ಆ್ಯಪ್ನಗರ

ನರೇಗಾ ಫಲಾನುಭವಿಗಳಿಗೆ ಸೌಲಭ್ಯಗಳ ಪ್ಯಾಕೇಜ್‌

ನರೇಗಾ ಯೋಜನೆಯ ಫಲಾನುಭವಿಗಳಿಗೆ ಪ್ಯಾಕೇಜ್‌ ಮಾದರಿಯಲ್ಲಿಸೌಲಭ್ಯಗಳನ್ನು ಒದಗಿಸಲಾಗುತ್ತಿದ್ದು, ಗ್ರಾಮೀಣ ಜನರು ಅದನ್ನು ಬಳಸಿಕೊಂಡು ಅಭಿವೃದ್ಧಿ ಹೊಂದಬೇಕು ಎಂದು ಜಿಪಂ ಸಿಇಒ ಬಿ.ಫೌಜಿಯಾ ತರನ್ನುಮ್‌ ಹೇಳಿದರು.

Vijaya Karnataka 11 Oct 2019, 5:00 am
ಚಿಕ್ಕಬಳ್ಳಾಪುರ: ನರೇಗಾ ಯೋಜನೆಯ ಫಲಾನುಭವಿಗಳಿಗೆ ಪ್ಯಾಕೇಜ್‌ ಮಾದರಿಯಲ್ಲಿಸೌಲಭ್ಯಗಳನ್ನು ಒದಗಿಸಲಾಗುತ್ತಿದ್ದು, ಗ್ರಾಮೀಣ ಜನರು ಅದನ್ನು ಬಳಸಿಕೊಂಡು ಅಭಿವೃದ್ಧಿ ಹೊಂದಬೇಕು ಎಂದು ಜಿಪಂ ಸಿಇಒ ಬಿ.ಫೌಜಿಯಾ ತರನ್ನುಮ್‌ ಹೇಳಿದರು.
Vijaya Karnataka Web benefits package for narega beneficiaries
ನರೇಗಾ ಫಲಾನುಭವಿಗಳಿಗೆ ಸೌಲಭ್ಯಗಳ ಪ್ಯಾಕೇಜ್‌


ಜಿಲ್ಲಾಡಳಿತ ಭವನದ ಆವರಣದಲ್ಲಿಜಿಲ್ಲಾಡಳಿತ, ಜಿಪಂ ವತಿಯಿಂದ ಗುರುವಾರ ಹಮ್ಮಿಕೊಂಡಿದ್ದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ (ನರೇಗಾ) ಯೋಜನೆ ಬಗ್ಗೆ ಅರಿವು ಮೂಡಿಸಲು ರೋಜ್‌ಗಾರ್‌ ವಾಹಿನಿಗೆ ಚಾಲನೆ ನೀಡಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿನರೇಗಾ ಯೋಜನೆ ಬಗ್ಗೆ ಜನರಿಗೆ ಪರಿಣಾಮಕಾರಿಯಾಗಿ ತಿಳಿಸುವ ಸಲುವಾಗಿ ಪ್ರಚಾರ ವಾಹಿನಿಗಳು ಪ್ರತಿ ತಾಲೂಕಿನ ಗ್ರಾಪಂಗಳಿಗೆ ಭೇಟಿ ನೀಡಿ, ಸಾರ್ವಜನಿಕರಿಗೆ ಅರಿವು ಮೂಡಿಸಲಾಗುತ್ತದೆ ಎಂದು ಹೇಳಿದರು.

ಗ್ರಾಮ ಅಭಿವೃದ್ಧಿ:
ಗ್ರಾಮ ಮಟ್ಟದಲ್ಲಿಸಮುದಾಯದ ಕಾಮಗಾರಿಗಳಾದ ಕೆರೆ, ಗೋಕಟ್ಟೆಗಳಲ್ಲಿಹೂಳೆತ್ತುವುದು, ಕೊಳವೆಬಾವಿ ಮರುಪೂರ್ಣ ಘಟಕ, ಆಟದ ಮೈದಾನ, ರೈತರ ಕಣ, ಚೆಕ್‌ ಡ್ಯಾಂ, ರೈತರ ಹೊಲಗಳಿಗೆ ಹೋಗಲು ದಾರಿ, ಕೃಷಿ ಹೊಂಡ, ಅಂಗನವಾಡಿ ಕೇಂದ್ರ, ಗ್ರಾಮೀಣ ಗೋದಾಮು, ಸ್ಮಶಾನ ಅಭಿವೃದ್ಧಿ, ಉದ್ಯಾನವನ ನಿರ್ಮಾಣ, ಕಾಂಕ್ರಿಟ್‌ ರಸ್ತೆ, ಕೃಷಿ ಇಲಾಖೆಯ ಕಾಮಗಾರಿಗಳು, ತೋಟಾಗಾರಿಕೆ ಬೆಳೆಗಳು, ರೇಷ್ಮೆ ಬೆಳೆಗಳು ಹಾಗೂ ಅರಣ್ಯ ಇಲಾಖೆ ಕಾಮಗಾರಿಗಳು ಸೇರಿದಂತೆ ಇನ್ನಿತರ ಕಾಮಗಾರಿಗಳು ಕೈಗೆತ್ತಿಕೊಳ್ಳಲಾಗಿದೆ ಎಂದು ತಿಳಿಸಿದರು.

ಸಮಾನ ಕೆಲಸಕ್ಕೆ ಸಮಾನ ವೇತನ: ಪ್ರತಿ ಕುಟುಂಬಕ್ಕೆ 100 ದಿನಗಳ ಕಾಲ ಉದ್ಯೋಗವನ್ನು ಒದಗಿಸುವ ಯೋಜನೆಯಲ್ಲಿಗಂಡು-ಹೆಣ್ಣು ಎಂಬ ಭೇದ ಮಾಡದೆ ಸಮಾನ ಕೆಲಸಕ್ಕೆ ಸಮಾನ ವೇತನ ಎಂಬ ತತ್ತ$್ವದಡಿ ಪ್ರತಿಯೊಬ್ಬರಿಗೂ ದಿನಕ್ಕೆ 249 ರೂ.ಗಳನ್ನು ಕೂಲಿಯಾಗಿ ನೀಡಲಾಗುತ್ತದೆ ಎಂದು ತಿಳಿಸಿದರು.

ಉದ್ಯೋಗ ಕಾರ್ಡ್‌ಗೆ ಅರ್ಜಿ ಸಲ್ಲಿಸಿ: ಉದ್ಯೋಗ ಚೀಟಿಗೆ ಅರ್ಜಿ ಸಲ್ಲಿಸಿದ ಕೂಡಲೇ ಗ್ರಾಪಂ ವತಿಯಿಂದ ಉಚಿತವಾಗಿ ಉದ್ಯೋಗ ಕಾರ್ಡ್‌ ನೀಡಲಾಗುತ್ತದೆ. ಗ್ರಾಮದಲ್ಲಿಕೆಲಸಬೇಕೆಂದು ಒಂದು ಅರ್ಜಿ ಸಲ್ಲಿಕೆ ಮಾಡಬೇಕು. ಅರ್ಜಿ ನೀಡಿದ 15 ದಿನಗಳಲ್ಲಿಕೆಲಸ ಕೊಡದಿದ್ದಲ್ಲಿನಿರುದ್ಯೋಗ ಭತ್ಯೆ ಕೇಳಿ ಪಡೆಯಬೇಕು. ವೈಯಕ್ತಿಕ ಫಲಾನುಭವಿಗಳು ಪ್ರಸಕ್ತ ಸಾಲಿನಲ್ಲಿವರ್ಷದಲ್ಲಿಗರಿಷ್ಠ 2 ಲಕ್ಷದವರೆಗೂ ಈ ಯೋಜನೆಯಡಿ ಸಹಾಯಧನ ಪಡೆಯಬಹುದು ಎಂದರು.

ಯೋಜನೆ ಸೌಲಭ್ಯವನ್ನು ಪಡೆಯುವಲ್ಲಿಸಮಸ್ಯೆಗಳು ಎದುರಾದರೆ ದೂರವಾಣಿ 18004258666 ಸಂಪರ್ಕಿಸಿ ಎಂದರು.

ಜಿಪಂ ಉಪ ಕಾರ್ಯದರ್ಶಿ ನೋಮೇಶ್‌ ಕುಮಾರ್‌ ಮತ್ತಿತರರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ