ಆ್ಯಪ್ನಗರ

ಲೋಕ್‌ ಅದಾಲತ್‌ನಲ್ಲಿ 822 ಪ್ರಕರಣಗಳು ಇತ್ಯರ್ಥ

ನಗರದ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ಶನಿವಾರ ಆಯೋಜಿಸಿದ್ದ ರಾಷ್ಟ್ರೀಯ ಲೋಕ್‌ ಅದಾಲತ್‌ನಲ್ಲಿ ಒಟ್ಟು 822 ಪ್ರಕರಣಗಳನ್ನು ರಾಜಿ ಮೂಲಕ ವಿಲೇವಾರಿಯಾಗಿ ಒಟ್ಟು 5,46,32,885 ರೂ.ಗಳನ್ನು ಇತ್ಯರ್ಥಪಡಿಸಲಾಗಿದೆ.

Vijaya Karnataka 14 Jul 2019, 5:00 am
ಚಿಕ್ಕಬಳ್ಳಾಪುರ: ನಗರದ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ಶನಿವಾರ ಆಯೋಜಿಸಿದ್ದ ರಾಷ್ಟ್ರೀಯ ಲೋಕ್‌ ಅದಾಲತ್‌ನಲ್ಲಿ ಒಟ್ಟು 822 ಪ್ರಕರಣಗಳನ್ನು ರಾಜಿ ಮೂಲಕ ವಿಲೇವಾರಿಯಾಗಿ ಒಟ್ಟು 5,46,32,885 ರೂ.ಗಳನ್ನು ಇತ್ಯರ್ಥಪಡಿಸಲಾಗಿದೆ.
Vijaya Karnataka Web 822 cases settled in lok adalat
ಲೋಕ್‌ ಅದಾಲತ್‌ನಲ್ಲಿ 822 ಪ್ರಕರಣಗಳು ಇತ್ಯರ್ಥ


ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎಸ್‌.ಎಚ್‌.ಕೋರಡ್ಡಿ ಅಧ್ಯಕ್ಷ ತೆಯಲ್ಲಿ ನಡೆದ ಲೋಕ್‌ ಅದಾಲತ್‌ನಲ್ಲಿ ನ್ಯಾಯಾಲಯದಲ್ಲಿದ್ದ ಬ್ಯಾಂಕ್‌ ಸಂಬಂಧಿತ, ವಿದ್ಯುಚ್ಛಕ್ತಿ, ವೈವಾಹಿಕ ವಿವಾದ, ಎಂಎಸಿಟಿ, ಸಿವಿಲ್‌ ಸೇರಿದಂತೆ ನಾನಾ ರೀತಿಯ ಬಾಕಿ ಇದ್ದ ಹಾಲಿ ಪ್ರಕರಣಗಳು ಮತ್ತು ವ್ಯಾಜ್ಯ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಬಗೆಹರಿಸಲಾಯಿತು.

ಅದಾಲತ್‌ನಲ್ಲಿ ಬ್ಯಾಂಕ್‌ ಸಂಬಂಧಿತ, ವಿದ್ಯುಚ್ಛಕ್ತಿ, ವೈವಾಹಿಕ ವಿವಾದ, ಎಂಎಸಿಟಿ, ಸಿವಿಲ್‌ ಸೇರಿದಂತೆ ಇತರೆ ಪ್ರಕರಣಗಳು ಸೇರಿ 3,332 ಪ್ರಕರಣಗಳನ್ನು ಕೈಗೆತ್ತಿಕೊಳ್ಳಲಾಗಿತ್ತು. ಈ ಪೈಕಿ ಈಗಾಗಲೇ ನ್ಯಾಯಾಲಯದಲ್ಲಿ ಬಾಕಿಯಿರುವ 2,431 ಪ್ರಕರಣಗಳಲ್ಲಿ 714 ಪ್ರಕರಣಗಳನ್ನು ವಿಲೇವಾರಿ ಮಾಡಿ 4,88,70,256 ರೂ.ಗಳನ್ನು ಇತ್ಯರ್ಥಪಡಿಸಲಾಗಿದ್ದು, ಇನ್ನು 950 ವ್ಯಾಜ್ಯ ಪೂರ್ವ ಪ್ರಕರಣಗಳಲ್ಲಿ 108 ಪ್ರಕರಣ ವಿಲೇವಾರಿಗೊಳಿಸಿ 57,62,629 ರೂ.ಗಳನ್ನು ಇತ್ಯರ್ಥಪಡಿಸಲಾಗಿದೆ.

ರಾಷ್ಟ್ರೀಯ ಲೋಕ್‌ ಅದಾಲತ್‌ನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎಚ್‌.ಎಚ್‌.ಕೋರಡ್ಡಿ, ಶೀಘ್ರವಾಗಿ ನ್ಯಾಯ ಒದಗಿಸುವ ಉದ್ದೇಶದಿಂದ ಅದಾಲತ್‌ ಹಮ್ಮಿಕೊಳ್ಳುತಿದ್ದು, ಕಡಿಮೆ ಖರ್ಚಿನಲ್ಲಿ ಶೀಘ್ರವಾಗಿ ಇತ್ಯರ್ಥಕ್ಕೆ ಇದೊಂದು ಸುವರ್ಣವಕಾಶವಾಗಿದೆ. ಸಾರ್ವಜನಿಕರು ಇದರ ಸದುಪಯೋಗಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.

ಲೋಕ ಅದಾಲತ್‌ ಕಾರ್ಯಕ್ರಮದಲ್ಲಿ ಉಭಯ ಕಕ್ಷಿದಾರರಿಗೆ ಅನುಕೂಲವಾಗುವಂತೆ ನ್ಯಾಯ ಸಮ್ಮತವಾಗಿ ರಾಜಿ ಸಂಧಾನದ ಮೂಲಕ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಬಹುದು. ಜತೆಗೆ ಕಕ್ಷಿದಾರರಿಗೆ ಸಮಯ, ಹಣ ಉಳಿತಾಯ ಆಗಲಿದೆ. ಇದರಿಂದ ನ್ಯಾಯಾಲಯದ ಮೇಲಿನ ಹೊರೆ ಕಡಿಮೆಯಾಗಲಿದೆ. ಕಕ್ಷಿದಾರರು ಶೀಘ್ರವಾಗಿ ಸಮಸ್ಯೆ ಪರಿಹಾರ ಕಂಡುಕೊಳ್ಳುವ ಮೂಲಕ ನೆಮ್ಮದಿ ಜೀವನ ಸಾಗಿಸಬಹುದು ಎಂದು ಹೇಳಿದರು.

ಅದಾಲತ್‌ನಲ್ಲಿ ನ್ಯಾಯಾಧೀಶರಾದ ನಟರಾಜ್‌, ಅರಟಗಿ, ಎಚ್‌.ದೇವರಾಜ್‌ ಇತರರು ಹಾಜದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ