ಆ್ಯಪ್ನಗರ

ಖಿನ್ನತೆಗೊಳಗಾದ ಮಕ್ಕಳ ಬಗ್ಗೆ ಕಾಳಜಿ ವಹಿಸಿ

ಮಾನಸಿಕ ಖಿನ್ನತೆಗೊಳಗಾಗಿರುವ ಮಕ್ಕಳಿಗೆ ಪೊಷಕರು ಯಾವುದೇ ರೀತಿಯ ಒತ್ತಡಗಳನ್ನು ಹೇರದೆ, ಅವರನ್ನು ಪ್ರಶಾಂತವಾಗಿಡಲು ಬೀಡಬೇಕು. ಇಲ್ಲವಾದಲ್ಲಿಅಂತಹ ಮಕ್ಕಳು ಮತ್ತಷ್ಟು ಖಿನ್ನತೆಗೊಳಗಾಗಿ ಆತ್ಮಹತ್ಯೆಯಂಥ ದಾರಿ ಹಿಡಿಯಲು ಮುಂದಾಗುತ್ತಾರೆ ಎಂದು ವಕೀಲರ ಸಂಘದ ಅಧ್ಯಕ್ಷ ಎಸ್‌. ರಾಜಾರಾಂ ತಿಳಿಸಿದರು.

Vijaya Karnataka 15 Oct 2019, 3:16 pm
ಚಿಂತಾಮಣಿ: ಮಾನಸಿಕ ಖಿನ್ನತೆಗೊಳಗಾಗಿರುವ ಮಕ್ಕಳಿಗೆ ಪೊಷಕರು ಯಾವುದೇ ರೀತಿಯ ಒತ್ತಡಗಳನ್ನು ಹೇರದೆ, ಅವರನ್ನು ಪ್ರಶಾಂತವಾಗಿಡಲು ಬೀಡಬೇಕು. ಇಲ್ಲವಾದಲ್ಲಿಅಂತಹ ಮಕ್ಕಳು ಮತ್ತಷ್ಟು ಖಿನ್ನತೆಗೊಳಗಾಗಿ ಆತ್ಮಹತ್ಯೆಯಂಥ ದಾರಿ ಹಿಡಿಯಲು ಮುಂದಾಗುತ್ತಾರೆ ಎಂದು ವಕೀಲರ ಸಂಘದ ಅಧ್ಯಕ್ಷ ಎಸ್‌. ರಾಜಾರಾಂ ತಿಳಿಸಿದರು.
Vijaya Karnataka Web be concerned about depressed children
ಖಿನ್ನತೆಗೊಳಗಾದ ಮಕ್ಕಳ ಬಗ್ಗೆ ಕಾಳಜಿ ವಹಿಸಿ


ನಗರದ ಜೆಎಂಎಫ್‌ಸಿ ನ್ಯಾಯಾಲಯದ ಆವರಣದಲ್ಲಿತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ಹಾಗೂ ಆರೋಗ್ಯ ಇಲಾಖೆ ಸಂಯುಕ್ತಾಶ್ರಯದಲ್ಲಿಮಾನಸಿಕ ಆರೋಗ್ಯ ದಿನಾಚರಣೆ ಹಾಗೂ ಅಂತಾರಾಷ್ಟಿ್ರಯ ಹೆಣ್ಣುಮಗುವಿನ ದಿನಾಚರಣೆ ಕಾರ್ಯಕ್ರಮದ ಅಂಗವಾಗಿ ನಡೆದ ಕಾನೂನು ಅರಿವು ನೆರವು ಕಾರ್ಯಕ್ರಮದಲ್ಲಿಅವರು ಮಾತನಾಡಿರು.

ಕಾರ್ಯಕ್ರಮವನ್ನು 2ನೇ ಅಪರ ಜಿಲ್ಲಾಸತ್ರ ನ್ಯಾಯಾಲಯದ ನ್ಯಾಯಾಧೀಶ ಸರ್ವೋದಯ ಶೆಟ್ಟಿಗಾರ್‌ ಮತ್ತಿರರ ನ್ಯಾಯಾಧೀಶರು ಕಾರ್ಯಕ್ರಮ ಉದ್ಘಾಟನೆ ಮಾಡಿದರು.

ಹಿರಿಯ ಸಿವಿಲ್‌ ನ್ಯಾಯಾಧೀಶ ರಾಜೇಂದ್ರಕುಮಾರ್‌ ಕೆಎಂ, ಪ್ರಧಾನ ಸಿವಿಲ್‌ ನ್ಯಾಯಾಧೀಶ ಎಚ್‌.ಎ ಸಾತ್ವಿಕ್‌, ಅಪರ ಸಿವಿಲ್‌ ನ್ಯಾಯಾಧೀಶ ಜಿ.ಜೆ ಶಿವಕುಮಾರ್‌, ವಕೀಲರ ಸಂಘದ ಕಾರ್ಯದರ್ಶಿ ಶ್ರೀನಾಥ್‌, ಜಂಟಿ ಕಾರ್ಯದರ್ಶಿ ಕೆ.ಎ. ರಮೇಶ್‌, ಸದಸ್ಯೆ ರಚನಾಗೌಡ, ಹಿರಿಯ ವಕೀಲರಾದ ಎಸ್‌.ಆರ್‌. ಬೈರಾರೆಡ್ಡಿ, ಜಿ.ಎಂ. ಇಬ್ರಾಹಿಂ, ಕೆ.ವಿ. ವೆಂಕಟರಾಯಪ್ಪ, ಆರ್‌.ವಿ. ವೆಂಕಟರಾಯಪ್ಪ, ನಗರ ಆರೋಗ್ಯಕೇಂದ್ರ ವೈದ್ಯಾದಿಕಾರಿ ಬಸವಮಂಜೇಶ್‌, ನಗರ ಆರೋಗ್ಯಾಧಿಕಾರಿ ಶ್ರೀನಿವಾಸ ರೆಡ್ಡಿ ಮತಿತ್ತರರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ