ದೇನು?: ಚುನಾವಣಾ ಕರ್ತವ್ಯದ ನಿಮಿತ್ತ ದೊಡ್ಡಮರಳಿ ಚೆಕ್‌ಪೋಸ್ಟ್‌ನಲ್ಲಿಎಸ್‌ಎಸ್‌ಟಿ ಅಧಿಕಾರಿಗಳು ವಾಹನಗಳ ತಪಾಸಣೆ ಮಾಡುತ್ತಿರುವ ವೇಳೆ ವಿಜಯಪುರ ಕಡೆಯಿಂದ ಇಟಿಯೋಸ್‌ ಕಾರಿನಲ್ಲಿಇಬ್ಬರು ವ್ಯಕ್ತಿಗಳು ಬಂದಿದ್ದು, ತಪಾಸಣೆ ಮಾಡಲು ಅಧಿಕಾರಿಗಳು ಕಾರನ್ನು ನಿಲ್ಲಿಸಿದ್ದಾರೆ. ಈ ವೇಳೆ ನಿಲ್ಲಿಸುವ ರೀತಿಯಲ್ಲಿನಿಧಾನವಾಗಿ ಬಂದ ಚಾಲಕ, ಹತ್ತಿರ ಬಂದು ತಪಾಸಣೆ ಮಾಡುವಷ್ಟರಲ್ಲಿಮುಂದೆ ನಿಂತಿದ್ದ ಮತ್ತೊಬ್ಬ ಕರ್ತವ್ಯ ನಿರತ ಹನುಮಂತಪ್ಪ ಎನ್ನುವವರಿಗೆ ಡಿಕ್ಕಿ ಹೊಡೆದುಕೊಂಡು ಕಾರನ್ನು ನಿಲ್ಲಿಸದೇ ಜೋರಾಗಿ ನಂದಿಕ್ರಾಸ್‌ ಕಡೆಗೆ ನುಗ್ಗಿದ್ದಾರೆ. ಈ ವೇಳೆ ಹನುಮಂತಪ್ಪಗೆ ಕೈ ಕಾಲುಗಳಿಗೆ ಗಾಯಗಳಾಗಿದ್ದು, ಅಧಿಕಾರಿಗಳು ಬೈಕ್‌ನಲ್ಲಿಕಾರನ್ನು ಹಿಂಬಾಲಿಸಿದ್ದಾರೆ. ಈ ವೇಳೆ ನಂದಿಕಡೆಯಿಂದ ಬೆಂಗಳೂರು ಕಡೆಗೆ ಹೋಗಲು ಸವೀರ್‍ಸ್‌ ರಸ್ತೆಯಲ್ಲಿತಿರುವು ಪಡೆಯಲು ಯತ್ನಿಸಿದ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿದ ಕಾರು, ರಸ್ತೆಯು ಎಡಬದಿಯ ಗಾರ್ಡ್‌ ಕ್ರ್ಯಾಷ್‌ ಬ್ಯಾರಿಯರ್‌ ಕಬ್ಬಿಣದ ಮೆಷ್‌ಗೆ ಡಿಕ್ಕಿ ಹೊಡೆದಿದೆ. ಅಧಿಕಾರಿಗಳು ಕಾರು ಹತ್ತಿರ ಹತ್ತಿರ ಹೋಗುವಷ್ಟರಲ್ಲಿಕಾರಿನಲ್ಲಿದ್ದ ಇಬ್ಬರೂ ಆರೋಪಿಗಳು ಇಳಿದು ಪರಾರಿಯಾಗಿದ್ದಾರೆ.

ನಂತರ ಅಧಿಕಾರಿಗಳು ಜಖಂಗೊಂಡ ಕಾರನ್ನು ತಪಾಸಣೆ ಮಾಡಿದಾಗ ಹಿಂಬದಿಯ ಸೀಟಿನಲ್ಲಿಶ್ರೀಗಂಧದ ಚಕ್ಕೆಗಳನ್ನು ತುಂಬಿದ ಚೀಲಗಳು ಕಂಡುಬಂದಿವೆ ಎಂದು ಚೆಕ್‌ಪೋಸ್ಟ್‌ನ ಅಧಿಕಾರಿಗಳು ನೀಡಿರುವ ದೂರಿನಲ್ಲಿವಿವರಿಸಿದ್ದಾರೆ.

ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ನಂದಿ ಗಿರಿಧಾಮ ಠಾಣೆ ಪೊಲೀರು ಆರೋಪಿಗಳಿಗಾಗಿ ಹುಟುಕಾಟ ನಡೆಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ