ಆ್ಯಪ್ನಗರ

ಗೌರಿಬಿದನೂರಿಗೂ ಬಂತಾ ಹಕ್ಕಿ ಜ್ವರ..? ಕಾದಲವೇಣಿ ಕೆರೆಯಲ್ಲಿ 60ಕ್ಕೂ ಹೆಚ್ಚು ಕೊಕ್ಕರೆ ಸಾವು

ದೇಶಾದ್ಯಂತ ಹಕ್ಕಿ ಜ್ವರದ ಭೀತಿ ಎದುರಾಗಿದ್ದು, ಚಿಕ್ಕಬಳ್ಳಾಪುರಕ್ಕೂ ಹಕ್ಕಿ ಜ್ವರ ಕಾಲಿಟ್ಟಿದೆಯಾ ಎಂಬ ಅನುಮಾನ ಮೂಡುತ್ತಿದೆ. ಹೌದು, ಗೌರಿಬಿದನೂರು ತಾಲೂಕಿನ ಕಾದಲವೇಣಿ ಗ್ರಾಮದ ಕೆರೆಯಲ್ಲಿ ಸುಮಾರು 60ಕ್ಕೂ ಹೆಚ್ಚು ಕೊಕ್ಕರೆಗಳು ಸಾವನ್ನಪ್ಪಿದ್ದು, ಗ್ರಾಮಸ್ಥರಲ್ಲಿ ಹಕ್ಕಿಜ್ವರದ ಭೀತಿ ಆವರಿಸಿದೆ.

Vijaya Karnataka Web 21 Jan 2021, 8:25 pm
ಗೌರಿಬಿದನೂರು (ಚಿಕ್ಕಬಳ್ಳಾಪುರ): ತಾಲೂಕಿನ ಕಾದಲವೇಣಿ ಗ್ರಾಮದ ಕೆರೆಯಲ್ಲಿ ಸುಮಾರು 60ಕ್ಕೂ ಹೆಚ್ಚು ಕೊಕ್ಕರೆಗಳು ಸಾವನ್ನಪ್ಪಿದ್ದು ಕೆರೆಯ ಮಧ್ಯಭಾಗದಲ್ಲಿ ಇರುವ ಜಾಲಿ ಗಿಡದಲ್ಲಿ ನೇತಾಡುತ್ತಿವೆ. ಇದರಿಂದ ಗ್ರಾಮಸ್ಥರಲ್ಲಿ ಹಕ್ಕಿ ಜ್ವರದ ಭೀತಿ ಆವರಿಸಿದೆ.
Vijaya Karnataka Web Stork
ಸಾಂದರ್ಭಿಕ ಚಿತ್ರ


ಕಳೆದೊಂದು ವಾರದ ಹಿಂದೆ ಚಿಕ್ಕಬಳ್ಳಾಪುರ ಗೋಪಾಲಕೃಷ್ಣ ಅಮಾನಿ ಕೆರೆಯಲ್ಲಿ ವಲಸೆ ಬಂದ 2 ವಿದೇಶಿ ಹಕ್ಕಿಗಳು ಸಾವನ್ನಪ್ಪಿದ್ದು, ಇನ್ನೆರಡು ಹಕ್ಕಿಳು ಅಸ್ಪಸ್ಥ ಸ್ಥಿತಿಯಲ್ಲಿ ಬಿದ್ದಿದ್ದು ಚಿಕ್ಕಬಳ್ಳಾಪುರಕ್ಕೂ ಹಕ್ಕಿಜ್ವರ ಪ್ರವೇಶಿಸಿದೆಯಾ ಎಂಬ ಆತಂಕವನ್ನು ಹುಟ್ಟುಹಾಕಿತ್ತು. ಅದೇ ರೀತಿ ತಾಲೂಕಿನ ಕಾದಲವೇಣಿ ಗ್ರಾಮದ ಕೆರೆಯಲ್ಲಿ ವಲಸೆ ಬಂದಿರುವ ಕೊಕ್ಕರೆಗಳು ಸಾವನ್ನಪ್ಪಿರುವುದು ತಾಲೂಕಿನ ಜನತೆಯಲ್ಲಿ ಆತಂಕಕ್ಕೆ ಎಡೆಮಾಡಿಕೊಟ್ಟಿದೆ.

ಸ್ಥಳಕ್ಕೆ ಗ್ರಾಮ ಪಂಚಾಯಿತಿ ಅಧಿಕಾರಿಗಳು ಪಶುವೈದ್ಯಾಧಿಕಾರಿಗಳು ಹಾಗೂ ತಾಲೂಕು ಆರೋಗ್ಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೆರೆಯ ಮಧ್ಯ ಭಾಗದಲ್ಲಿ ಕೊಕ್ಕರೆಗಳು ಸಾವನ್ನಪ್ಪಿರುವುದರಿಂದ ತೆಪ್ಪದ ಮೂಲಕ ಅಧಿಕಾರಿಗಳು ತೆರಳಿ ಮೃತ ಪಟ್ಟಿರುವ ಕೊಕ್ಕರೆಗಳನ್ನು ಸಂಗ್ರಹಿಸಿಕೊಂಡು ಬೆಂಗಳೂರಿನ ಹೆಬ್ಬಾಳದ ಪರೀಕ್ಷಾ ಕೇಂದ್ರಕ್ಕೆ ರವಾನಿಸಿದ್ದಾರೆ.
ಚಿಕ್ಕಬಳ್ಳಾಪುರ: ಹೆತ್ತ ಮಗುವನ್ನು ಮಾರಾಟ ಮಾಡಿ ಜೈಲು ಪಾಲಾದ ಪಾಪಿ ತಾಯಿಹಕ್ಕಿ ಜ್ವರದ ಆತಂಕ ಬೇಡ
ಕೊಕ್ಕರೆಗಳು 300 ರಿಂದ 400 ಕಿ.ಮೀ. ದೂರದಿಂದ ಸಂತಾನೋತ್ಪತ್ತಿಗಾಗಿ ವಲಸೆ ಬಂದಿರುತ್ತವೆ. ಇಷ್ಟು ಕಿಮೀ ಕ್ರಮಿಸಿದ ಬಳಿಕ ಆಯಾಸ ಹಾಗೂ ಆಹಾರದ ಅಭಾವ ಮತ್ತು ವಾತಾವರಣದ ವೈಪರೀತ್ಯದಿಂದ ಕೊಕ್ಕರೆಗಳು ಸಾವನ್ನಪ್ಪಿರಬಹುದು ಅಥವಾ ಕೊಕ್ಕರೆ ರೋಗದಿಂದ ಸಾವನ್ನಪ್ಪಿರಬಹುದು ಎಂದು ಪಶು ವೈದ್ಯಕೀಯ ಇಲಾಖೆಯ ಸಹಾಯಕ ನಿರ್ದೇಶಕ ಡಾ.ರಾಘವೇಂದ್ರ ತಿಳಿಸಿದ್ದಾರೆ.
ಗ್ರಾಮದಲ್ಲಿ ಇದೇ ಮೊದಲ ಬಾರಿಗೆ ಕೊಕ್ಕರೆಗಳು ಸಾವನ್ನಪ್ಪಿರುವುದು ರೈತರಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದೆ, ಈ ಹಿಂದೆ ಎಂದೆಂದೂ ಸಹ ಈ ರೀತಿಯ ಅವಘಡ ಸಂಭವಿಸಿರಲಿಲ್ಲ. ಇದೇ ಮೊದಲ ಬಾರಿಗೆ ಈ ರೀತಿ ಕೊಕ್ಕರೆಗಳು ಸಾವನ್ನಪ್ಪಿದೆ. ಇದರಿಂದ ಬೇರೆ ಜಾತಿಯ ಪಕ್ಷಿಗಳಿಗೆ ತೊಂದರೆಯಾಗುತ್ತದೋ ಎಂಬ ಆತಂಕ ಗ್ರಾಮಸ್ಥರಲ್ಲಿ ಮನೆ ಮಾಡಿದೆ
ಬಾಲಕೃಷ್ಣ, ಕಾದಲವೇಣಿ ಗ್ರಾಮಸ್ಥ
ಇಡೀ ರಾಜ್ಯದಲ್ಲಿ ಎಲ್ಲೂ ಹಕ್ಕಿ ಜ್ವರ ಕಾಣಿಸಿಕೊಂಡಿಲ್ಲ, ಈ ನಿಟ್ಟಿನಲ್ಲಿ ಹಕ್ಕಿ ಜ್ವರದ ಬಗ್ಗೆ ಆತಂಕ ಬೇಡ, ಜಿಲ್ಲೆಯಲ್ಲೂ ಸಹ ಎಲ್ಲೂ ಹಕ್ಕಿ ಜ್ವರ ದಾಖಲಾಗಿಲ್ಲ. ಸಾವನ್ನಪ್ಪಿರುವ ಕೊಕ್ಕರೆಗಳನ್ನು ಬೆಂಗಳೂರು ಹೆಬ್ಬಾಳದ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. 24 ಗಂಟೆಗಲ್ಲಿ ವರದಿ ಬರಲಿದೆ, ಒಟ್ಟಾರೆ ಹಕ್ಕಿ ಜ್ವರದ ಬಗ್ಗೆ ಯಾವುದೇ ಆತಂಕ ಪಡಬೇಕಿಲ್ಲ ಎಂದು ಪಶು ವೈದ್ಯಕೀಯ ಇಲಾಖೆಯ ಸಹಾಯಕ ನಿರ್ದೇಶಕ ಡಾ.ರಾಘವೇಂದ್ರ ತಿಳಿಸಿದ್ದಾರೆ.
ಚಿಕ್ಕಬಳ್ಳಾಪುರ: ದರಿದ್ರ ಎಂದು ವಿಶೇಷ ಚೇತನ ಹೆಣ್ಣು ಮಗುವಿನ ಕತ್ತು ಕೊಯ್ದು ಹತ್ಯೆ ಮಾಡಿದ ಪಾಪಿ ಚಿಕ್ಕಪ್ಪ
ಕಾದಲವೇಣಿ ಕೆರೆಯಲ್ಲಿ 60 ರಿಂದ 70 ಕೊಕ್ಕರೆಗಳು ಸಾವನ್ನಪ್ಪಿದ್ದು, ಇದರಿಂದ ಗ್ರಾಮಸ್ಥರಲ್ಲಿ ಆತಂಕ ಮೂಡಿರುವುದು ಸಹಜ ಅದರೆ ಯಾವ ಕಾರಣಕ್ಕೆ ಸಾವನ್ನಪ್ಪಿದೆ ಎಂಬುದನ್ನು ತಿಳಿದುಕೊಳ್ಳಲು ಮೃತ ಪಟ್ಟಿರುವ ಕೊಕ್ಕರೆಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿದೆ. ವರದಿ ಬಂದ ತಕ್ಷಣ ಕಾರಣ ತಿಳಿಸಲಾಗುವುದು.
ಮಂಜುನಾಥ್‌, ವಲಯ ಅರಣ್ಯಾಧಿಕಾರಿ, ಗೌರಿಬಿದನೂರು

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ