ಆ್ಯಪ್ನಗರ

ಡಿಗ್ರಿ ಕಾಲೇಜಿನಲ್ಲಿಮಾತೃಭೋಜನ ಆರಂಭ

ಹಸಿದ ಹೊಟ್ಟೆಗಳ ಹಸಿವು ನೀಗಿಸುವ ಮಹತ್ವದ 'ಮಾತೃಭೋಜನ' ಕಾರ್ಯಕ್ರಮ ಗಣ್ಯರು ಮತ್ತು ಅತಿಥಿಗಳ ಸಮ್ಮುಖದಲ್ಲಿಚಾಲನೆಗೊಂಡಿದ್ದು, ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿಸರಕಾರದ ನೆರವಿಲ್ಲದೆ ದಾನಿಗಳ ನೆರವಿನಿಂದಲೇ ಪ್ರಾರಂಭವಾದ ವಿನೂತನ ಕಾರ್ಯಕ್ರಮ ಗಮನ ಸೆಳೆದಿದೆ. ಗ್ರಾಮಿಣ ಪ್ರದೇಶಗಳಿಂದ ಬರುವ ಬಡ ವಿದ್ಯಾರ್ಥಿಗಳಿಗೆ ಹೆಚ್ಚಿನ ಉಪಯೋಗವಾಗಲಿದೆ.

Vijaya Karnataka 18 Sep 2019, 4:21 pm
ಬಾಗೇಪಲ್ಲಿ: ಹಸಿದ ಹೊಟ್ಟೆಗಳ ಹಸಿವು ನೀಗಿಸುವ ಮಹತ್ವದ 'ಮಾತೃಭೋಜನ' ಕಾರ್ಯಕ್ರಮ ಗಣ್ಯರು ಮತ್ತು ಅತಿಥಿಗಳ ಸಮ್ಮುಖದಲ್ಲಿಚಾಲನೆಗೊಂಡಿದ್ದು, ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿಸರಕಾರದ ನೆರವಿಲ್ಲದೆ ದಾನಿಗಳ ನೆರವಿನಿಂದಲೇ ಪ್ರಾರಂಭವಾದ ವಿನೂತನ ಕಾರ್ಯಕ್ರಮ ಗಮನ ಸೆಳೆದಿದೆ. ಗ್ರಾಮಿಣ ಪ್ರದೇಶಗಳಿಂದ ಬರುವ ಬಡ ವಿದ್ಯಾರ್ಥಿಗಳಿಗೆ ಹೆಚ್ಚಿನ ಉಪಯೋಗವಾಗಲಿದೆ.
Vijaya Karnataka Web 17BPL2_10


ಪಟ್ಟಣದ ನ್ಯಾಷನಲ್‌ ಪದವಿ ಕಾಲೇಜಿನ ಭೌತಶಾಸ್ತ್ರ ಪ್ರಾಧ್ಯಾಪಕ ಪ್ರೊ. ಬಿ.ಪಿ.ವಿಜಯ್‌ಕುಮಾರ್‌ ಮಾತನಾಡಿ, ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿಯೇ ವಿಶೇಷವಾಗಿ ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳಿಗೆ ದಾನಿಗಳ ನೆರವಿನಿಂದ ಪ್ರತಿನಿತ್ಯ ಮಧ್ಯಾಹ್ನದ ಮಾತೃಭೋಜನ ಯೋಜನೆ ಪ್ರಾರಂಭಿಸಿ, ಹಸಿದ ಹೊಟ್ಟೆಗಳಿಗೆ ಊಟ ಉಣ ಬಡಿಸುವ ಹೆಜ್ಜೆ ಕ್ರಾಂತಿಕಾರಕವಾಗಿದೆ ಎಂದು ಶ್ಲಾಘಿಘಿಸಿದರು. ದಾನ ಮಾಡುವ ಗುಣಗಳು ಕೆಲವೇ ಮಂದಿಗೆ ಇರುತ್ತದೆ. ಸಾಕಾಗುವಷ್ಟು ಹಣ, ಐಶ್ವರ್ಯ ಹೊಂದಿದ್ದರೂ ದಾನ ಮಾಡುವ ಗುಣ ಬೆಳಿಸಿಕೊಂಡಿಲ್ಲ. ಕೆಲ ದಾನಿಗಳು ಬಡವರಿಗೆ, ಶೋಷಿತರಿಗೆ. ಕಷ್ಟ, ಆರೋಗ್ಯ ಸಮಸ್ಯೆ, ಪ್ರವಾಹಪೀಡಿತರಿಗೆ ದಾನ ನೀಡಿ ಮಾನವೀಯತೆ ಮೆರೆದಿದ್ದಾರೆ. ಇಂತಹಾ ಅಭೂತ ಪೂರ್ವ ಸೇವೆ ಎಂದಿಗೂ ಶಾಶ್ವತವಾಗಿ ಇರುತ್ತದೆ ಎಂದು ತಿಳಿಸಿದರು.

ಹಿರಿಯ ವಕೀಲ ಹಾಗೂ ಕನ್ನಡ ಸಾಹಿತ್ಯ ಪರಿಷತ್‌ ತಾಲೂಕು ಅಧ್ಯಕ್ಷ ಎ.ಜಿ.ಸುಧಾಕರ್‌ ಮಾತನಾಡಿ, ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿನಡೆಯುತ್ತಿರುವ ಪ್ರತಿ ಕಾರ್ಯಕ್ರಮಗಳು ವಿದ್ಯಾರ್ಥಿಗಳಿಗೆ ಮಾನವೀಯ ಮೌಲ್ಯ, ಬದುಕು ಕಟ್ಟಿಕೊಡುವಂತಹ ವಿಚಾರಗಳು ಕಲಿಸುತ್ತಿದೆ. ಕಾಲೇಜಿನ ವಿದ್ಯಾರ್ಥಿಗಳಿಗಾಗಿ ಅನೇಕ ಕಾರ್ಯಕ್ರಮಗಳು ಮಾಡಲಾಗುತ್ತಿದೆ. ಇದರಿಂದ ಅನೇಕ ಆಚಾರ ವಿಚಾರಗಳು, ಚಿಂತನ-ಮಂಥನಗಳು ನಡೆಯುತ್ತಿದೆ. ಈಗ ಒಂದು ಹಜ್ಜೆ ಮುಂದೆ ಹೋಗಿ ವಿದ್ಯಾರ್ಥಿಗಳಿಗೆ ಬಿಸಿಯೂಟ ಬಡಿಸುವ ಕಾರ್ಯ ಮೆಚ್ಚುವಂತೆ ಆಗಿದೆ ಎಂದರು.

ನಿವೃತ್ತ ಗ್ರೇಡ್‌-2 ತಹಶೀಲ್ದಾರ್‌ ಮುನಿರಾಮಯ್ಯ, ವಿದ್ಯುತ್‌ ಗುತ್ತಿಗೆದಾರ ಮಧು ತಲಾ 10 ಮೂಟೆ ಅಕ್ಕಿ ಮೂಟೆಗಳನ್ನು ನೀಡಲಾಗುವುದು ಎಂದು ಪ್ರಕಟಿಸಿದರು. ಮುಖ್ಯ ಪೊಲೀಸ್‌ ಪೇದೆ ಶಂಕರರೆಡ್ಡಿ ಕಾಲೇಜಿಗೆ ಮಿಕ್ಸಿ ಕೊಡುಗೆಯಾಗಿ ನೀಡಿದರು.

ಕಾಲೇಜಿನ ಪ್ರಿನ್ಸಿಪಾಲ್‌ ಪ್ರೊ.ವೈ.ನಾರಾಯಣ, ಸತ್ಯಸಾಯಿ ಧರ್ಮಶಾಲಾ ಟ್ರಸ್ಟ್‌ ಅಧ್ಯಕ್ಷ ಕೆ.ಎಂ.ನಾಗರಾಜು, ಪುರಸಭೆ ಮಾಜಿ ಸದಸ್ಯ ಮಹಮದ್‌ ಎಸ್‌ ನೂರುಲ್ಲಾ, ಸಂಯಮ ಶಿಕ್ಷಣ ಸಂಸ್ಥೆ ಮುಖ್ಯಸ್ಥ ಬಿ.ವಿ.ಕಿಶೋರ್‌ಕುಮಾರ್‌, ಕಾಲೇಜಿನ ಸಹ ಪ್ರಾಧ್ಯಾಪಕರಾದ ಡಾ.ಕೆ.ಎಂ.ನಯಾಜ್‌ ಅಹಮದ್‌,ಡಾ.ಬಿ.ಎನ್‌.ಪ್ರಭಾಕರ್‌, ಗ್ರಂಥಪಾಲಕ ಡಾ.ಸಿ.ಎಸ್‌.ವೆಂಕಟರಾಮರೆಡ್ಡಿ ದಾನಿಗಳಾದ ಎಚ್‌.ಎಸ್‌.ನರೇಂದ್ರ, ಮಧು, ಶಿವರಾಜ್‌, ಅಬ್ದುಲ್‌ ಕರೀಂಸಾಬ್‌ ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ