Please enable javascript.Bagepalli,ಬಾಗೇಪಲ್ಲಿಗೆ ಭಾಗ್ಯನಗರವಾಗಿ ಮರುನಾಮಕರಣ: ವಿಧಾನಸಭೆಯಲ್ಲಿ ಪ್ರಸ್ತಾಪಿಸುವುದಾಗಿ ಶಾಸಕ ಎಸ್‌.ಎನ್‌.ಸುಬ್ಬಾರೆಡ್ಡಿ ಘೋಷಣೆ - bagepalli to rename as bhagyanagara mla sn subbhareddy announced to be discussed in karnataka assembly - Vijay Karnataka

ಬಾಗೇಪಲ್ಲಿಗೆ ಭಾಗ್ಯನಗರವಾಗಿ ಮರುನಾಮಕರಣ: ವಿಧಾನಸಭೆಯಲ್ಲಿ ಪ್ರಸ್ತಾಪಿಸುವುದಾಗಿ ಶಾಸಕ ಎಸ್‌.ಎನ್‌.ಸುಬ್ಬಾರೆಡ್ಡಿ ಘೋಷಣೆ

Edited byಹೇಮಂತ್ ಕುಮಾರ್ ಎಸ್ | Vijaya Karnataka 1 Nov 2022, 10:55 pm
Subscribe

Bagepalli to rename as Bhagyanagara: ಈಗಾಗಲೇ ಭಾಗ್ಯನಗರವನ್ನಾಗಿ ಮರು ನಾಮಕರಣಗೊಳಿಸುವಂತೆ ಕನ್ನಡ ಸಂಘಟನೆಗಳ ಒತ್ತಾಯ ಮೇರೆಗೆ ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸಿದ್ದು ರಾಜ್ಯ ಸರಕಾರ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ಕ್ರಮಕೈಗೊಳ್ಳುವಂತೆ ಸೂಚಿಸಿದ್ದಾರೆ. ಆದರೆ ಈ ವಿಷಯವನ್ನು ಸದನದಲ್ಲಿ ಪ್ರಸ್ತಾಪಿಸಿ ಆದಷ್ಟು ಬೇಗ ಭಾಗ್ಯನಗರವನ್ನಾಗಿ ಮಾಡಲು ಪ್ರಯತ್ನ ಮಾಡುತ್ತೇನೆ. ಆಂಧ್ರ ಗಡಿಯಲ್ಲಿರುವ ಬಾಗೇಪಲ್ಲಿ ತಾಲೂಕಿನಲ್ಲಿ ತೆಲುಗು ಭಾಷೆ ಹೆಚ್ಚಾಗಿ ಆಡು ಭಾಷೆಯಾಗಿ ಬಳಕೆ ಮಾಡಲಾಗುತ್ತಿದೆ.

ಹೈಲೈಟ್ಸ್‌:

  • 67ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಘೋಷಣೆ
  • 'ನಾವು ಬೇರೆ ಭಾಷೆಗಳ ವಿರೋಧಿಗಳ ಅಲ್ಲ ಆದರೆ ನಮ್ಮ ನೆಲ, ಜಲ ಭಾಷೆಗೆ ಧಕ್ಕೆ ಬಂದಾಗ ಹೋರಾಟ ಅನಿವಾರ್ಯ'
  • ಹಿಂದಿ ಹಾಡಿಗೆ ತಕರಾರು ತೆಗೆದ ಕನ್ನಡ ಪರ ಸಂಘಟನೆಗಳು
kannada flag
ಸಾಂದರ್ಭಿಕ ಚಿತ್ರ
ಬಾಗೇಪಲ್ಲಿ: ಬಾಗೇಪಲ್ಲಿ (Bagepalli) ಎಂಬ ತೆಲುಗು ಹೆಸರನ್ನು ಬದಲಾಯಿಸಿ ಭಾಗ್ಯನಗರವನ್ನಾಗಿ (Bhagyanagara) ಮರುನಾಮಕರಣ ಮಾಡಲು ವಿಧಾನಸಭೆಯಲ್ಲಿ ಪ್ರಸ್ತಾಪ ಮಾಡುವುದಾಗಿ ಶಾಸಕ ಎಸ್‌.ಎನ್‌.ಸುಬ್ಬಾರೆಡ್ಡಿ ಘೋಷಣೆ ಮಾಡಿದರು.
ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಆಶ್ರಯದಲ್ಲಿ ಸರಕಾರಿ ಬಾಲಕಿಯರ ಪ್ರೌಢಶಾಲೆ ಆವರಣದಲ್ಲಿ ಮಂಗಳವಾರ ಏರ್ಪಡಿಸಿದ್ದ 67ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಗೂಳೂರಿನಲ್ಲಿ ನೂತನ ರೈತರ ಮಾಲ್‌ ಕಾರ್ಯಾರಂಭ: 7 ಹಳ್ಳಿಗಳಿಗೆ ಸಿಗಲಿವೆ ಉತ್ಪನ್ನಗಳು, ಶೇ 10ರಷ್ಟು ರಿಯಾಯಿತಿ
ಈಗಾಗಲೇ ಭಾಗ್ಯನಗರವನ್ನಾಗಿ ಮರು ನಾಮಕರಣಗೊಳಿಸುವಂತೆ ಕನ್ನಡ ಸಂಘಟನೆಗಳ ಒತ್ತಾಯ ಮೇರೆಗೆ ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸಿದ್ದು ರಾಜ್ಯ ಸರಕಾರ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ಕ್ರಮಕೈಗೊಳ್ಳುವಂತೆ ಸೂಚಿಸಿದ್ದಾರೆ. ಆದರೆ ಈ ವಿಷಯವನ್ನು ಸದನದಲ್ಲಿ ಪ್ರಸ್ತಾಪಿಸಿ ಆದಷ್ಟು ಬೇಗ ಭಾಗ್ಯನಗರವನ್ನಾಗಿ ಮಾಡಲು ಪ್ರಯತ್ನ ಮಾಡುತ್ತೇನೆ. ಆಂಧ್ರ ಗಡಿಯಲ್ಲಿರುವ ಬಾಗೇಪಲ್ಲಿ ತಾಲೂಕಿನಲ್ಲಿ ತೆಲುಗು ಭಾಷೆ ಹೆಚ್ಚಾಗಿ ಆಡು ಭಾಷೆಯಾಗಿ ಬಳಕೆ ಮಾಡಲಾಗುತ್ತಿದೆ. ಆದರೆ ನಾಡು ನುಡಿಗೆ ತೊಂದರೆಯಾದಾಗ ಹೋರಾಟ ಮಾಡುವ ಕಿಚ್ಚು ಜನರಲ್ಲಿ ಇದೆ ಎಂದರು.

ಬಾಗೇಪಲ್ಲಿ, ಚೇಳೂರು ಮತ್ತು ಗುಡಿಬಂಡೆ ತಾಲೂಕುಗಳು ಆಂಧ್ರ ಗಡಿಯಲ್ಲಿದ್ದರೂ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ವೈಭವದಿಂದ ಆಚರಣೆ ಮಾಡುತ್ತಿರುವುದು ಶ್ಲಾಘನೀಯ. ನಾವು ಬೇರೆ ಭಾಷೆಗಳ ವಿರೋಧಿಗಳ ಅಲ್ಲ ಆದರೆ ನಮ್ಮ ನೆಲ, ಜಲ ಭಾಷೆಗೆ ಧಕ್ಕೆ ಬಂದಾಗ ಹೋರಾಟ ಅನಿವಾರ್ಯ ಎಂದರು.
ಚಿಕ್ಕಬಳ್ಳಾಪುರದಲ್ಲಿ ಜೆಡಿಎಸ್‌ಗೆ ಪಂಚರತ್ನ ಯಾತ್ರೆ ಬಲ: ಐದೂ ವಿಧಾನಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಹೆಸರು ಫೈನಲ್‌
ತಹಸೀಲ್ದಾರ್‌ ವೈ.ರವಿ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಈ ಹಿಂದೆ ಮೈಸೂರು ರಾಜ್ಯ ಎಂಬ ಹೆಸರಿಗೆ ಉತ್ತರ ಕರ್ನಾಟಕ ಕನ್ನಡ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದಾಗ ಅಂದಿನ ಮುಖ್ಯಮಂತ್ರಿ ದೇವರಾಜ ಅರಸು ಅವರು ಕರ್ನಾಟಕ ಎಂದು ಮರುನಾಮಕರಣಗೊಳಿಸಿದರು ಎಂದರು.

ಇದೇ ವೇಳೆ ತಾಲೂಕು ಮಟ್ಟದ ಸಾಧಕರಿಗೆ ಸನ್ಮಾನಿಸಲಾಯಿತು.

ಹಿಂದಿ ಹಾಡಿಗೆ ತಕರಾರು ತೆಗೆದ ಕನ್ನಡ ಪರ ಸಂಘಟನೆಗಳು:

ವೇದಿಕೆಯಲ್ಲಿ ಜೆಂಡಾ ಉಂಚಾ ರೇಹಗಾ ಹಮಾರ ಹಿಂದಿ ಹಾಡು ಹಾಡಿದ್ದರಿಂದ ಕುಪಿತಗೊಂಡ ಕನ್ನಡ ಪರ ಸಂಘಟನೆಗಳ ಮುಖಂಡರು ತೀವ್ರ ಆಕ್ರೋಶ ವ್ಯಕ್ತಪಡಿಸಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಹಿಂದಿ ಹಾಡನ್ನು ಅಡಿರುವುದು ಖಂಡನೀಯ ಎಂದು ತರಾಟೆಗೆ ತೆಗೆದುಕೊಂಡಾಗ ಪರಿಸ್ಥಿತಿಯನ್ನು ಅರಿತ ಶಾಸಕ ಎಸ್‌.ಎನ್‌.ಸುಬ್ಬಾರೆಡ್ಡಿ ಮತ್ತು ತಹಸೀಲ್ದಾರ್‌ ವೈ.ರವಿ ಕನ್ನಡ ಪರ ಸಂಘಟನೆಗಳ ಮುಖಂಡರನ್ನು ಸಮಾಧಾನಪಡಿಸಿದರು.
ಚಿಕ್ಕಬಳ್ಳಾಪುರದಲ್ಲಿ ಮತ್ತೆ ಮಳೆ, ಹೆಚ್ಚಿದ ಬೆಳೆ ಹಾನಿ ಭೀತಿ: ಶೇಂಗಾ, ಸೂರ್ಯಕಾಂತಿ ಬೆಳೆ ಕಟಾವಿಗೆ ಮಳೆ ಅಡ್ಡಿ
ಕಾರ್ಯಕ್ರಮದಲ್ಲಿ ತಾಪಂ ಇಒ ಎಸ್‌.ಆನಂದ್‌, ಬಿಇಒ ಎಸ್‌.ಸಿದ್ದಪ್ಪ,ಪುರಸಭೆ ಅಧ್ಯಕ್ಷೆ ರೇಷ್ಮಾಬಾನು, ಉಪಾಧ್ಯಕ್ಷ ಎ.ಶ್ರೀನಿವಾಸ, ಸ್ಥಾಯಿ ಸಮಿತಿ ಅಧ್ಯಕ್ಷ ಎ.ನಂಜುಂಡಪ್ಪ, ಮುಖ್ಯಾಧಿಕಾರಿ ಕೆ.ಮಧುಕರ್‌, ವೃತ್ತ ನಿರೀಕ್ಷಕ ಡಿ.ಆರ್‌.ನಾಗರಾಜ್‌, ಪ್ರೌಢ ಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಆರ್‌.ಹನುಮಂತರೆಡ್ಡಿ, ರೇಷ್ಮೆ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಚಿನ್ನಕೈವಾರಮಯ್ಯ, ಕನ್ನಡ ಪರ ಸಂಘಟನೆಗಳ ಮುಖಂಡರಾದ ಬಿ.ಎ.ಬಾಬಾಜಾನ್‌, ಬಿಟಿಸಿ ಸೀನಾ, ಆರ್‌.ರವೀಂದ್ರ ಇದ್ದರು.
ಹೇಮಂತ್ ಕುಮಾರ್ ಎಸ್
ಲೇಖಕರ ಬಗ್ಗೆ
ಹೇಮಂತ್ ಕುಮಾರ್ ಎಸ್
ವಿಜಯ ಕರ್ನಾಟಕ ಡಿಜಿಟಲ್‌ ವಿಭಾಗದಲ್ಲಿ ಪತ್ರಕರ್ತನಾಗಿ 2022ರಿಂದ ಕಾರ್ಯನಿರ್ವಹಿಸುತ್ತಿರುವ ಹೇಮಂತ್ ಮಾಧ್ಯಮ ರಂಗಕ್ಕೆ ಅಧಿಕೃತ ಪ್ರವೇಶ ಆಗಿದ್ದು 2011ರಲ್ಲಿ ನ್ಯೂಸ್ ಚಾನೆಲ್ ಮೂಲಕ. ಅದಕ್ಕೂ ಹಿಂದಿನಿಂದ ವಾರಪತ್ರಿಕೆಗಳಿಗೆ ಪ್ರಚಲಿತ ವಿಜ್ಞಾನ-ತಂತ್ರಜ್ಞಾನಕ್ಕೆ ಸಂಬಂಧಿಸಿದ ಲೇಖನಗಳ ಬರವಣಿಗೆಯಿಂದ ಬರಹದ ನಂಟು ಬೆಳೆಸಿಕೊಂಡಿದ್ದರು. ಸಿನಿಮಾ, ಕ್ರೈಂ, ರಾಜಕೀಯ, ಮೆಟ್ರೊ, ಕನ್ನಡ ಮತ್ತು ಸಂಸ್ಕೃತಿ, ಶಿಕ್ಷಣ, ರಾಷ್ಟ್ರ-ಅಂತಾರಾಷ್ಟ್ರೀಯ ವಿದ್ಯಮಾನಗಳು ಹಾಗೂ ಜಿಲ್ಲೆಗಳಲ್ಲಿನ ಬೆಳವಣಿಗೆಗಳ ಬಗ್ಗೆ ಆಸಕ್ತಿ ವಿಸ್ತರಿಸಿಕೊಂಡಿದ್ದಾರೆ. ಟಿವಿ, ಪತ್ರಿಕೆ, ಡಿಜಿಟಲ್‌/ ವೆಬ್‌, ಕೆಲ ಸಮಯ ರೇಡಿಯೊ ಚಾನೆಲ್‌ನಲ್ಲೂ ತೊಡಗಿಸಿಕೊಂಡ ಅನುಭವಿರುವ ಇವರ ಮಂತ್ರ 'ಬದುಕು ನಿರಂತರ'. ಚಾರಣ, ರಂಗಭೂಮಿ, ಪ್ರವಾಸ, ಓದು,...ಹೀಗೆ ಒಂದಷ್ಟು ಅಭ್ಯಾಸ-ಹವ್ಯಾಸಗಳು ಜೊತೆಗಿವೆ.... ಇನ್ನಷ್ಟು ಓದಿ
ಕಾಮೆಂಟ್‌ ಮಾಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ